ಹುಬ್ಬಳ್ಳಿ-ಧಾರವಾಡ ಸುದ್ದಿ
ಹು.ಧಾ.ಮೀಟರ್ ಬಡ್ಡಿ ಕುಳಗಳಿಗೆ ಖಾಕಿ ಬಿಸಿ

ಹು.ಧಾ.ಮೀಟರ್ ಬಡ್ಡಿ ಕುಳಗಳಿಗೆ ಖಾಕಿ ಬಿಸಿ

25 ಆರೋಪಿತರ ವಿರುದ್ಧ ಕ್ರಮ: ಶಶಿಕುಮಾರ

ಹುಬ್ಬಳ್ಳಿ: ಹು-ಧಾ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಮೀಟರ್ ಬಡ್ಡಿ ದಂಧೆ ನಡೆಸುವ ದಂಧೆಕೋರರ ವಿರುದ್ಧ ಒಟ್ಟು 7 ಪ್ರಕರಣಗಳನ್ನು ದಾಖಲಿಸಿ 25 ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತರಾದ ಎನ್.ಶಶಿಕುಮಾರ್ ಅವರು ತಿಳಿಸಿದರು.
ನಗರದಲ್ಲಿಂದು ಈ ಕುರಿತು ವಿವರಿಸಿದ ಅವರು, ಸಾರ್ವಜನಿಕರಿಂದ ಬಂದಂತಹ ದೂರಿನ ಆಧಾರದ ಮೇರೆಗೆ ಹು-ಧಾ ಪೊಲೀಸ್ ಕಮೀಷನರ್ ವ್ಯಾಪ್ತಿಯಲ್ಲಿ ಒಟ್ಟು ಮೀಟರ್ ದಂಧೆಕೋರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದರು.


ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 4 ಆರೋಪಿಗಳ ಮೇಲೆ 2 ಪ್ರಕರಣ ದಾಖಲು ಮಾಡಿದ್ದು, ಹುಸೇನಸಾಬ್ ದೊಡ್ಡಮನಿ, ಅರ್ಬಾಜ ಮಕ್ತುಮಸಾಬ, ರಿಜ್ವಾನ್ ಬೆಟಗೇರಿ, ಆಮೀರ್ ಮುಲ್ಲಾನಿ ಇವರಿಂದ ಬಾಂಡ್ ಪೇಪರ್ ಗಳು, ಖಾಲಿ ಚೆಕ್, ಸಾಲದ ಮಾಹಿತಿಯಿರುವ ಬುಕ್ ಹಾಗೂ ಒತ್ತೆ ಇಟ್ಟುಕೊಂಡ ೧ ಸ್ಕೂಟಿ ಮತ್ತು ವಾಹನದ ಮೂಲ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಧಾರವಾಡ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 4 ಆರೋಪಿಗಳ ಮೇಲೆ 2ಪ್ರಕರಣ ದಾಖಲು ಮಾಡಿದ್ದು, ಜಾಫರ್, ಧಾರವಾಡ ನಿಜಾಮುದ್ದೀನ್ ಕಾಲೋನಿಯ ಮೊಪಿನ, ಸವಿತಾ ಕಳ್ಳಿಮನಿ, ರತ್ನವ್ವ ಗಂಭೀರ ಇವರಿಂದ ಒಂದು ಹೊಂಡಾ ಕಂಪನಿ ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದರು.


ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ5 ಆರೋಪಿಗಳ ಮೇಲೆ 2 ಪ್ರಕರಣ ದಾಖಲಾಗಿದ್ದು, ಚಕ್ರಪಾಣಿ ಕುಲಕರ್ಣಿ, ಕಷ್ಪೂದಿನ ಕಿಲ್ಲೇದಾರ, ಮಸೂದ್ದಿನ ಕಿಲ್ಲೆದಾರ ಹಾಗೂ ಇನ್ನೂ ಇಬ್ಬರನ್ನು ಬಂಧಿಸಲಾಗುವುದು ಎಂದ ಅವರು ಇವರಿಂದ 3 ಬಾಂಡ್ ಗಳು ಹಾಗೂ 3 ಖಾಲಿ ಚೆಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.


ಇನ್ನೂ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 12 ಆರೋಪಿತರ ಮೇಲೆ 1 ಪ್ರಕರಣ ದಾಖಲಾಗಿದ್ದು, ಆದಿತ್ಯ ಸಣ್ಣತಂಗಿ, ಮಯೂರ ಚಾಕಲಬ್ಬಿ, ಮಹಾಂತೇಶ್ ಹೊಸಮನಿ, ಅಭಿಷೇಕ ಪಗಲಾಪೂರ, ಅರ್ಜುನ ಗಾಯಕವಾಡ, ಕೈಬೂಸಾಬ ಮುಲ್ಲಾ, ಅಜಯ ಸಿಂಗನಹಳ್ಳಿ, ಆನಂದ ಗೋಕಾಕ್, ಮಂಜುನಾಥ ಕೊರವರ, ಕಿರಣ್ ಕೊರವರ, ಕಿರಣ್ ದಾಮೋದರ್ ಹಾಗೂ ಗಣೇಶ್ ಇವರಿಂದ ಇವರಿಂದ ಸಾಲದ ವ್ಯವಹಾರದ ನಮೂದಿಸುವ ದಾಖಲೆಗಳು, 10 ವಿವಿಧ ಕಂಪನಿಯ ಮೊಬೈಲ್ ಫೋನ್ ಗಳು, 8 ದ್ವಿಚಕ್ರ ವಾಹನಗಳು, 2 ಹರಿತವಾದ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಒಟ್ಟು 10 ಬೈಕುಗಳು, 10 ಮೊಬೈಲ್ ಫೋನ್‌ಗಳು ಹಾಗೂ ಇತರೆ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

administrator

Related Articles

Leave a Reply

Your email address will not be published. Required fields are marked *