ಹುಬ್ಬಳ್ಳಿ-ಧಾರವಾಡ ಸುದ್ದಿ

ಪಾಳು ಕಟ್ಟಡದಲ್ಲಿ ಗಾಂಜಾ ಮಾರಾಟ: 12 ಬಂಧನ

ಖಚಿತ ಮಾಹಿತಿ ಮೇರೆಗೆ ಯಳ್ಳೂರ ತಂಡದ ಕಾರ್ಯಾಚರಣೆ

ಹುಬ್ಬಳ್ಳಿ: ಠಾಣೆಗೆ ಸನಿಹದಲ್ಲೇ ಇರುವ ಅರವಿಂದನಗರದ ಪಿ.ಟಿ.ಕ್ವಾಟರ್ಸ್ ನ ಪಾಳು ಬಿದ್ದ ಕಟ್ಟಡದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ 12 ಜನರನ್ನು ಹಳೇ ಹುಬ್ಬಳ್ಳಿ ಪೊಲೀಸರು ಬಂಧಿಸಿ ಅವರಿಂದ 1 ಕೆಜಿ 365 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಬುಧವಾರ ರಾತ್ರಿ 10.30ರ ಸುಮಾರಿಗೆ ಪೊಲೀಸರಿಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಇನ್ಸಪೆಕ್ಟರ್ ಸುರೇಶ ಯಳ್ಳೂರ ಹಾಗೂ ತಂಡ ದಾಳಿ ನಡೆಸಿದ್ದು, ಒಂದು ಲಕ್ಷ ಮೌಲ್ಯದ ಗಾಂಜಾ, 9 ಮೊಬೈಲ್, ಮೂರು ಬೈಕ್, ಎರಡು ಸಾವಿರ ಹಣ ಒಟ್ಟು 4.32 ಲಕ್ಷ ರೂ ಮೌಲ್ಯದ ವಸ್ತು ಜಪ್ತಿ ಮಾಡಿದ್ದಾರೆ.

 

ಅಭಿಷೇಕ ಹನಮಂತ, ಮಹ್ಮದಆಯಾಜ್ ಜೈನುಲಾಬುದ್ದೀನ, ಇಸ್ಮಾಯಿಲ್ ಮೆಹಬೂಬಾಲಿ, ಜಾಪರ ಅಲಿಯಾಸ್ ಬಾಂಬೆಜಾಫರ ಮಕ್ಕುಲ್, ಜುಬೇರಹ್ಮದ ದಾದಾಪೀರ, ಪುರಕಾನ್ ನಿಸಾರಹ್ಮದ, ಶಾನವಾಜ ಗೌಸಮೋದಿನ, ಸೋಹಿಲ್ ನಜೀರಹ್ಮದ, ಮಹ್ಮದಸಾಧೀಕ ರೀಯಾಜ, ರೋಶನ್ ಸೋಯಬ್ ಅಲಿಯಾಸ ಬಬ್ಲೂ ಜಮೀಲಾಅಹ್ಮದ್, ಸಲೀಂ ಹಜರತಸಾಬ, ಕರೀಂ ಜಾಂಗೀರಖಾನ ಬಂದಿತರಾದವರಗಿದ್ದಾರೆ.

ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರು ಇಂದು ಬೆಳಿಗ್ಗೆ ಮಾಧ್ಯಮದವರಿಗೆ ಈ ವಿಷಯ ತಿಳಿಸಿದರಲ್ಲದೇ ಯಳ್ಳೂರ ತಂಡದ ಕಾರ್ಯ ಶ್ಲ್ಯಾಘಿಸಿದರು. ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ್ ಸಿ.ಆರ್. ಸೇರಿದಂತೆ ಇತರ ಪೊಲೀಸ್ ಸಿಬ್ಬಂದಿ ಇದ್ದರು.

administrator

Related Articles

Leave a Reply

Your email address will not be published. Required fields are marked *