ಕ್ರೀಡಾಪಟುಗಳಿಗೆ ಶುಭ ಕೋರಿದ ಕಾಂಗ್ರೆಸ್ ನಾಯಕಿ ಶಿವಲೀಲಾ ಕುಲಕರ್ಣಿ
ಧಾರವಾಡ: ಇಲ್ಲಿಯ ಕರ್ನಾಟಕ ವಿಶ್ವವಿದ್ಯಾಲಯ ಮೈದಾನದಲ್ಲಿ ಶುಕ್ರವಾರ ಆರಂಭವಾದ ಧಾರವಾಡ ಪ್ರೀಮಿಯರ್ ಲೀಗ್ (ಡಿಪಿಎಲ್)ಸಿಸನ್ 5ರ ಟೂರ್ನಿಗೆ ಕಾಂಗ್ರೆಸ್ ನಾಯಕಿ ಶಿವಲೀಲಾ ಕುಲಕರ್ಣಿ ಚಾಲನೆ ನೀಡಿದರು.
ನಂತರ ಮಾತನಾಡಿ, ಕ್ರೀಡೆಗೆ ಮೊದಲಿನಿಂದಲು ನಮ್ಮ ಪತಿ ವಿನಯ ಕುಲಕರ್ಣಿ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಮುಂದೆಯೂ ಸಹ ಅದೇ ರೀತಿ ನಮ್ಮ ಸಹಾಯ ಸಹಕಾರ ಇರುತ್ತದೆ. ಟೂರ್ನಿಯಲ್ಲಿ ಎಲ್ಲರೂ ಕ್ರೀಡಾ ಮನೋಭಾವದಿಂದ ಆಟವಾಡಿ ಹಾಗೂ ಎಲ್ಲ ತಂಡದ ಆಟಗಾರರಿಗೆ ಒಳ್ಳೆಯದಾಗಲಿ ಎಂದು ಶುಭಕೋರಿದರು.
ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿವೆ. ಮೊದಲ ಬಹುಮಾನ 1.50ಲಕ್ಷ ಈರಣ್ಣ ಮಲ್ಲಿಗವಾಡ, 2ನೇ ಬಹುಮಾನ 1ಲಕ್ಷ ಸಮೀ ಮತ್ತು ಲಖನ್ ನೀಡಿದ್ದಾರೆ. ಪ್ರತಿ ಪಂದ್ಯಕ್ಕೂ ಪಂದ್ಯ ಶ್ರೇಷ್ಠ ಪಶಸ್ತಿ ನೀಡಲಾಗುವುದು. ಟೂರ್ನಿಯಲ್ಲಿ ಸರಣಿ ಶ್ರೇಷ್ಟ ಆದವರಿಗೆ ಟಿವಿ, ಉತ್ತಮ ಬೌಲರ ಹಾಗೂ ಬಾಲಿಂಗ್ ಮಾಡಿದವರಿಗೆ ಸೈಕಲ್ ವಿತರಿಸಲಾಗುವುದು. ಅಲ್ಲದೇ ಪ್ರೇಕ್ಷಕರಿಗಾಗಿ ಒಂದು ಲಕ್ಕಿ ಡ್ರಾ ಮಾಡಲಾಗುವುದು ಅದರಲ್ಲಿ ವಿಜೇತರಿಗೂ ಸಹ ಸೈಕಲ್ ನೀಡಲಾಗುವುದು ಎಂದು ಡಿಪಿಎಲ್ ಆಯೋಜಕರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆಸಿಡಿ ಕಾಲೇಜ್ ಪ್ರಿನ್ಸಿಪಾಲ್ ಕರಡೋಣಿ, ಇಕೋ ವಿಲೇಜ್ ಮುಖ್ಯಸ್ಥ ಪಿ.ವಿ.ಹಿರೇಮಠ, ಚಂದ್ರಶೇಖರ ಬೈರಪ್ಪನವರ, ಕಲ್ಲಪ್ಪ ಶಿಗಿಹಳ್ಳಿ, ಆಯೋಜಕ ವರುಣ ಸಾಂಬ್ರಾಣಿ, ಶಿಗ್ಲಪ್ಪ ಹೆಗಡೆ, ಸಾಗರ, ಶೀವು, ಮುತ್ತು, ಸಂತೋಷ, ಪಾಲಿಕೆ ಸದಸ್ಯರಾದ ಶಂಬುಗೌಡ ಸಾಲಮನಿ, ನಿತೀನ ಇಂಡಿ, ಉದ್ಯಮಿ ನಾಗರಾಜ ಕೊಟಗಿ, ಮಹೇಶ ಬೆಣ್ಣಿ, ರತ್ನಾಕರ ಶೆಟ್ಟಿ, ಶ್ರೀಕಂಠ ಶೇಟ್, ಅಶೋಕ ಶೆಟ್ಟ, ಮಂಜುನಾಥ, ಶಿವರಾಜ ಶೆಟ್ಟಿ ಸೇರಿದಂತೆ ಡಿಪಿಎಲ್ ಸದಸ್ಯರು ಹಾಗೂ ತಂಡದ ಮಾಲೀಕರು, ಆಟಗಾರರು ಅಲ್ಲದೇ ನೂರಾರು ಜನ ಪ್ರೇಕ್ಷಕರು ಇದ್ದರು.