14.83 ಲಕ್ಷ ಹಣ, 4 ಕಾರು, 8 ಮೊಬೈಲ್ ಜಪ್ತಿ
ಗದಗ: ಗದಗ ಪೊಲೀಸರು ಮುಂಡರಗಿ ತಾಲೂಕಿನ ಬಿದರಹಳ್ಳಿ ಗ್ರಾಮದ ಹೊರವಲಯದಲ್ಲಿ ನಿನ್ನೆ ಲಕ್ಷ ಲಕ್ಷ ಹಣದೊಂದಿಗೆ ಇಸ್ಪೀಟ್ ಎಲೆ ತಟ್ಟುತ್ತಿದ್ದ17 ಜನರನ್ನು ಬಂಧಿಸಿ, 14.83 ಲಕ್ಷಕ್ಕೂ ಅಧಿಕ ಹಣ ವಶಕ್ಕೆ ಪಡೆದು ಭರ್ಜರಿ ಬೇಟೆಯಾಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಅವರ ಮಾರ್ಗದರ್ಶನದಲ್ಲಿ ಡಿಸಿಆರ್‌ಬಿ ಡಿಎಸ್‌ಪಿ ವಿಜಯ ಬಿರಾದಾರ ನೇತೃತ್ವದ ತಂಡವು ಖಚಿತ ಮಾಹಿತಿ ಮೇರೆಗೆ ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿ, ಒಟ್ಟು 14.83 ಲಕ್ಷ ರೂ.ಗೂ ಅಧಿಕ ಹಣ, 4 ಕಾರು, 18 ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದಾರೆ.
ಗದಗ ಮೂಲದ 15 ಕ್ಕೂ ಅಧಿಕ ಆರೋಪಿಗಳು ಪರಾರಿಯಾಗಿದ್ದು, ವಿವಿಧ ಜಿಲ್ಲೆಗಳಾದ ಚಿತ್ರದುರ್ಗ, ಹಾವೇರಿ, ದಾವಣಗೆರೆ, ವಿಜಯನಗರ, ಬಳ್ಳಾರಿಯವರು ಬಂಧಿಸಲ್ಪಟ್ಟಿದ್ದು, ಇವರಲ್ಲಿ ಹೂವಿನಹಡಗಲಿಯ ಮಾಗಳ ಹೈಸ್ಕೂಲ್‌ನಲ್ಲಿ ಎಫ್‌ಡಿಎ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಬಿ.ಆರ್. ವೆಂಕಟೇಶ ನಾಯಕ ಹಾಗೂ ಚಿತ್ರದುರ್ಗದ ಸರ್ವೇ ಇಲಾಖೆಯಲ್ಲಿ ಹೊರಗುತ್ತಿಗೆ ನೌಕರನಾಗಿರುವ ಕಾಶಿ ವಿಶ್ವನಾಥ ಶಿವಣ್ಣ ಸೇರಿದ್ದಾರೆ.
ಎನ್. ತಿಪ್ಪೇಸ್ವಾಮಿ, ಕೊಟ್ರಯ್ಯ ಮರಿಕೊಟ್ರಯ್ಯ, ಕೊಮಾರೆಪ್ಪ ಬಣಕಾರ, ಶಿವು ತಾಯಿ ಗುಳ್ಳಮ್ಮ, ಚಂದ್ರಶೇಖರ ಸಿದ್ಧಪ್ಪ, ಲೋಕೇಶ ಪತ್ರಿ, ಅಶೋಕ ಮಡಿವಾಳರ, ಮಂಜುನಾಥ ಮುದ್ದಣ್ಣವರ, ನಾಗೇಶ ರೇವಣ್ಣ, ಎಸ್. ಕೊಟ್ರೇಶ, ಫಕ್ಕೀರಪ್ಪ ಕೂಡ್ಲಿಗಿ, ರಾಜಶೇಖರ ಬಾರಕೇರ, ಎ. ಆನಂದ, ಎಂ. ರವೀಂದ್ರನಾಥ, ದುರ್ಗಪ್ಪ ಚಂದ್ರಪ್ಪ ಎಂ. ಬಂಧಿಸಲ್ಪಟ್ಟ ಇತರರಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಇನ್ಸಪೆಕ್ಟರ್‌ಗಳಾದ ಶರಣಗೌಡ ಚೌಧರಿ, ಮಹಾಂತೇಶ ಟಿ., ಪಿಎಸ್‌ಐ ವಡಗೇರಿ ಹಾಗೂ ಅನೇಕ ಸಿಬ್ಬಂದಿಗಳಿದ್ದರು.