ಹುಬ್ಬಳ್ಳಿ-ಧಾರವಾಡ ಸುದ್ದಿ
ಬಯೋ ಡಿಸೇಲ್ ಮಾಫಿಯಾ: ಎಂಐಎಂ ಪಾಲಿಕೆ ಸದಸ್ಯ ಆರೆಸ್ಟ್; ನಜೀರ್ ಹೊನ್ಯಾಳ, ಸಹೋದರ ಹನೀಪ್ ನ್ಯಾಯಾಂಗ ವಶಕ್ಕೆ

ಬಯೋ ಡಿಸೇಲ್ ಮಾಫಿಯಾ: ಎಂಐಎಂ ಪಾಲಿಕೆ ಸದಸ್ಯ ಆರೆಸ್ಟ್; ನಜೀರ್ ಹೊನ್ಯಾಳ, ಸಹೋದರ ಹನೀಪ್ ನ್ಯಾಯಾಂಗ ವಶಕ್ಕೆ

ಹುಬ್ಬಳ್ಳಿ: ಪೂನಾ ಬೆಂಗಳೂರು ರಸ್ತೆಯಲ್ಲಿನ ಭಾರತ ಸರ್ವೀಸ್ ಸೆಂಟರ್‌ನಲ್ಲಿ ನಡೆಯುತ್ತಿದ್ದ ಬಯೋ ಡಿಸೇಲ್ ಪ್ರಕರಣದಲ್ಲಿ ಎಐಎಂಐಎಂ ಪಕ್ಷದ ಪಾಲಿಕೆ ಸದಸ್ಯ ನಜೀರ ಹೊನ್ಯಾಳ ಹಾಗೂ ಅವರ ಸಹೋಧರ ಹನೀಪ್ ಅಹ್ಮದ ಹೊನ್ಯಾಳರನ್ನು ಬಂಧಿಸಲಾಗಿದೆ.


ಅವಳಿನಗರದ ಇತಿಹಾಸದಲ್ಲಿ ಮೊದಲ ಬಾರಿಗೆ ಬಯೋ ಡಿಸೇಲ್ ದಂಧೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ದಿ. 16ರಂದು ಅವಳಿನಗರ ಪೊಲೀಸರು ದಾಳಿ ನಡೆಸಿ 13 ಸಾವಿರ ಲೀಟರ್ ಬಯೋ ಡೀಸೆಲ್ ವಶಪಡಿಸಿಕೊಂಡಿದ್ದರಲ್ಲದೇ ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂದಿಸಿದಂತೆ ಎರಡು ದಿನಗಳ ಹಿಂದೆಯೇ ಇಬ್ಬರನ್ನೂ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಇತ್ತೀಚೆಗೆ ನಡೆದ ಪಾಲಿಕೆ ಚುನಾವಣೆಯಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ 71 ನೇ ವಾರ್ಡಿನಿಂದ ಓವೈಸಿ ಪಕ್ಷದಿಂದ ಸ್ಪರ್ಧಿಸಿ ಹೊನ್ಯಾಳ ಗೆಲುವು ಸಾಧಿಸಿದ್ದರು.
ಪೊಲೀಸರು ಮತ್ತಷ್ಟು ಆಳ ಅಗಲವನ್ನ ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದು ಈ ಇಬ್ಬರನ್ನೂ ಪೊಲೀಸರು ಇನ್ನಷ್ಟು ವಿಚಾರಣೆಗೊಳಪಡಿಸುವ ಸಾಧ್ಯತೆಗಳಿವೆ.ಆರೋಪಿತರ ಮೇಲೆ 420, 336 ಹಾಗೂ 285 ಮುಂತಾದ ಐಪಿಸಿ ಸೆಕ್ಷನ್‌ಗಳನ್ನು ಹಾಕಲಾಗಿದೆ ಎನ್ನಲಾಗಿದೆ.
ಪಾಲಿಕೆ ಸದಸ್ಯ ನಜೀರ್ ಸಹೋದರ ಹನೀಫ ಅಹ್ಮದ ಹೊನ್ಯಾಳ ಮಾಲಿಕತ್ವದಲ್ಲಿ ನಡೆಯುತ್ತಿದ್ದ ದಂಧೆಯ ಸುಳಿವು ದೊರೆತು ಸಿಸಿಬಿ ಇನ್ಸಪೆಕ್ಟರ್ ಅಲ್ತಾಫ ಮುಲ್ಲಾ ನೇತೃತ್ವದ ತಂಡ ದಾಳಿ ಮಾಡಿತ್ತು. ಕೈಗಾರಿಕೆಗಳಿಗೆ ಬಳಸುವ ಬಯೋ ಡೀಸೈಲ್‌ನ್ನು ಇವರು ಅಕ್ರಮವಾಗಿ ಸಂಗ್ರಹಿಸಿಕೊಂಡು ವಾಹನಗಳಿಗೆ ಇಲ್ಲಿ ಮಾರಾಟ ಮಾಡುತ್ತಿದ್ದರು. ವಶಪಡಿಸಿಕೊಂಡ ಡೀಸೆಲ್ ಅನ್ನು ಪ್ರಯೋಗಾಲಯಕ್ಕೂ ಕಳುಹಿಸಲಾಗಿದೆ.

administrator

Related Articles

Leave a Reply

Your email address will not be published. Required fields are marked *