ಗದಗ: ಯೋಗೇಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಇಂದು ಬೆಳಗಿನ ಜಾವ ಇಲ್ಲಿನ ಎಪಿಎಂಸಿ ಕ್ವಾಟರ್ಸನಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಮಾಜಿ ಆಪ್ತ ಸಹಾಯಕನನ್ನು ಸಿಬಿಐ ಬಂಧಿಸುವ ಮೂಲಕ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ.
ಇಂದು ವಿನಯ್ ಕುಲಕರ್ಣಿ ಜಾಮೀನು ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರುವ ಹೊತ್ತಿನಲ್ಲೇ ಬಂಧಿಸುವ ಮೂಲಕ ಮತ್ತೊಂದು ಶಾಕ್ ನೀಡಿದೆ.
ಕುಲಕರ್ಣಿ ಸಚಿವರಿದ್ದ ಸಮಯದಲ್ಲಿ ಅವರ ಆಪ್ತ ಸಹಾಯಕರಾಗಿದ್ದ ಹಾಲಿ ಗದಗ ಎಪಿಎಂಸಿ ಕಾರ್ಯದರ್ಶಿ ಸೋಮಶೇಖರ ನ್ಯಾಮಗೌಡರನ್ನು ಅವರ ನಿವಾಸದಲ್ಲೇ ವಶಕ್ಕೆ ಪಡೆದ ಸಿಬಿಐ ತಂಡ, ವಿಚಾರಣೆಗಾಗಿ ಧಾರವಾಡಕ್ಕೆ ಕರೆ ತಂದಿದೆ.
ಯೋಗೇಶಗೌಡ ಹತ್ಯೆ ಪ್ರಕರಣದಲ್ಲಿ ಈ ಹಿಂದೆಯೂ ಹಲವು ಬಾರಿ ಸೋಮಶೇಖರ ಅವರನ್ನ ವಿಚಾರಣೆಗೆ ಸಿಬಿಐ ಮಾಡಿತ್ತು. ಹತ್ಯೆಯಾದ ಸಮಯದಲ್ಲಿ ನಡೆದ ಹಲವು ಮಾಹಿತಿಯನ್ನ ಕಲೆ ಹಾಕಿತ್ತು.
ಕೆ.ಎಎಸ್ ಅಧಿಕಾರಿ ಸೋಮು ನ್ಯಾಮಗೌಡ ಮೂರು ವರ್ಷಗಳ ಕಾಲ ವಿನಯ್ ಕುಲಕರ್ಣಿ ಆಪ್ತ ಕಾರ್ಯದರ್ಶಿ ಯಾಗಿದ್ದರು.ಮಹತ್ವದ ಸಾಕ್ಷ್ಯಾಧಾರಗಳ ಸಮೇತ ಇಂದು ಬೆಳಗಿನ ಜಾವ ನಿದ್ರೆ ಮಂಪರಿನಲ್ಲಿದ್ದ ಅವರ ಮನೆಯ ಬಾಗಿಲು ಬಡಿದು ಎಚ್ಚರಿಸಿ ವಶಕ್ಕೆ ಪಡೆದಿದೆ. ಯೋಗೇಶ್ ಗೌಡನ ಹತ್ಯೆಯ ಪ್ರತಿ ಇಂಚಿಂಚೂ
ಮಾಹಿತಿ ನ್ಯಾಮಗೌಡರಿಗೆ ಗೊತ್ತಿದ್ದು,
ಹತ್ಯೆಗೂ ಮುನ್ನ ವಿನಯ್ ಕುಲಕರ್ಣಿ ದೆಹಲಿ ಟೂರ್ ಪ್ಲಾನ್ ಆರೇಂಜ್ ಇವರೇ ಮಾಡಿದ್ದರೆನ್ನಲಾಗಿದೆ.ಹತ್ಯೆಯ ಎರಡು ದಿನ ಮುಂಚಿತವಾಗಿ ವಿನಯ್ ಕುಲಕರ್ಣಿ ನಕಲಿ ಪ್ರವಾಸದ ವೇಳಾಪಟ್ಟಿ ತಯಾರಿಸಿದ್ದರು.ಆದರೆ ಕುಲಕರ್ಣಿ ದೆಹಲಿಗೆ ಹೋಗದೇ ಬೆಂಗಳೂರಿನ ಮೌರ್ಯ ಹೋಟೆಲ್ ನಲ್ಲಿಯ ತಂಗಿದ್ದರು ಅಲ್ಲದೇ
ಹತ್ಯೆಯ ಆರೋಪಿಗಳನ್ನು ಅದೇ ರಾತ್ರಿ ಭೇಟಿಯಾಗಿದ್ದ ನ್ಯಾಮಗೌಡ ಹಾಗೂ ವಿನಯ್ ಕುಲಕರ್ಣಿ ಭೇಟಿಯಾಗಿದ್ದರೂ ಎನ್ನಲಾಗಿದೆ.