ಪತ್ತೆ ಹಚ್ಚಲು ಪೊಲೀಸರಿಗೆ ಮನವಿ
ಧಾರವಾಡ : ತಮ್ಮದೇ ಜನಾಂಗದ ಅಪ್ರಾಪ್ತ ವಯಸ್ಸಿನ ಯುವಕರಿಗೆ ನನ್ನ ಹತ್ಯೆ ಮಾಡಲು ಸುಫಾರಿ ನೀಡಲಾಗಿದೆ ಎಂದು ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಲ್ಲ ಪಕ್ಷದಲ್ಲೂ ವಿರೋಧಿಗಳು ಇದ್ದಾರೆ. ಯಾರು ಈ ಬೆಳವಣಿಗೆ ಹಿಂದೆ ಇದ್ದಾರೆ ಎಂಬುದು ಪೊಲೀಸರು ತನಿಖೆ ನಡೆಸಿ ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
೨೦ ವರ್ಷದ ಯುವಕರು ಗಾಂಜಾ ಸೇವನೆ ಮಾಡಿ ಬಂದು ಮಣಿಕಿಲ್ಲಾದಲ್ಲಿ ನನಗೆ ಹೊಡೆಯೋದಾಗಿ ಹೇಳಿದ್ದಾರೆ.ಪೋಲಿಸ್ ಕಮಿಷನರ್ ಮೆಲೆ ನಂಬಿಕೆ ಇದೆ.ಪೋಲಿಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ರಿಕ್ಷಾ ಹೊಡೆವ ಯುವಕರು ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಪ್ರಚೋದನೆ ನೀಡಿದ್ದು ಯಾರು ಎಂಬುದು ತನಿಖೆಯಾಗಬೇಕು. ಪೊಲೀಸರಿಗೆ ಈ ಕುರಿತು ಎಲ್ಲ ಮಾಹಿತಿ ನೀಡಿದ್ದೇವೆ. ಈ ಹಿಂದೆಯೂ ಸಹ ನನ್ನ ಹತ್ಯೆಗೆ ಯತ್ನಿಸಿದರು. ಇದೀಗ ಯುವಕರಿಗೆ ಸುಫಾರಿ ನೀಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಇಸ್ಮಾಯಿಲ್‌ಸಾಬ ಮುಲ್ಲಾ, ರಿಯಾಜ್ ನನ್ನೇಸಾಬನವರ ಇದ್ದರು.
ಯುವ ಕಾಂಗ್ರೆಸ್ ಚುನಾವಣೆ ಹಿನ್ನೆಲೆ ಹೊಡೆದಾಟ : ಮೂವರು ವಶಕ್ಕೆ
ತಮಾಟಗಾರ ಸಂಬಂಧಿ – ವಿರೋಧಿ ಗುಂಪುಗಳ ನಡುವೆ ಮಾರಾಮಾರಿ
ಧಾರವಾಡ : ಧಾರವಾಡ ಅಂಜುಮನ್ ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ ಅವರ ಪರ- ವಿರೋಧಿ ಗುಂಪುಗಳ ನಡುವೆ ಯುವ ಕಾಂಗ್ರೆಸ್ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ರಾತ್ರಿ ರಸೂಲ್‌ಪುರ ಓಣಿ ನಡುವೆ ಮಾರಾಮಾರಿ ನಡೆದಿದೆ.
ಕಳೆದ ರಾತ್ರಿ ಈ ಘಟನೆ ನಡೆದಿದ್ದು ಇಸ್ಮಾಯಿಲ್ ಅವರನ್ನೇ ಕೇಂದ್ರಿಕರಿಸಿ ಅವರ ಸಹೋದರರ ಮೇಲೂ ಹಲ್ಲೆಗೂ ಯತ್ನಿಸಿದ ಬಗ್ಗೆ ವರದಿಯಾಗಿದೆ.
ರೌಡಿ ಶೀಟರ್ ಸೋಹೆಲ್ ಬಾಂದಾರ ಮತ್ತು ಇಸ್ಮಾಯಿಲ್ ಅವರ ಅಳಿಯ ಸೋಹೆಲ್ ಹಾಲಬಾವಿ ಇಬ್ಬರೂ ಯುವ ಕಾಂಗ್ರೆಸ್ ಚುನಾವಣೆಗೆ ಸ್ಪರ್ಧಿಸಿದ್ದು ಇಬ್ಬರ ನಡುವೆಯೂ ತಿಕ್ಕಾಟ ನಡೆದಿತ್ತು. ನಿನ್ನೆ ಈ ಎರಡು ಗುಂಪುಗಳ ನಡುವೆ ಒಪ್ಪಂದ ಏರ್ಪಟ್ಟಿತ್ತಲ್ಲದೇ ಒಬ್ಬರನ್ನೊಬ್ಬರು ಬೆಂಬಲಿಸುವ ನಿರ್ಧಾರಕ್ಕೆ ಬಂದಿದ್ದರು. ಆದರೆ ರಾಜೀ ಮಾತುಕತೆಯ ನಂತರ ರಾತ್ರಿ ಕುಡಿದ ಮತ್ತಿನಲ್ಲಿ ಸೋಹೆಲ್ ಬಾಂದಾರ ಗುಂಪು ಇಸ್ಮಾಯಿಲ್ ತಂಡದವರದ್ದು ಅತಿಯಾಗಿದೆ ಅವರನ್ನು ಮುಗಿಸದೇ ಉಳಿಗಾಲವಿಲ್ಲ ಎಂದು ಹಾಲಬಾವಿ ಬೆಂಬಲಿಗರ ಮೇಲೆ ಹಲ್ಲೆಗೆ ಮುಂದಾಗಿದೆ. ಇಸ್ಮಾಯಿಲ್ ತಮಾಟಗಾರ ಸಹೋದರ ಧಾರವಾಡ ಶಹರ ಠಾಣೆಗೆ ತಮ್ಮ ಸಹೋದರನ ಕೊಲೆ ಯತ್ನಕ್ಕೆ ಸ್ಕೆಚ್ ಹಾಕಲಾಗಿದೆ.ಅಲ್ಲದೇ ತಮ್ಮ ಮೇಲೆ ಹಲ್ಲೆ ಯತ್ನ ನಡೆದಿದೆ ಎಂದು ದೂರು ನೀಡಿದ್ದಾರೆ.
ಈ ಘಟನೆ ನಡೆದ ತಕ್ಷಣ ಕಾರ್ಯಪ್ರವೃತ್ತರಾಗಿರುವ ಎಸಿಪಿ ಪ್ರಶಾಂತ ಸಿದ್ದನಗೌಡರ, ಶಹರ ಇನ್ಸಪೆಕ್ಟರ್ ಎನ್.ಸಿ.ಕಾಡದೇವರ, ಇತರ ಪಿಐಗಳಾದ ಸಂಗಮೇಶ ದಿಡಿಗನಾಳ, ದಯಾನಂದ ಶೇಗುಣಿಸಿ ಮುಂತಾದವರು ಈಗಾಗಲೇ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಇನ್ನಷ್ಟು ಜನರನ್ನು ವಶಕ್ಕೆ ಪಡೆಯಲು ಜಾಲ ಬೀಸಲಾಗಿದೆ.
ಇದು ವಾಸ್ತವವಾಗಿ ಇಸ್ಮಾಯಿಲ್ ಸಂಬಂಧಿ ಮತ್ತು ಅವರ ವಿರೋಧಿ ಗುಂಪುಗಳ ಯುವ ಕಾಂಗ್ರೆಸ್ ಪದಾಧಿಕಾರಿಗಳ ನಡುವಣ ವೈಷಮ್ಯದ ಜಗಳ ಎನ್ನಲಾಗಿದೆ. ಈ ಪ್ರಕರಣ ಸಂಪೂರ್ಣವಾಗಿ ತನಿಖೆ ನಡೆಸಲೂ ಇಸ್ಮಾಯಿಲ್ ಸಹೋದರ ಪೊಲೀಸ ಠಾಣೆಗೆ ದೂರು ನೀಡಿದ್ದಾರೆ.