ಹುಬ್ಬಳ್ಳಿ-ಧಾರವಾಡ ಸುದ್ದಿ

ಕಿಡಿಗೇಡಿಗಳಿಂದ 65 .ಲಕ್ಷ.ರೂ ಮೌಲ್ಯದ ಪೈಪ್‌ಗಳಿಗೆ ಬೆಂಕಿ

ಧಾರವಾಡ: ಜಲ ಜೀವನ್ ಮಿಷನ್ ಯೋಜನೆಯಡಿ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಸಂಗ್ರಹಿಸಿ ಇಡಲಾಗಿದ್ದ ಅಂದಾಜು 65.ಲಕ್ಷ.ರೂ, ಮೌಲ್ಯದ ಪೈಪ್‌ಗಳಿಗೆ ನಿನ್ನೆ ತಡರಾತ್ರಿ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ಜರುಗಿದೆ.
ಗ್ರಾಮ ಪಂಚಾಯಿತಿ ಕಚೇರಿಯ ಹಿಂಭಾಗದಲ್ಲಿ ಈ ಪೈಪ್‌ಗಳನ್ನು ತಂದಿಡಲಾಗಿತ್ತು. ಪೈಪ್‌ಗಳನ್ನು ಅಳವಡಿಸುವ ಕುರಿತು ಅಧಿಕಾರಿಗಳು ಪರಿಶೀಲನೆ ಕೂಡ ಮಾಡಿ ಹೋಗಿದ್ದರು ಎನ್ನಲಾಗಿದೆ.


ಆದರೆ, ನಿನ್ನೆ ತಡರಾತ್ರಿ ಪೈಪ್‌ಗಳಿಗೆ ಕಿಡಿಗೇಡಿಗಳು ಬೆಂಕಿ ಇಟ್ಟು ಪರಾರಿ ಯಾಗಿದ್ದಾರೆ. ದುಷ್ಕರ್ಮಿಗಳ ಕೃತ್ಯಕ್ಕೆ ಪೈಪ್‌ಗಳು ಮತ್ತು ಪಕ್ಕದಲ್ಲಿ ಗ್ರಾಮ ಪಂಚಾಯತನವರು ಇಟ್ಟಿದ್ದ ವಸ್ತುಗಳು ಕೂಡ ಸುಟ್ಟು ಭಸ್ಮವಾಗಿವೆ.
ಬೆಂಕಿಯ ಕೆನ್ನಾಲಿಗೆ ಅಲ್ಲದೇ ಪಕ್ಕದಲ್ಲಿದ್ದ ತ್ಯಾಜ್ಯ ವಿಲೇವಾರಿ ಘಟಕಕ್ಕೂ ತಗುಲಿದೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಹೆಚ್ಚಿನ ಅನಾಹುತ ಆಗುವುದನ್ನು ತಪ್ಪಿಸಿದ್ದಾರೆ.
ಇಂದು ಘಟನಾ ಸ್ಥಳಕ್ಕೆ ಜಿಲ್ಲಾ ಪಂಚಾಯ್ತಿ ಸಿಇಓ ಡಾ. ಸುರೇಶ ಇಟ್ನಾಳ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ, ಸಿಪಿಐ ಶ್ರೀಧರ ಸತಾರೆ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್ ತನಿಖೆ

ಘಟನೆಯಲ್ಲಿ ಗುತ್ತಿಗೆದಾರರು ಸಂಗ್ರಹಿಸಿದ್ದ ಪೈಪ್ ಗಳು ಮತ್ತು ಗ್ರಾಮ ಪಂಚಾಯತ ವಸ್ತುಗಳು ಸುಟ್ಟಿವೆ. ಈ ಕುರಿತು ಪ್ರತ್ಯೇಕ ದೂರುಗಳು ಪೊಲೀಸರಿಗೆ ಸಲ್ಲಿಕೆಯಾಗಲಿವೆ.
ಡಾ.ಸುರೇಶ ಇಟ್ನಾಳ, ಜಿ.ಪಂ. ಸಿಇಒ

administrator

Related Articles

Leave a Reply

Your email address will not be published. Required fields are marked *