ಅಕ್ರಮ ಸಂಗ್ರಹದ ೩ ಕೋಟಿ ಹಣ ಜಪ್ತಿ!
ಹುಬ್ಬಳ್ಳಿ : ನಗರದ ಸಿಸಿಬಿ ಪೊಲೀಸರು ಭರ್ಜರಿ ಬೇಟೆಯಾಡಿದ್ದು ಸೀಡ್ಸ್ ವ್ಯಾಪಾರಿಯೊಬ್ಬರು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 3 ಕೋಟಿ ಹಣವನ್ನು ಇಂದು ವಶಪಡಿಸಿಕೊಂಡಿದ್ದಾರೆ.
ಸಿಸಿಬಿ ನಾರಾಯಣ ಭರಮನಿ ನೇತೃತ್ವದ ತಂಡ ಭವಾನಿನಗರ ಬಳಿಯ ಸೀಡ್ಸ ವ್ಯಾಪಾರಿ ರಮೇಶ ಬೋನಗೇರಿ ಎಂಬವರ ಮನೆಯ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಯಾವುದೇ ದಾಖಲೆಗಳಿಲ್ಲದ ಸುಮಾರು 3 ಕೋಟಿ ಹಣವನ್ನು ವಶಕ್ಕೆ ಪಡೆದಿದೆ.
ಸಿಸಿಬಿ ಸಿಬ್ಬಂದಿಗಳ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು ಹೆಚ್ಚಿನ ವಿವರಗಳು ಲಭ್ಯವಾಗಬೇಕಿದೆ.