ಹುಬ್ಬಳ್ಳಿ-ಧಾರವಾಡ ಸುದ್ದಿ
ಜಾತ್ರೆ ಬ್ಯಾನರ್ ಕಟ್ಟುವಾಗ ವಿದ್ಯುತ್ ಶಾಕ್: ಪಿಯುಸಿ ವಿದ್ಯಾರ್ಥಿ ಸಾವು

ಜಾತ್ರೆ ಬ್ಯಾನರ್ ಕಟ್ಟುವಾಗ ವಿದ್ಯುತ್ ಶಾಕ್: ಪಿಯುಸಿ ವಿದ್ಯಾರ್ಥಿ ಸಾವು

ಇನ್ನೋಬ್ಬನ ಸ್ಥಿತಿ ಗಂಭೀರ

ಶಿಗ್ಗಾವಿ: ತಾಲೂಕಿನ ಕ್ಯಾಲಕೊಂಡ ಗ್ರಾಮದಲ್ಲಿ ಗ್ರಾಮ ದೇವತೆಯ ಜಾತ್ರಾ ಮಹೋತ್ಸದ ಅಂಗವಾಗಿ ಬ್ಯಾನರ್ ಕಟ್ಟಲು ಹೋಗಿ ವಿದ್ಯುತ್ ಶಾಕ್‌ನಿಂದ ಓರ್ವ ಮೃತಪಟ್ಟರೆ ಇನ್ನೊಬ್ಬ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ಹರೀಶ (ರಾಜಹರ್ಷ) ಮಹೇಶ ಕಮ್ಮಾರ (18) ಮೃತಪಟ್ಟ ದುರ್ದೈವಿ ಯಾಗಿದ್ದು, ಇನ್ನೋರ್ವ ಮಹ್ಮದಕೈಪ್ ಇಮ್ತಿಯಾಜ್ ಮುಲ್ಲಾ (18) ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾನೆ.
ತಾಲೂಕಿನ ಕ್ಯಾಲಕೊಂಡ ಗ್ರಾಮದಲ್ಲಿ ಮೂರು ವರ್ಷಕ್ಕೋಮ್ಮೆ ಜರುಗುವ ಗ್ರಾಮದೇವಿ ಜಾತ್ರೋತ್ಸವ ಶನಿವಾರ ಬೆಳಿಗ್ಗೆ ಸುಮಾರು ೩೫ ಪೂಟು ಅಳತೆಯ ಬ್ಯಾನರ್‌ನ್ನು ಮೋಬಾಯಿಲ್ ಟಾವರ್ ಕಂಬಕ್ಕೆ ಕಟ್ಟುವಾಗ ತೀವ್ರವಾದ ಗಾಳಿ ಬೀಸಿದ್ದರಿಂದ ಮೆಲಿದ್ದವರು ಬ್ಯಾನರ್ ಕಟೌಟ್ ಕೈಬಿಟ್ಟಾಗ ಅದು ಕೆಳಗಿದ್ದ ವಿದ್ಯುತ್ ತಂತಿಯ ಮೇಲೆ ಬಿದ್ದಿದೆ ತಕ್ಷಣ ಕೆಳಗಿನಿಂದ ಎತ್ತಿ ಹಿಡಿದ ಹರೀಶ ಮತ್ತು ಮಹ್ಮದ ಕೈಪ್ ಇಬ್ಬರಿಗೂ ವಿದ್ಯುತ್ ಶಾಕ್ ಹೊಡೆದಿದೆ. ತಕ್ಷಣ ಕಿಮ್ಸ್‌ಗೆ ಕರೆದೊಯ್ಯಲಾಯಿತಾದರೂ, ಚಿಕೆತ್ಸೆ ಪಡೆಯುವ ವೇಳೆಯಲ್ಲಿ ಹರೀಶ ಮೃತ ಪಟ್ಟಿದ್ದು, ಇನ್ನೋರ್ವನ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ.
ಹರೀಶ ಪಿಯುಸಿ ದ್ವಿತೀಯ ವರ್ಷದ ಕಲಾವಿಭಾಗದ ವಿದ್ಯಾರ್ಥಿಯಾಗಿದ್ದು ಹುಲಗೂರ ಗ್ರಾಮದ ಶ್ರೀಮತಿ ಗಂಗಮ್ಮ ಎಸ್,ಬೊಮ್ಮಾಯಿ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗವನ್ನು ಮಾಡುತ್ತಿದ್ದ. ಸಣ್ಣವನಿದ್ದಾಗಲೆ ತಂದೆಯನ್ನು ಕಳೆದುಕೊಂಡಿದ್ದ ಓರ್ವ ತಂಗಿಯನ್ನು ಕೂಡಾ ಇವರ ತಾಯಿ ಕೂಲಿನಾಲಿಯನ್ನು ಮಾಡಿ ಒದಿಸುತ್ತಿದ್ದಳು.

administrator

Related Articles

Leave a Reply

Your email address will not be published. Required fields are marked *