ಹುಬ್ಬಳ್ಳಿ-ಧಾರವಾಡ ಸುದ್ದಿ
ಮೊರಬ : ಮಾವನಿಂದ ಅಳಿಯನ ಕೊಲೆ

ಮೊರಬ : ಮಾವನಿಂದ ಅಳಿಯನ ಕೊಲೆ

ನವಲಗುಂದ: ತಾಲೂಕಿನ ಮೊರಬ ಗ್ರಾಮದಲ್ಲಿ ಇಂದು ಮುಂಜಾನೆ ಮಾವನೇ ಅಳಿಯನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ.
ಮನೆಯ ಮುಂದೆ ಮಲಗಿದಾತನ ಕತ್ತನ್ನು ಸೀಳಿ ಬರ್ಭರ ಹತ್ಯೆ ಮಾಡಿರುವ ಘಟನೆ ತಾಲೂಕಿನ ಮೊರಬ ಗ್ರಾಮದಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ರಮೇಶ ಯರಗಣ್ಣನವರ (45) ಕೊಲೆಯಾದ ವ್ಯಕ್ತಿಯಾಗಿದ್ದು, ಮಾವ ಲಿಂಬಣ್ಣ ಮೂಗನೂರನಿಂದಲೇ ಕೃತ್ಯ ನಡೆದಿದೆ ಎನ್ನಲಾಗುತ್ತಿದೆ.
ರಮೇಶ ಕೊಡುತ್ತಿದ್ದ ಕಿರುಕುಳ ತಾಳದೇ ಲಿಂಬಣ್ಣ ಹರಿತವಾದ ಆಯುಧದಿಂದ ರಮೇಶನ ಕುತ್ತಿಗೆ ಸೀಳಿದ್ದರಿಂದ ಆತ ಮಲಗಿದಲ್ಲಿಯೇ ಮೃತಪಟ್ಟಿದ್ದಾನೆ. ಸ್ಥಳಕ್ಕೆ ನವಲಗುಂದ ಠಾಣೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.
ಏಕಾಏಕಿ ನಡೆದ ಘಟನೆಯಿಂದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.

 

administrator

Related Articles

Leave a Reply

Your email address will not be published. Required fields are marked *