ಹುಬ್ಬಳ್ಳಿ-ಧಾರವಾಡ ಸುದ್ದಿ
ಪೇದೆ ಆತ್ಮಹತ್ಯೆ: ಕಿರಾತಕರಿಗೆ ಜಾಲ!  ಎಫ್‌ಐಆರ್‌ನಲ್ಲಿ 9 ಜನರ ಹೆಸರು

ಪೇದೆ ಆತ್ಮಹತ್ಯೆ: ಕಿರಾತಕರಿಗೆ ಜಾಲ! ಎಫ್‌ಐಆರ್‌ನಲ್ಲಿ 9 ಜನರ ಹೆಸರು

ಗದಗ: ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಬೆಟಗೇರಿ ಬಡಾವಣೆ ಪೊಲೀಸ್ ಪೇದೆ ಪವಾಡಿಗೌಡ ಚನ್ನವೀರಗೌಡ ಪಾಟೀಲ(36) ಅಂತ್ಯಕ್ರಿಯೆ ಲಕ್ಕುಂಡಿ ಗ್ರಾಮದಲ್ಲಿ ಇಂದು ನಡೆದಿದ್ದು, ಈತನ ಸಾವಿಗೆ ಕಾರಣರಾದ ಹಾಗೂ ಕಿರುಕುಳ ನೀಡಿದ ಕಿರಾತಕರಿಗೆ ಪೊಲೀಸರು ಜಾಲ ಬೀಸಿದ್ದಾರೆ.
ಪೊಲೀಸ್ ಗೌರವದೊಂದಿಗೆ ಪೊಲೀಸ್ ಪೇದೆ ಅಂತ್ಯ ಸಂಸ್ಕಾರ ನೆರವೇರಿಸ ಲಾಗಿದ್ದು ಡಿವೈಎಸ್ಪಿ ಶಿವಾನಂದ, ಸಿಪಿಐ ರವಿಕುಮಾರ್ ಕಪ್ಪತ್ತನವರ ಸೇರಿ ನೂರಾರು ಪೊಲೀಸ್ ಇಲಾಖೆ ಸಿಬ್ಬಂದಿ ಭಾಗಿ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.


ಈ ಸಂಬಂಧ ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 9 ಜನ ಆರೋಪಿತರ ಹೆಸರು ಎಫ್ ಐಆರ್‌ನಲ್ಲಿದೆ. ಬೆಟಗೇರಿ ಠಾಣೆ, ಸಂಚಾರಿ ಠಾಣೆ, ಸಿಇಎನ್ ಹಾಗೂ ಮುಂಡರಗಿ ಠಾಣೆ ಸೇರಿದಂತೆ ಐವರು ಪೊಲೀಸರ ಹೆಸರು ಅಲ್ಲದೇ ಇಬ್ಬರು ಪತ್ರಕರ್ತರ ಹೆಸರು ಎಫ್‌ಐಆರ್ ನಲ್ಲಿದೆ.
ವಾಸದ ಮನೆಯ ಬೆಡ್ ರೂಂ ನಲ್ಲಿ ನೇಣಿಗೆ ಶರಣಾದ ಅಜ್ಜುಗೌಡ ಪಾಟೀಲ ಸುಮಾರು ನಾಲ್ಕು ಪುಟಗಳಷ್ಟು ಡೆತ್‌ನೋಟ್ ಬರೆದಿಟ್ಟಿದ್ದಾರೆ. ಅದರಲ್ಲೂ ಕಿರುಕುಳ ನೀಡಿದವರ ಹೆಸರು ಬರೆದಿಟ್ಟಿದ್ದಾರೆ ಎನ್ನಲಾಗಿದೆ. ಕಳೆದ ವರ್ಷ ಡಬ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿತ್ತು. ಆದರೆ, ಆರೋಪಿಯ ಸಂಬಂಧಿಕರ

ಮಹಿಳೆಯ ಜತೆ ಅಜ್ಜುಗೌಡ ಪಾಟೀಲ ಪ್ರೀತಿಯ ಬಲೆಗೆ ಬಿದ್ದಿದ್ದು, ಈ ಪ್ರೇಮ ಮುಂದು ವರೆದು ವಾಟ್ಸ್‌ಆಪ್ ಚಾಟಿಂಗ್‌ನಲ್ಲಿ ಅರೇ ನಗ್ನ ಚಾಟಿಂಗ್ ಡಿಟೇಲ್ಸ್ ವೈರಲ್ ಆಗಿದ್ದು ಇದನ್ನೇ ಬಂಡವಾಳವಾಗಿಟ್ಟುಕೊಂಡ ಕೆಲ ಕಿಡಿಗೇಡಿಗಳು ಈತನನ್ನು ಬ್ಲಾಕ್ ಮಾಡುತ್ತಿದ್ದರು ಎನ್ನಲಾಗಿದೆ.

administrator

Related Articles

Leave a Reply

Your email address will not be published. Required fields are marked *