ಗದಗ: ‘ಒಲಿದ ಜೀವ ಜತೆಯಿರಲು ಬಾಳು ಸುಂದರ’ ಎಂದು ಗುನುಗುನಿಸುತ್ತಿದ್ದ ಮಹಿಳಾ ಪಿಎಸ್ಐ ಮಗಳೊಬ್ಬಳು ಪ್ರಿಯಕರನೊಂದಿಗೆ ಮನೆ ಬಿಟ್ಟು ಹೋಗಿ ಹಸೆ ಮಣೆ ಏರಿದ ಪ್ರಕರಣವೀಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಅಂಗಳಕ್ಕೆ ಬಂದಿದೆ.
ಪಿಎಸ್ಐ ಆಗಿರುವ ನನ್ನ ತಾಯಿಯೇ ಕೊಲೆ ಬೆದರಿಕೆ ಹಾಕುತ್ತಿದ್ದು, ನಮ್ಮನ್ನು ಬದುಕಲು ಬಿಡಲ್ಲ. ನಮಗೆ ರಕ್ಷಣೆ ಕೊಡಿ ಎಂದು ತಾಯಿ ವಿರುದ್ಧವೇ ಯುವತಿ ಎಸ್ಪಿಗೆ ದೂರು ಕೊಟ್ಟಿದ್ದಾಳೆ.
ತಾನು ಹಾಗೂ ಕೀರ್ತನಾಥ ೭ ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದು, ಈ ಮದುವೆಗೆ ಮನೆಯಲ್ಲಿ ಒಪ್ಪಿಗೆ ಇರಲಿಲ್ಲ. ಹಾಗಾಗಿ ನಾವು ಬೇರೆಡೆ ಹೋಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇವೆ ಎಂದು ರಾಜೀವ್ ಗಾಂಧಿ ಠಾಣೆಯ ಎಸ್ಐ ರೇಣುಕಾ ಮುಂಡೆವಾಡಗಿ ಮತ್ತು ಅಗ್ನಿಶಾಮಕ ಹವಾಲ್ದಾರ್ ರಮೇಶ್ ದಂಪತಿಯ ಓರ್ವಳೆ ಪುತ್ರಿ ಮೇಘಾ ದೂರಿನಲ್ಲಿ ಹೇಳಿದ್ದಾಳೆ. ೬ ತಿಂಗಳ ಹಿಂದೆ ಮನೆಬಿಟ್ಟು ಹೋಗಿ ಕೀರ್ತನಾಥ ಎಂಬಾತನೊ0ದಿಗೆ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿದ್ದಾಳೆ. ಈ ವಿಚಾರ ತಂದೆ ತಾಯಿಗೆ ಗೊತ್ತಾಗಿ ಬೆದರಿಕೆ ಹಾಕಿದ್ದಾರೆ.
ಜಾತಿ ಬೇರೆ ಬೇರೆ ಆದ ಕಾರಣ ಮದುವೆಗೆ ಕುಟುಂಬಸ್ಥರು ಒಪ್ಪಿರಲಿಲ್ಲ ಇದನ್ನರಿತ ಮೇಘಾ ಮನೆ ಬಿಟ್ಟು ಪ್ರಿಯಕರನೊಂದಿಗೆ ಹೋಗಿ ೨೦೨೦ರ ಡಿಸೆಂಬರ್ ೨ರಂದು ಇವರಿಬ್ಬರೂ ಮದುವೆ ಮಾಡಿಕೊಂಡಿದ್ದು, ಮುಂಡರಗಿಯ ಸಬ್ ರಿಜಿಸ್ಟರ್ ಕಚೇರಿಯಲ್ಲಿ ೨೦೨೧ರ ಜನವರಿ ೫ರಂದು ರಿಜಿಸ್ಟರ್ ಮಾಡಿಸಿದ್ದರು. ಬಳಿಕ ಗೋವಾದಲ್ಲಿ ತಂಗಿದ್ದರು. ಈ ವಿಚಾರ ತಿಳಿದ ಮೇಘಾ ಪಾಲಕರು ಕರೆ ಮಾಡಿ ಬೆದರಿಕೆ ಹಾಕಿದ್ದರಿಂದ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರAತೆ. ಇದೀಗ ಊರಿಗೆ ವಾಪಸ್ ಬಂದಿದ್ದು ರಕ್ಷಣೆಗೆ ಎಂದು ಯುವತಿ ಎಸ್ಪಿ ಯತೀಶ್ ಅವರಿಗೆ ಮನವಿ ಮಾಡಿದ್ದು ರಕ್ಷಣೆ ನೀಡುವ ಭರವಸೆ ನೀಡಿದ್ದಾರೆ.