ಖಾಕಿ ಕಿರುಕುಳ ಆರೋಪ
ಹುಬ್ಬಳ್ಳಿ: ಗೋಕುಲ್ ರಸ್ತೆಯ ಕೋಟಿಲಿಂಗೇಶ್ವರ ನಗರದಲ್ಲಿ ನಗರದ ಯುವಕನೊಬ್ಬ ಕುಟುಂಬ ಕಲಹದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಖಾಸಗಿ ಕೆಲಸ ಮಾಡುತ್ತಿದ್ದ ನಿಖಿಲ ಮೋಹನ ಕುಂದಗೋಳ(28) ಎಂಬಾತನೇ ನೇಣಿಗೆ ಶರಣಾದವನಾಗಿದ್ದಾನೆ.
ಈತನ ಪತ್ನಿ ಕೇಶ್ವಾಪುರ ಠಾಣೆಗೆ ದೂರು ನೀಡಿದ್ದು ಪೊಲೀಸರು ವಿಚಾರಣೆ ನೆಪದಲ್ಲಿ ಕಿರುಕುಳ ನೀಡಿದ್ದಾರೆಂದು ಮೃತನ ಸಹೋದರರು ಹಾಗೂ ಮನೆಯವರು ಆರೋಪಿಸಿದ್ದಾರೆ.
ಪತಿ ನಿಖಿಲ್ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾನೆಂದು ಕೇಶ್ವಾಪುರ ಮೂಲದ ಪತ್ನಿ ತವರಿನವರೊಂದಿಗೆ ತೆರಳು ದೂರು ದಾಖಲಿಸಿದ್ದಾಳೆನ್ನಲಾಗಿದೆ. ವಿಚಾರಣೆಗೆ ಕರೆಸಿ ಠಾಣಾಧಿಕಾರಿ ಬೆದರಿಸಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದು,ತನಿಖೆಯ ನಂತರವೇ ವಾಸ್ತವ ಹೊರ ಬರಲಿದೆ.
ನಿಖಿಲ್ ಕುಂದಗೋಳನ ಶವವು ಕಿಮ್ಸ್ ಆಸ್ಪತ್ರೆಯಲ್ಲಿದ್ದು ವೈದ್ಯರು ಶವ ಪರೀಕ್ಷೆ ಮಾಡುತ್ತಿದ್ದಾರೆ. ಶವಗಾರದ ಮುಂದೆ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದ್ದು ದಲಿತ ಮುಖಂಡ ಗುರುನಾಥ ಉಳ್ಳಿಕಾಶಿ ಅಮಾಯಕ ಯುವಕ ಖಾಕಿ ದೌರ್ಜನ್ಯಕ್ಕೆ ಬಲಿಯಾಗಿದ್ದು ಕಿಮ್ಸ್ ಶವಾಗಾರದಿಂದ ಶವವನ್ನು ಒಯ್ದು ಠಾಣೆಯ ಮುಂದೆ ಇಟ್ಟು ಪ್ರತಿಭಟಿಸಲಾಗುವುದು ಎಂದಿದ್ದಾರೆ.