ಹುಬ್ಬಳ್ಳಿ: ಗೋಕುಲ ರಸ್ತೆಯ ನೆಹರೂನಗರದಲ್ಲಿರುವ ಹುಬ್ಬಳ್ಳಿ ವಿದ್ಯುತ್ ಸರಭರಾಜು ನಿಗಮದ ಕಿರಿಯ ಸಹಾಯಕಿಯೊಬ್ಬರ ಮನೆಯಲ್ಲಿ ಹಾಡು ಹಗಲೇ ಭಾರೀ ಒಬ್ಬರ ಮನೆಯಲ್ಲಿ ಹಾಡು ಹಗಲೇ ಭಾರಿ ಪ್ರಮಾಣ ಕಳ್ಳತನ ನಡೆದಿದ್ದು ಸುಮಾರು 13.40ಲಕ್ಷಕ್ಕೂ ಹೆಚ್ಚು ಮೌಲ್ಯದ ನಗನಾಣ್ಯ ದೋಚಲಾಗಿದೆ.
ಹುಬ್ಬಳ್ಳಿ ಹೆಸ್ಕಾಂನಲ್ಲಿ ಕಿರಿಯ ಸಹಾಯಕಿ ಆಗಿರುವ ಮಧು ಶಶಿಧರ ನಾಶಿಪುಡಿ ಎಂಬುವರ ಮನೆಯಲ್ಲಿಯೇ ಈ ಕಳ್ಳತನವಾಗಿದೆ.
ಮನೆಯಲ್ಲಿ ಯಾರೂ ಇಲ್ಲದ್ದನ್ನು ಅರಿತ ಕಳ್ಳರು ದಿ. 9ರಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನ3.30ರ ಮಧ್ಯೆ ಹಿತ್ತಲ ಬಾಗಿಲಿನ ಕದ ದೂಡಿ ಒಳಗಿನ ಚಿಲಕದ ಕೊಂಡಿ ಕಿತ್ತು ಮನೆಯೊಳಗೆ ಪ್ರವೇಶಿ ಮಾಡಿ ಬೆಡ್ ರೂಮ್‌ನಲ್ಲಿದ್ದ ವ್ಯಾನಿಟಿ ಬ್ಯಾಗ್‌ದಲ್ಲಿಟ್ಟಿದ್ದ ಅಲ್ಮೇರಾ ಚಾವಿ ತೆಗೆದುಕೊಮಡು ಇನ್ನೊಂದು ಬೆಡ್ ರೂಮ್‌ಗೆ ಹೋಗಿ ಅಲ್ಲಿದ್ದ ಅಲ್ಮೇರಾದ ಲಾಕರ್‌ನಲ್ಲಿಟ್ಟಿದ್ದ ಬಂಗಾರದ ಆಭರಣಗಳನ್ನು ದೋಚಿದ್ದಾರೆ.
ಸುಮಾರು 12.80 ಲಕ್ಷ ರೂ ಮೌಲ್ಯದ ಒಟ್ಟು 320 ಗ್ರಾಂ. ತೂಕದ ಚಿನ್ನಾಭರಣ ಹಾಗೂ 1520 ಗ್ರಾಂ. ತೂಕದ ಬೆಳ್ಳಿಯ ಆಭರಣಗಳು ಕಳ್ಳತನವಾಗಿವೆ.
40ಗ್ರಾಂ. ಬಂಗಾರದ 4 ಬಿಲ್ವಾರ, 100 ಗ್ರಾಂ.ನ 5ಬಳೆಗಳು, 20 ಗ್ರಾಂ. ತೂಕದ 2 ಚಿನ್ನದ ಬಳೆಗಳು, 10ಗ್ರಾಂ.ನ ಬಂಗಾರದ ಗುಂಡಿನ ಸರ, 30ಗ್ರಾಂ. ತೂಕದ ನೆಕ್ಲೇಸ್, 10ಗ್ರಾಂ.ನ ಬೀಟ್ಸ್ ಸ್ಟೋನ್ ಚೈನ್, 10 ಗ್ರಾಂ. ತೂಕದ ಚೈನ್, 40ಗ್ರಾಂ. ಬಂಗಾರದ ತಾಳಿ ಚೈನ್, 10 ಗ್ರಾಂ.ನ ಚಿನ್ನದ ಶಾರ್ಟ ತಾಳಿ ಚೈನ್, 15 ಗ್ರಾಂ.ನ 3 ಉಂಗುರಗಳು, 30 ಗ್ರಾಂ.ನ ಕಿವಿಯೊಲೆಗಳು, 500ಗ್ರಾಂ. ತೂಕದ ಬೆಳ್ಳಿ ತಂಬಿಗೆ, 250 ಗ್ರಾಂ.ನ ಒಂದು ಜೊತೆ ಬೆಳ್ಳಿ ಸಮೆ, 350 ಗ್ರಾಂ. ತೂಕದ ಒಂದು ಬೆಳ್ಳಿ ಆರತಿ ತಾಟು, 200ಗ್ರಾಂ.ನ ಬೆಳ್ಳಿಯ ತಾಟು, 100 ಗ್ರಾಂ.ನ ಬೆಳ್ಳಿಯ ಚಿಕ್ಕ ತಾಟು, 100ಗ್ರಾಂ.ನ 2 ಬೆಳ್ಳಿಯ ಗ್ಲಾಸ್, 20 ಗ್ರಾಂ. ತೂಕದ 2 ಬೆಳ್ಳಿ ಚಮಚಾ ಕಳ್ಳತನ ಮಾಡಲಾಗಿದೆ.
ಮನೆಯಲ್ಲಿ ಶ್ರೀಮತಿ ಮಧು ಹಾಗೂ ಆಕೆಯ ಮಗ ವಾಸಿಸುತ್ತಿದ್ದು ಈಕೆಯ ಪತಿ ಬೆಂಗಳೂರಿನ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದಾರೆ.
ಮಧು ಕಚೇರಿಗೆ ಹೋಗಿದ್ದು, ಮಗ ಶಾಲೆಗೆ ಹೋದ ಸಂದರ್ಭದಲ್ಲಿ ಕಳ್ಳತನ ನಡೆದಿದ್ದು, ಅನೇಕ ದಿನಗಳಿಂದ ಪರಿಶೀಲಿಸಿ ಕೃತ್ಯ ಎಸಗಿದ್ದಾರೆನ್ನಲಾಗಿದೆ.
ಈ ಕುರಿತು ಗೋಕುಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇನ್ಸಪೆಕ್ಟರ್ ಜೆ.ಎಂ.ಕಾಲಿಮಿರ್ಚಿ ಹಾಗೂ ಸಿಬ್ಬಂದಿಗಳು ಕಳ್ಳರಿಗಾಗಿ ಶೋಧ ನಡೆಸಿದ್ದಾರೆ.