ಭೂಕೊಪ್ಪದಲ್ಲಿ ಸುಮಾರು 60 ಕೆಜಿ ಹಸಿ ಗಿಡಗಳು ವಶಕ್ಕೆ
ಧಾರವಾಡ : ಕುಂದಗೋಳ ತಾಲೂಕಿನ ಭೂಕೊಪ್ಪ ಗ್ರಾಮದಲ್ಲಿ ಮೂರು ಪ್ರತ್ಯೇಕ ಜಮೀನುಗಳಲ್ಲಿ ಮೆಣಸಿನಕಾಯಿ ಬೆಳೆಯ ಜೊತೆಗೆ ಬೆಳೆದಿದ್ದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಕರಣದಲ್ಲಿ ಭಾಗಿಯದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಹೇಳಿದರು.
ಅವರು ನಗರದಲ್ಲಿನ ಎಸ್.ಪಿ.ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ವಶಪಡಿಸಿಕೊಳ್ಳಲಾದ ಗಾಂಜಾದ ಒಟ್ಟು ಮೊತ್ತ 2.30 ಲಕ್ಷ ರೂಪಾಯಿಗಳು ಎಂದರು.
ಭೂಕೊಪ್ಪ ಗ್ರಾಮದ ಜಮೀನಿನಲ್ಲಿ ಆರೋಪಿತನು 31 ಕೆಜಿ ತೂಕದ ಒಟ್ಟು 32 ಹಸಿಗಾಂಜಾ ಗಿಡಗಳು ಅಂದಾಜು ಮೊತ್ತ 1 ಲಕ್ಷ 25 ಸಾವಿರ ಮತ್ತು ಎರಡನೇ ಆರೋಪಿತನು 20 ಕೆಜಿ 160 ಗ್ರಾಂ. ತೂಕದ ಒಟ್ಟು 50 ಹಸಿಗಾಂಜಾ ಗಿಡಗಳು ಅಂದಾಜು ಮೊತ್ತ 80 ಸಾವಿರ ಹಾಗೂ ಮೂರನೇ ಆರೋಪಿತನು 8.5 ಕೆಜಿ ತೂಕದ 17 ಹಸಿಗಾಂಜಾ ಗಿಡಗಳು ಅಂದಾಜು ಮೊತ್ತ 25 ಸಾವಿರ ಹೀಗೆ ಒಟ್ಟು 59ಕೆ.ಜಿ 760 ಗ್ರಾಂ ಹಸಿ ಗಾಂಜಾ ಗಿಡಗಳನ್ನು ವಶಕ್ಕೆ ಪಡೆಯಲಾಗಿದೆ.
ಎಂದರು.
ಸಿಇಎನ್ ಠಾಣೆಯ ಇನ್ಸಪೆಕ್ಟರ್ ಪ್ರಮೋದ ಯಲಿಗಾರ, ಕುಂದಗೋಳ ಠಾಣೆಯ ಇನ್ಸಪೆಕ್ಟರ್ ಎಂ.ಎನ್.ದೇಶನೂರ, ಪಿಎಸ್‌ಐ ಸವಿತಾ ಮುನ್ಯಾಳ, ಸಿಇಎನ್,ಕುಂದಗೋಳ ಮತ್ತು ಗುಡಗೇರಿ ಠಾಣೆಯ ಸಿಬ್ಬಂದಿ ದಾಳಿ ನಡೆಸಿದ್ದರು ಎಂದರು.
ಜಿಲ್ಲೆಯಲ್ಲಿ ಜಾನುವಾರುಗಳ ಕಳ್ಳತನಕ್ಕೆ ಸಂಬAಧಿಸಿದAತೆ ಐದು ಪ್ರಕರಣಗಳು ದಾಖಲಾಗಿದ್ದು, ಈ ಜಾಲ ಪತ್ತೆಗಾಗಿ ವಿಶೇಷ ತನಿಖಾ ತಂಡಗಳನ್ನು ನೇಮಿಸಲಾಗಿದೆ ಎಂದರು. ಜಿಲ್ಲೆಯಲ್ಲಿ ದಾಖಲಾಗಿದ್ದ ಮೂರು ದರೋಡೆ ಪ್ರಕರಣಗಳನ್ನು ಭೇದಿಸಲಾಗಿದೆ ಎಂದ ಅವರು, ಹೈವೇಯಲ್ಲಿ ದರೋಡೆ ನಿಗ್ರಹಕ್ಕೆ ಗಸ್ತುಪಡಯನ್ನು ಬಲಗೊಳಿಸಲಾಗಿದೆ. ರಸ್ತೆ ದರೋಡೆಗೆ ಸಂಬAಧಿಸಿದAತೆ ಅಗತ್ಯ ಇದ್ದವರು 112 ನಂಬರಿಗೆ ಕರೆ ಮಾಡಿ ನೆರವು ಪಡೆಯಬಹುದು ಎಂದರು.
ಡಿಸಿಆರ್‌ಬಿ ಡಿವೈಎಸ್‌ಪಿ ಚಂದ್ರಕಾAತ ಪೂಜಾರಿ ಸುದ್ದಿಗೋಷ್ಠಿಯಲ್ಲಿದ್ದರು.