ಮುಂಡಗೋಡ: ಮನೆ ಬೀಗ ಮುರಿದು ನಗ ನಾಣ್ಯ ಸೇರಿ ಒಟ್ಟು ೧.೩೩ ಲಕ್ಷ ರೂ. ದೋಚಿಕೊಂಡ ಹೋದ ಘಟನೆ ಕುರಿತು ಶುಕ್ರವಾರ ಪ್ರಕರಣ ದಾಖ ಲಾಗಿದೆ.
ಘಟನೆಯು ತಾಲೂಕಿನ ಕರಗಿನಕೊಪ್ಪ ಗ್ರಾಮದಲ್ಲಿ ನಡೆದಿದ್ದು, ಮನೆ ಮಾಲಿಕ ಭೀಮು ಲಮಾಣಿ ಎಂಬುವರ ಮನೆ ಕಳ್ಳತನವಾಗಿದೆ. ಮನೆಗೆ ಬೀಗ ಹಾಕಿ ಮನೆಮಂದಿ ಹೊರಗಡೆ ಹೋದಾಗ ಈ ಘಟನೆ ನಡೆದಿದೆ ಎನ್ನಲಾಗಿದ್ದು ಬೀಗವನ್ನು ಮೀಟಿ ತೆಗೆದು ಒಳಗೆ ನುಗ್ಗಿದ ಕಳ್ಳರು ಟ್ರೇಜರಿ ಯಲ್ಲಿಟ್ಟದ್ದ ೨೦ ಗ್ರಾಂ ಚಿನ್ನಾಭರಣ, ೩೬೦ ಗ್ರಾಂ ಬೆಳ್ಳಿ ಆಭರಣಗಳು ಹಾಗೂ ೩೩ ಸಾವಿರ ನಗದು ಸೇರಿ ಒಟ್ಟು ೧.೩೩ ಲಕ್ಷ ರೂ. ಗಳನ್ನು ಕಳ್ಳರು ಕಳ್ಳತನ ಮಾಡಿಕೊಂಡ ಹೋಗಿದ್ದಾರೆ ಎಂದು ಮನೆ ಮಾಲಿಕ ಭೀಮು ಲಮಾಣಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ.
ಕಳ್ಳತನ ನಡೆದ ಸ್ಥಳಕ್ಕೆ ಕ್ರೈಮ್ ವಿಭಾಗದ ಪಿಎಸೈ ಎನ್.ಡಿ.ಜಕ್ಕಣ್ಣವರ ಮತ್ತು ಸಿಬ್ಬಂದಿ ಭೇಟಿ ನೀಡಿ ಮಾಹಿತಿ ಕಲೆ ಹಾಕಿ ಪ್ರಕರಣ ದಾಖಲಿಕೊಂಡು ತನಿಖೆ ನಡೆಸಿದ್ದಾರೆ.