ಹುಬ್ಬಳ್ಳಿ-ಧಾರವಾಡ ಸುದ್ದಿ
ಲೈಂಗಿಕ ಕಿರುಕುಳ : ಇಬ್ಬರು ಅಂದರ್ ಬಂಧಿತರು ನೆಕ್ಟರ್ ಬೆವರೇಜಸ್ ಉದ್ಯೋಗಿಗಳು

ಲೈಂಗಿಕ ಕಿರುಕುಳ : ಇಬ್ಬರು ಅಂದರ್ ಬಂಧಿತರು ನೆಕ್ಟರ್ ಬೆವರೇಜಸ್ ಉದ್ಯೋಗಿಗಳು

ಧಾರವಾಡ : ಮಹಿಳೆಯೊಬ್ಬಳನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ ಇಬ್ಬರನ್ನು ಇಲ್ಲಿನ ಉಪ ನಗರ ಠಾಣೆಯ ಪೊಲೀಸರು ಬಂಧಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಧಾರವಾಡದ ಸಂಜಯಕುಮಾರ ಹಿರೇಮನಿ ಮತ್ತು ಕರೆಪ್ಪ ಹಂಚಿನಮನಿ ಬಂಧಿತ ಆರೋಪಿಗಳು. ಬೆಳಗಾವಿ ರಸ್ತೆಯಲ್ಲಿರುವ ತಂಪು ಪಾನೀಯ ತಯಾರಿಸುವ ನೆಕ್ಟರ್ ಬೆವರೇಜಸ್‌ನಲ್ಲಿ ಈ ಘಟನೆ ನಡೆದಿದ್ದು, ಬಂಧಿತರು ನೆಕ್ಟರ್ ಬೆವರೇಜಸ್‌ನ ಉದ್ಯೋಗಿಗಳು.
ಅಲ್ಲಿಯೇ ದಿನಗೂಲಿ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯನ್ನು ಆರೋಪಿತರು, ಕೆಲಸದ ಸಮಯದಲ್ಲಿಯೇ ಆಕೆಯನ್ನು ತಮ್ಮ ದಾಹ ತೀರಿಸಿಕೊಳ್ಳಲು ಒತ್ತಾಯಿಸಿದ್ದಾರೆ.ಆದರೆ, ಆ ಮಹಿಳೆ ಒಪ್ಪದಿದ್ದಾಗ ಆಕೆಯನ್ನು ಬಲವಂತದಿಂದ ಎಳೆದಾಡಿದ್ದಾರೆ.
ಆಗ ಅಕೆ ಅಲ್ಲಿಯೇ ಸಮೀಪದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇತರ ಕಾರ್ಮಿಕರ ನೆರವಿನಿಂದ ತಪ್ಪಿಸಿಕೊಂಡಿದ್ದಾಳೆ. ನಂತರ ಆಕೆ ಉಪನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಇಬ್ಬರೂ ಆರೋಪಿತರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಸರಕಾರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ನಿದೇರ್ಶನಗಳನ್ನು ಉಲ್ಲಂಘಿಸುವ ಪ್ರವೃತ್ತಿ ಬೆಳೆಸಿಕೊಂಡಿರುವ ನೆಕ್ಟರ್ ಬೆವರೇಜಸ್‌ನಲ್ಲಿ ಇಂತಹ ಪ್ರಕರಣಗಳು ಆಗಾಗ್ಗೆ ನಡೆಯುತ್ತಿರುತ್ತವೆ ಎಂಬ ದೂರುಗಳಿವೆ. ಈ ಕುರಿತು ಸಂಬಂಧಿಸಿದವರು ಸೂಕ್ತ ಕ್ರಮ ಕೈಕೊಳ್ಳಬೇಕಿದೆ.

administrator

Related Articles

Leave a Reply

Your email address will not be published. Required fields are marked *