ಹುಬ್ಬಳ್ಳಿ-ಧಾರವಾಡ ಸುದ್ದಿ

ಕಮಲ ಇಳಿಸಿ ‘ತೆನೆ’ ಹೊತ್ತ ಹಾಲಹರವಿ

ಚುನಾವಣೆ ಹೊತ್ತಲ್ಲಿ ಬಿಜೆಪಿಗೆ ಆಘಾತ

ಹುಬ್ಬಳ್ಳಿ: ಹು.ಧಾ.ಪೂರ್ವ ಮೀಸಲು ಕ್ಷೇತ್ರದ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ತೆನೆ ಹೊರಲಿದ್ದಾರೆ ಎಂಬ ವದಂತಿಗಳಿಗೆ ಕೊನೆಗೂ ಇಂದು ಸಿದ್ಧಾರೂಢ ಅಜ್ಜನ ಜಾತ್ರೆಯ ದಿನವೇ ಪೂರ್ಣ ವಿರಾಮ ಬಿದ್ದಿದ್ದು,ಇಂದು ಅಧಿಕೃತವಾಗಿ ಬೆಂಗಳೂರಿನಲ್ಲಿ ಕಮಲ ತ್ಯಜಿಸಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ.


2008ರಲ್ಲಿ ಬಿಜೆಪಿಯಿಂದ ಪೂರ್ವ ಕ್ಷೇತ್ರದಿಂದ ಆಯ್ಕೆಯಾಗಿದ್ದ ಹಾಲಹರವಿ ಅವರು 2013ರಲ್ಲಿ ಪ್ರಸಾದ ಅಬ್ಬಯ್ಯ ಅವರ ಎದುರು ಪರಾಭವಗೊಂಡಿದ್ದರು. ಕಳೆದ 2008ರಲ್ಲಿ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಪೂರ್ವ ಕ್ಷೇತ್ರದಲ್ಲಿ ನಿರ್ಣಾಯಕವಾಗಿಯೇ ಇರುವ ಮಾದಿಗ ಸಮುದಾಯದವರಾದ ಹಾಲಹರವಿ ಕಳೆದ 2-3 ವರ್ಷಗಳಿಂದ ಪಕ್ಷದಲ್ಲಿ ಸಕ್ರೀಯರಾಗಿದ್ದರಲ್ಲದೇ ಈ ಬಾರಿಯ ಪೂರ್ವ ಕ್ಷೇತ್ರದ ಆಕಾಂಕ್ಷಿಯೂ ಆಗಿದ್ದರು.

ಪಕ್ಷದ ಧುರೀಣರ ನಿರ್ಲಕ್ಷ್ಯ ಧೋರಣೆಗೆ ಬೇಸತ್ತು ಕೆಲ ದಿನಗಳ ಹಿಂದೆ ಕುಮಾರಸ್ವಾಮಿಯವರ ಪಕ್ಷದ ಬಾಗಿಲು ತಟ್ಟಿದ್ದರು. ಇತ್ತೀಚೆಗೆ ಎರಡು ಸಲ ಬಂದಾಗಲೂ ಅವರನ್ನು ಭೆಟ್ಟಿಯಾಗುವ ಮೂಲಕ ಸುದ್ದಿಯಾಗಿದ್ದರೂ ಯಾವ ಮುಖಂಡರು ಅವರ ಮನವೊಲಿಸುವ ಯತ್ನ ಮಾಡದ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತೆನೆ ಹೊತ್ತರು.


ಕುಮಾರಸ್ವಾಮಿಯವರು ಹಾಲಹರವಿ ಸಹಿತ ಪ್ರಮುಖರನ್ನು ಪಕ್ಷಕ್ಕೆ ಸ್ವಾಗತಿಸಿದರು. ರಾಜ್ಯ ಉಪಾಧ್ಯಕ್ಷ ತಬ್ರೇಜ್ ಸಂಶಿ, ರಾಜ್ಯ ವಕ್ತಾರ ಎಸ್.ಎಸ್.ಶಂಕ್ರಣ್ಣ, ಮಹಾನಗರ ಅಧ್ಯಕ್ಷ ಗುರುರಾಜ ಹುಣಸೀಮರದ ತುಳಸಿಕಾಂತ ಖೋಡೆ,ಜಾಪರ್ ಕ್ಯಾಲಕೊಂಡ ಸಹಿತ ಅನೇಕರ ಹುಬ್ಬಳ್ಳಿ ಜೆಡಿಎಸ್ ಮುಖಂಡರು ಇದ್ದು ಅವರಿಗೆ ಪೂರ್ವ ಕ್ಷೇತ್ರದ ಜೆಡಿಎಸ್ ಟಿಕೆಟ್ ಖಚಿತವಾದಂತಾಗಿದೆ. ಅಲ್ಲದೇ ಇವರು ಬಿಜೆಪಿಗೆ ಮಗ್ಗುಲ ಮುಳ್ಳಾಗುವ ಸಾಧ್ಯತೆಗಳಿವೆ.

administrator

Related Articles

Leave a Reply

Your email address will not be published. Required fields are marked *