ಧಾರವಾಡ : ಅಪ್ರಾಪ್ತಯೋರ್ವಳನ್ನು ಕರೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿದ ಪ್ರಕರಣ ಪೇಡೆನಗರಿಯಲ್ಲಿ ನಡೆದಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.
ಇಲ್ಲಿನ ಲಕ್ಷ್ಮೀಸಿಂಗನಕೇರಿಯ ಅಪ್ರಾಪ್ತಳ ಮೇಲೆ ಅದೇ ಬಡಾವಣೆಯ ಐವರು ಯುವಕರು ಅತ್ಯಾಚಾರ ನಡೆಸಿದ್ದಾರೆನ್ನಲಾಗಿದೆ.
ಬಾಸೆಲ್ ಮಿಶನ್ ಕಾಲೇಜಿನ ವಿದ್ಯಾರ್ಥಿಯಾದ ಬಾಲಕಿಯನ್ನು ನಗರದ ಹೊರವಲಯಕ್ಕೆ ಒತ್ತಾಯದಿಂದ ಕರೆದುಕೊಂಡು ಹೋದ ಅಪ್ರಾಪ್ತ ಯುವಕರು,ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆನ್ನಲಾಗಿದೆ.
ಈ ಕುರಿತು ಶಹರ ಠಾಣೆಯ ಪೊಲೀಸರು ತನಿಖೆ ಕೈಕೊಂಡಿದ್ದಾರೆ. ವಿದ್ಯಾಕಾಶಿಯಲ್ಲಿ ನಡೆದಿರುವಂತಹ ಘಟನೆ ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ.