ಹುಬ್ಬಳ್ಳಿ-ಧಾರವಾಡ ಸುದ್ದಿ
ಬೆಳಗಾವಿ ಗೋಲ್ಡ ಸ್ಮಗ್ಲಿಂಗ್ ಪ್ರಕರಣ ಮಾಹಿತಿ ಜಾಲಾಡುತ್ತಿರುವ ಸಿಐಡಿ

ಬೆಳಗಾವಿ ಗೋಲ್ಡ ಸ್ಮಗ್ಲಿಂಗ್ ಪ್ರಕರಣ ಮಾಹಿತಿ ಜಾಲಾಡುತ್ತಿರುವ ಸಿಐಡಿ

ಹುಬ್ಬಳ್ಳಿ : ಬೆಳಗಾವಿ ಯಮಕನಮರಡಿಯಲ್ಲಿ ನಡೆದಿದ್ದ 4.9 ಕೆಜಿ ಗೋಲ್ಡ ಸ್ಮಗ್ಲಿಂಗ್ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ತಂಡ ನಗರದಲ್ಲಿ ಹಲವು ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದ್ದು ಸ್ಮಗ್ಲಿಂಗ ಚಿನ್ನ ಖರೀದಿಸಿದ್ದ ದುರ್ಗದ ಬೈಲ್ ಬಳಿಯ ಜೆಡಿಯನ್ನೂ ಸಹ ವಶಕ್ಕೆ ಪಡೆದಿದೆ ಎನ್ನಲಾಗಿದೆ.
ಪ್ರಕರಣದ ಕಿಂಗ್ ಪಿನ್ ಎನ್ನಲಾದ ಕಿರಣ ವೀರನಗೌಡರ ಅವರನ್ನು ಸಹ ತಂಡ ತೀವ್ರ ವಿಚಾರಣೆ ನಡೆಸಿದ್ದು ಯಾವುದೇ ವಿಷಯ ಬಾಯಿ ಬಿಟ್ಟಿಲ್ಲ ಎನ್ನಲಾಗುತ್ತಿದೆ.
ಈ ಮದ್ಯೆ ಘಟನೆ ನಡೆದಾಗ ಬೆಳಗಾವಿ ಐಜಿಯಾಗಿದ್ದ ಈಗ ಆಂತರಿಕ ಭದ್ರತಾ ವಿಭಾಗದ ಐಜಿಪಿ ರಾಘವೇಂದ್ರ ಸುಹಾಸ್ ಅವರಿಗೂ ಸಿಐಡಿ ನೋಟಿಸ್ ನೀಡಿದ್ದು ಭಾರಿ ಕುತೂಹಲ ಕೆರಳಿಸಿದೆ.
ಗೋಲ್ಡ ಸ್ಮಗ್ಲಿಂಗ್ ಇನ್ನೂ ಕೆಲ ಪ್ರಕರಣದ ಮಾಹಿತಿಗಳನ್ನು ಕಲೆ ಹಾಕಿರುವುದು ಕೆಲ ಇನ್ಸಪೆಕ್ಟರ್‍ಗಳು ಹಾಗೂ ಬಡ್ತಿ ಹೊಂದಿದ ಡಿಎಸ್‍ಪಿಗಳಿಗೆ ನಡುಕ ಹುಟ್ಟಿಸಿದೆ ಎನ್ನಲಾಗಿದೆ.
ಅಲ್ಲದೇ ಜಮಖಂಡಿ ಬಳಿಯ ಹಾಲಿನ ಪುಡಿ ಪ್ರಕರಣದಲ್ಲಿ ಬಂಧಿತ ಆರೋಪಿ ಎಲ್ಲ ವಿವರಗಳನ್ನು ಬಾಯಿ ಬಿಟ್ಟಿದ್ದು ಅದರಲ್ಲೂ ಮಧ್ಯಸ್ಥಿಕೆ ವಹಿಸಿದ್ದ ಕಿರಣನ ಕೊರಳಿಗೆ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆಗಳಿವೆ.
ಸಿಐಡಿ ತಂಡ ಜೆಡಿ ಬಳಿಯಿಂದ ಒಂದು ಕೆ.ಜಿ.ಬಂಗಾರ ತನ್ನ ವಶಕ್ಕೆ ಪಡೆದಿದೆ ಎಂಬ ವದಂತಿಗಳು ದಟ್ಟವಾಗಿದೆ.

administrator

Related Articles

Leave a Reply

Your email address will not be published. Required fields are marked *