ಹುಬ್ಬಳ್ಳಿ-ಧಾರವಾಡ ಸುದ್ದಿ
ಮತ್ತೆ 23 ಬಡ್ಡಿ ದಂಧೆಕೋರರು ಅಂದರ್

ಮತ್ತೆ 23 ಬಡ್ಡಿ ದಂಧೆಕೋರರು ಅಂದರ್

ಮುಂದುವರಿದ ಮೀಟರ್ ಬಡ್ಡಿ ಕುಳಗಳ ಬೇಟೆ 

ಹುಬ್ಬಳ್ಳಿ: ಬಡ್ಡಿ ಕಿರುಕುಳ ನೀಡಿದ ಆರೋಪದ ಮೇಲೆ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 16 ಪ್ರಕರಣ ದಾಖಲಿಸಿ 23ಜನ ಆರೋಪಿತರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ ತಿಳಿಸಿದರು.

ಇಲ್ಲಿನ ಸುದ್ದಿಗಾರರೊಂದಿಗೆ ಮಾತನಾಡಿದ ವಿವರ ನೀಡಿದ ಅವರು ಅವಳಿನಗರ ವ್ಯಾಪ್ತಿಯ 13 ಠಾಣೆಗಳಲ್ಲಿ 16 ಪ್ರಕರಣ ದಾಖಲಿಸಿಕೊಂಡಿದ್ದು, 23 ಜನ ಮೀಟರ್ ಬಡ್ಡಿ ಕುಳಗಳನ್ನು ಬಂಧಿಸಲಾಗಿದ್ದು, ಅಂದಾಜು ನಾಲ್ಕು ಲಕ್ಷ ಮೌಲ್ಯದ ಕಾರು, ಬೈಕ್, ಮೊಬೈಲ್ ಮತ್ತು ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಹುಬ್ಬಳ್ಳಿ ಉಪನಗರ ಠಾಣಾ ವ್ಯಾಪ್ತಿಯ ರಾಜೇಶ ಮೆಹರವಾಡೆ, ಮೋಹಿತ ಮೆಹರವಾಡೆ, ಅನೀತಾ ಹಬೀಬ, ದೀಪಾ ಶಲವಡಿ, ಅಶೋಕ ಠಾಣಾ ವ್ಯಾಪ್ತಿಯ ಸತೀಶ ದೊಡ್ಡಮನಿ, ವಿದ್ಯಾನಗರ ಠಾಣಾ ವ್ಯಾಪ್ತಿಯ ನವೀನ ಭಾಂಡಗೆ, ದತ್ತೂ ಪಟ್ಟನ್, ಕಮರಿಪೇಟ್ ಠಾಣಾ ವ್ಯಾಪ್ತಿಯ ಧನಲಕ್ಷ್ಮೀ ಮದ್ರಾಸಿ, ಗೋಕುಲ ರೋಡ ಠಾಣಾ ವ್ಯಾಪ್ತಿಯ ಸೋಲೋಮನ್ ಬಬ್ಬಾ, ಆನಂದ ರಾಯಚೂರ, ಎಪಿಎಂಸಿ ಠಾಣಾ ವ್ಯಾಪ್ತಿಯ ಶೇಖವ್ವ ದಾಸನೂರ, ಕೇಶ್ವಾಪೂರ ಠಾಣಾ ವ್ಯಾಪ್ತಿಯ ಸ್ಟೀಫನ್ ಕ್ಷೀರಸಾಗರ, ಬೆಂಡಿಗೇರಿ ಠಾಣಾ ವ್ಯಾಪ್ತಿಯ ಗಿರಿಯಪ್ಪ ಬಳ್ಳಾರಿ, ಬಾಳು ಬಳ್ಳಾರಿ, ಅಭಿಲೇಖಾ ತೋಖಾ, ಕಸಬಾಪೇಟ್ ಠಾಣಾ ವ್ಯಾಪ್ತಿಯ ತನ್ವೀರ ಜಂಗ್ಲಿವಾಲೆ, ಹಳೇಹುಬ್ಬಳ್ಳಿ ಠಾಣಾ ವ್ಯಾಪ್ತಿಯ ಣಾರಾಯಣ ಕಾಟಿಗಾರ, ಧಾರವಾಡ ವಿದ್ಯಾಗಿರಿ ಠಾಣಾ ವ್ಯಾಪ್ತಿಯ ಸಮೀರ, ಸೈಯದಲಿ, ಬಿ.ಕೆ. ಬಾಯಿ, ಹ್ಯಾರಿಸ ಪಠಾಣ, ಉಪನಗರ ಠಾಣಾ ವ್ಯಾಪ್ತಿಯ ಜಾವೇದ ಘೋಡೆಸವಾರ, ಶಹರ ಠಾಣಾ ವ್ಯಾಪ್ತಿಯ ಶಾಕೀರ ಕರಡಿಗುಡ್ಡ ಬಂಧಿತರಾದವರಾಗಿದ್ದಾರೆಂದರು.

ಈ ಹಿಂದೆ ಬಡ್ಡಿ ಕಿರುಕುಳ ಆರೋಪದಲ್ಲಿ ಏಳು ಪ್ರಕರಣದಲ್ಲಿ 25 ಜನರನ್ನು ಬಂಧಿಸಲಾಗಿತ್ತು. ಮುಂದುವರೆದು 23 ಜನರನ್ನು ಬಂಧಿಸಲಾಗಿದೆ. ಸಾರ್ವಜನಿಕರಿಗೆ ಬಡ್ಡಿ ಕಿರುಕುಳ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಕಾರ್ಯಾಚರಣೆ ಮುಂದುವರೆಸಲಾಗುತ್ತಿದ್ದು, ಬಡ್ಡಿ ಕುಳಗಳ ಮೇಲೆ ನೊಂದವರು ದೂರು ನೀಡಿದರೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ್ ಸಿ.ಆರ್., ಎಸಿಪಿಗಳಾದ ಶಿವಪ್ರಕಾಶ ನಾಯಕ್, ಉಮೇಶ ಚಿಕ್ಕಮಠ ಸೇರಿದಂತೆ ವಿವಿಧ ಠಾಣೆಗಳ ಸಿಪಿಐಗಳು ಇದ್ದರು.

 

administrator

Related Articles

Leave a Reply

Your email address will not be published. Required fields are marked *