ಹುಬ್ಬಳ್ಳಿ-ಧಾರವಾಡ ಸುದ್ದಿ
7 ಜನರ ರಿಂಗ ರೋಡ್ ದರೋಡೆ ಗ್ಯಾಂಗ್ ಅಂದರ್

7 ಜನರ ರಿಂಗ ರೋಡ್ ದರೋಡೆ ಗ್ಯಾಂಗ್ ಅಂದರ್

ಬೆಂಡಿಗೇರಿ ಪೊಲೀಸರ ಕಾರ್ಯಾಚರಣೆ

ಹುಬ್ಬಳ್ಳಿ: ಬೆಂಡಿಗೇರಿ ಠಾಣೆ ಪೊಲೀಸರು ನಗರದ ಹೊರವಲಯದ ರಿಂಗ್ ರೋಡ್‌ನಲ್ಲಿ ವಾಹನ ಸವಾರರ ದರೋಡೆ ಮಾಡುತ್ತಿದ್ದ ಕುಖ್ಯಾತ ತಂಡವೊಂದನ್ನು ಬಂಧಿಸಿದೆ.
ಪೊಲೀಸ ಆಯುಕ್ತ ಎನ್.ಶಶಿಕುಮಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಸಂಬಧ ಏಳು ಜನ ಆರೋಪಿಗಳನ್ನು ಬಂಧಿಸಿ 4100 ರೂ ನಗದು ಸೇರಿದಂತೆ ಮೂರು ಮೊಬೈಲ್, ಎರಡು ದ್ವಿಚಕ್ರ ವಾಹನ, ಒಂದು ಚಾಕು, ಖಾರದ ಪುಡಿ, ಒಂದು ಆಟೋ ವಶಪಡಿಸಿಕೊಂಡಿದ್ದಾರೆಂದರು.


ಗಂಗಾಧರನಗರದ ಭೀಮರಾವ್ ತಾವರಗೊಪ್ಪ, ರವಿ ಗೋಕಾಕ್, ಕೆ.ಬಿ.ನಗರದ ದೀಪಕ್ ನರಗುಂದ, ಶ್ರೀನಿವಾಸ್ ವೀರಾಪುರ, ಸೋನಿಯಾಗಾಂಧಿ ನಗರದ ಶಶಿಕುಮಾರ್ ಸಾತಪತಿ, ಗೋಪನಕೊಪ್ಪದ ನಾಗರಾಜ್ ಬಳ್ಳಾರಿ ಎಂಬುವವರೆ ಬಂಧಿಸಲ್ಪಟ್ಟವರಾಗಿದ್ದು ಇವರೆಲ್ಲರೂ ರೌಡಿಶೀಟರ್‍ಸ್, ಎಮ್.ಓಬಿಯಲ್ಲಿ ಇದ್ದವರ ಜೊತೆಗೆ ಗುರು ತಿಸಿಕೊಂಡವರಾಗಿದ್ದಾರೆಂದರು.
ಹೊರವಲಯದ ರಿಂಗ್ ರಸ್ತೆಯಲ್ಲಿ ಬೈಕ್ ಹಾಗೂ ಲಾರಿಗಳನ್ನು ಅಡ್ಡಗಟ್ಟಿ ಖಾರದಪುಡಿ ಎರಚಿ, ಚಾಕುವಿನಿಂದ ಹಲ್ಲೆ ನಡೆಸಿ ಬೆಲೆ ಬಾಳುವ ವಸ್ತುಗಳನ್ನು ದೋಚಿ ಈ ತಂಡ ತಲೆಮರೆಸಿಕೊಳ್ಳುತ್ತಿತ್ತು. ಅಲ್ಲದೇ ರಿಂಗ್ ರೋಡ್ ಸಂಚಾರವೇ ಬೇಡ ಎನ್ನುವಷ್ಟರ ಮಟ್ಟಿಗೆ ಸವಾರರು ಹೆದರುವಂತಾಗಿತ್ತು.


ಬೆಂಡಿಗೇರಿ ಪೊಲೀಸ್ ಠಾಣೆಯ ಪಿಐ ಎಸ್.ಆರ್.ನಾಯಕ್ ನೇತೃತ್ವದ ತಂಡದಲ್ಲಿ ಪಿಎಸ್‌ಐ ರವಿ ವಡ್ಡರ, ಎಎಸ್‌ಐ ಟಿ.ಎನ್. ಸವದತ್ತಿ, ಸಿಬ್ಬಂದಿ ಪಿ.ಜಿ.ಪುರಾಣಿಕಮಠ, ಎನ್.ಐ. ನಿಲಗಾರ್, ಪಿ.ಎಫ್.ಅಂಬಿಗೇರ್, ಆರ್.ಎಸ್.ಹರ್ಕಿ, ರಮೇಶ ಹಿತ್ತಲಮನಿ, ಹನುಮಂತ ಕರಗಾವಿ, ಸೋಮು ಮೇಟಿ, ಬಸವರಾಜ ಗಳಗಿ, ಗುಡ್ಡಪ್ಪ ಒಗ್ಗಣ್ಣವರ, ಬಸು ಗೌಡರ, ಹನುಮಂತ ಆಲೂರ ಇತರರು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಆಯುಕ್ತರು ಶ್ಲ್ಯಾಘಿಸಿದರು. ಡಿಸಿಪಿ ರವೀಶ ಸಿ.ಆರ್. ಗೋಷ್ಠಿಯಲ್ಲಿದ್ದರು.

administrator

Related Articles

Leave a Reply

Your email address will not be published. Required fields are marked *