ಹುಬ್ಬಳ್ಳಿ : ಅವಳಿನಗರದಲ್ಲಿ ಕಳ್ಳರ ಕೈ ಚಳಕ ಮುಂದುವರಿದಿದ್ದು, ಜನನಿಬಿಡ ನ್ಯೂ ಕಾಟನ್ ಮಾರ್ಕೆಟ್‌ನಲ್ಲಿನ ಅಟೋಮೊಬೈಲ್ ಅಂಗಡಿಯ ಶಟರ್‍ಸ್ ಮುರಿದು ಒಳನುಗ್ಗಿ ಲಕ್ಷಾಂತರ ರೂ ನಗದು ದೋಚಲಾಗಿದೆ.
ಶಾರದಾ ಹೊಟೆಲ್ ಬಳಿಯ ಪ್ರಕಾಶ ಬಾಫಣಾ ಅವರಿಗೆ ಸೇರಿದ ರಾಜಧಾನಿ ಅಟೋಮೊಬೈಲ್‌ಗೆ ಅಂಗಡಿಗೆ ನುಗ್ಗಿದ ಕಳ್ಳರು ಲಾಕರ್ ಒಡೆದು ಸುಮಾರು ಎರಡು ಲಕ್ಷ ರೂ.ಗಳಿಗೂ ಹೆಚ್ಚಿನ ನಗದನ್ನು ಕಳುವು ಮಾಡಿಕೊಂಡು ಕಾಲ್ಕಿತ್ತಿದ್ದಾರೆ.
ಘಟನಾ ಸ್ಥಳಕ್ಕೆ ಉತ್ತರ ಎಸಿಪಿ ವಿನೋದ ಮುಕ್ತೆದಾರ, ಇನ್ನಪೆಕ್ಟರ್ ರವಿಚಂದ್ರ ಡಿ.ಬಿ.ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕಳ್ಳರು ತಮ್ಮ ಕರಾಮತ್ತು ತೋರಿಸುವ ಮೊದಲು ಸಿಸಿಟಿವಿ ಬಂದ್ ಮಾಡಿದ್ದಾರೆನ್ನಲಾಗಿದ್ದು ಇಲ್ಲಿನ ಎಲ್ಲ ಚಟುವಟಿಕೆಗಳನ್ನು ಅವಲೋಕಿಸಿ ಕೃತ್ಯ ಎಸಗಿರಬಹುದೆನ್ನಲಾಗಿದೆ.
ಕಳೆದ ಒಂದು ತಿಂಗಳಲ್ಲಿ ಅವಳಿ ನಗರದಲ್ಲಿ ಕಳುವಿನ ಪ್ರಕರಣಗಳು ಹೆಚ್ಚಿಗೆಯಾಗುತ್ತಿದ್ದು ಒಂದೇ ತಂಡ ಮಾಡುತ್ತಿರಬಹುದೆಂಬ ಶಂಕೆ ಪೊಲೀಸರಿಗಿದ್ದು ಕಳ್ಳರಿಗಾಗಿ ಉಪನಗರ ಪೊಲೀಸರು ಜಾಲ ಬೀಸಿದ್ದಾg