ಮುಂದುವರಿದ ಕೇಶ್ವಾಪುರ ಪೊಲೀಸರ ಕಾರ್ಯಾಚರಣೆ
ಮಂಗಳೂರು ಮೂಲದ ಮೂವರು,ಹುಬ್ಳಳ್ಳಿಯ ಓರ್ವನ ಬಂಧನ
ಹುಬ್ಬಳ್ಳಿ : ಕದ್ದ ಐಷಾರಾಮಿ ಕಾರುಗಳನ್ನು ಹುಬ್ಬಳ್ಳಿಗೆ ತಂದು ನಕಲಿ ದಾಖಲೆ ಮೂಲಕ ಅಡವಿಟ್ಟು ನಂತರ ಅವುಗಳನ್ನು ಕಳುವು ಮಾಡುತ್ತಿದ್ದ ಜಾಲದ ಮಂಗಳೂರು ಮೂಲದ ಮತ್ತಿಬ್ಬರನ್ನು ವಶಕ್ಕೆ ಪಡೆದಿರುವ ಕೇಶ್ವಾಪುರ ಪೊಲೀಸರು ಮತ್ತೆ ಸುಮಾರು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆನ್ನಲಾಗಿದೆ.
ಕಳೆದ ದಿ. 14ರಂದು ಕೇಶ್ವಾಪುರ ಪೊಲೀಸರು ಮಂಗಳೂರಿನವರಾದ ಮಹ್ಮದ ಫಯಾಜ್,ಇನಾಯತ್,ಇಮ್ರಾನ್ ಹಾಗೂ ಹುಬ್ಬಳ್ಳಿಯ ಮದ್ಯವರ್ತಿ ರಾಜೇಶ ಹೆಗಡೆ ಇವರನ್ನು ಬಂಧಿಸಿ ಸುಮಾರು 50 ಲಕ್ಷ ಮೌಲ್ಯದ ಮೂರು ಇನ್ನೋವಾ ವಾಹನಗಳನ್ನು ವಶಪಡಿಸಿಕೊಂಡಿದ್ದರು.
ತನಿಖೆ ಮುಂದುವರಿಸಿರುವ ಕೇಶ್ವಾಪುರ ಇನ್ಸಪೆಕ್ಟರ್ ಜಗದೀಶ ಹಂಚಿನಾಳ ಹಾಗೂ ಅಪರಾಧ ಸಿಬ್ಬಂದಿ ಮತ್ತಿಬ್ಬರನ್ನು ವಶಕ್ಕೆ ಪಡೆದು ಸ್ವಿಪ್ಟ್, ಬಲೆನೊ,ಇನ್ನೋವಾ ಸೇರಿದಂತೆ ಮತ್ತೆ 7 ವಾಹನ ಜಪ್ತಿ ಮಾಡಿದ್ದಾರೆನ್ನಲಾಗಿದೆ.
ಬೆಂಗಳೂರು, ಮಂಗಳೂರು ಅಲ್ಲದೇ ಕೇರಳ ರಾಜ್ಯದ ಕೆಲವೆಡೆಗಳಲ್ಲೂ ಈ ಗ್ಯಾಂಗ್ ತನ್ನ ಕೈ ಚಳಕ ತೋರಿಸಿದ್ದು ಅವರಿಗಾಗಿ ಕೇಶ್ವಾಪುರ ಪೊಲೀಸ್ ತಂಡ ಮತ್ತೆ ಮಂಗಳೂರಿಗೆ ತೆರಳಲಿದೆ ಎನ್ನಲಾಗಿದೆ.ಅಂತಾರಾಜ್ಯ ಜಾಲದ ಮತ್ತಷ್ಟು ಜನ ಬಲೆಗೆ ಬೀಳುವ ಸಾಧ್ಯತೆಗಳಿದ್ದು ಇನ್ನಷ್ಟು ವಾಹನ ಪತ್ತೆಯಾಗಬಹುದಾಗಿದ್ದು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಬಗೆದಷ್ಟು ಮಾಹಿತಿ ದೊರಕುತ್ತಿದೆ ಎನ್ನಲಾಗಿದೆ.
ಮಂಗಳೂರು ಸೇರಿದಂತೆ ವಿವಿಧೆಡೆಯಿಂದ ಹಣಕಾಸು ಸಂಸ್ಥೆಗಳು ಸೀಜ್ ಮಾಡಿದ ವಾಹನಗಳನ್ನು ತಂದು ಗಾಡಿಯನ್ನು ತಂದು ಹುಬ್ಬಳ್ಳಿಯ ಕೆಲವರ ಬಳಿ ಅಡವಿಟ್ಟು ಹಣ ಪಡೆಯುತ್ತಿತ್ತು.
ಹುಬ್ಬಳ್ಳಿಯಲ್ಲಿ ಕಳುವಾದ ಕಾರು ಸಹ ಪತ್ತೆಯಾಗಿದೆ ಎನ್ನಲಾಗಿದ್ದು ಒಟ್ಟು ಇದುವರೆಗೆ ಕೋಟ್ಯಂತರ ಮೌಲ್ಯದ 10 ವಾಹನಗಳನ್ನು ವಶಪಡಿಸಿಕೊಂಡಂತಾಗಿದೆ.