ಹುಬ್ಬಳ್ಳಿ: ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಇಬ್ಬರನ್ನು ಇಲ್ಲಿನ ಶಹರ ಠಾಣಾ ಪೊಲೀಸರು ನಿನ್ನೆ ರಾತ್ರಿ ಬಂಧಿಸಿದ್ದಾರೆ.
ನಗರದ ಮಂಟೂರ ರೊಡ್ ಕೃಪಾದಾನಂ ಸ್ಕೂಲ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಮೊಯಿನ ಸಾದೀಕ ಸುಬೇದಾರ ಹಾಗೂ ಮಹ್ಮದಹನೀಪ ಅಲಿಯಾಸ್ ಸದ್ದಾಂ ಬಂಕಾಪೂರ ಎಂಬಿಬ್ಬರೇ ಬಂಧಿಸಲ್ಪಟ್ಟವರಾಗಿದ್ದಾರೆ.
6 ರಂದು ರಾತ್ರಿ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದ ಶಹರ ಠಾಣಾ ಇನ್‌ಸ್ಪೆಕ್ಟರ್ ಆನಂದ ಒಣಕುದ್ರೆ ಹಾಗೂ ತಂಡ ದಾಳಿ ನಡೆಸಿ ಇಬ್ಬರನ್ನು ಬಂಧಿಸಿ 50,200 ರೂ. ನಗದು, ಒಂದು ಗೂಗಲ್ ಎಂಡ್ರಾಯಿಡ್ ಮೊಬೈಲ್‌ನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.