ಹುಬ್ಬಳ್ಳಿ-ಧಾರವಾಡ ಸುದ್ದಿ
ಕಿಮ್ಸ್ ವಸತಿಗೃಹದಲ್ಲಿ ಸರಣಿ ಕಳುವು

ಕಿಮ್ಸ್ ವಸತಿಗೃಹದಲ್ಲಿ ಸರಣಿ ಕಳುವು

ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆಯ ವಿವಿಧ ಬ್ಲಾಕ್‌ಗಳ ವಸತಿಗೃಹದ 6 ಮನೆಗಳಲ್ಲಿ ಸರಣಿ ಕಳ್ಳತನ ನಡೆದಿದೆ.


ಬೀಗ ಹಾಕಿದ್ದಂತಹ ಮನೆಗಳನ್ನೇ ಟಾರ್ಗೆಟ್ ಮಾಡಿರುವ ಕಳ್ಳರು ಬೀಗ ಮುರಿದು ಒಳನುಗ್ಗಿ ಕಳುವು ಮಾಡಿದ್ದಾರೆ. ಒಂದು ಮನೆಯಲ್ಲಿ ಸುಮಾರು 9 ತೊಲೆ ಚಿನ್ನಾಭರಣ ಕಳ್ಳತನವಾಗಿದೆ. ನಗದು ಸೇರಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ದೋಚಲಾಗಿದೆ.


ನಾಗರತ್ನಾ ಗುಳೇದ, ಅಶೋಕ ಸತ್ತಿಗೇರಿ, ಶೇಖವ್ವ ಹಿರೇಮಠ, ರೇಶ್ಮಾ ಡಬ್ಬೇ, ಸುಮಿತ್ರಾ ಎನ್ನುವವರ ಮನೆಯಲ್ಲಿ ಕಳ್ಳತನವಾಗಿದೆ. ಒಂದು ಮನೆಯಲ್ಲಿ ಸುಮಾರು ೯ ತೊಲೆ ಚಿನ್ನಾಭರಣ ಕಳ್ಳತನವಾಗಿದೆ. ನಗದು ಸೇರಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ದೋಚಲಾಗಿದೆ.


ನಾಲ್ವರು ಕಳ್ಳರಿಂದ ಈ ಕೃತ್ಯ ನಡೆದಿದ್ದು, ವಸತಿ ಗೃಹದಲ್ಲಿ ಕಳ್ಳರು ಮನೆಗೆ ನುಗ್ಗಿ ಚೆಕ್ ಮಾಡುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಎಂದು ತಿಳಿದುಬಂದಿದೆ.
ಎರಡೂ ತಿಂಗಳ ಹಿಂದೆಯೂ ವಸತಿ ಗೃಹದಲ್ಲಿ ಕಳ್ಳತನ ನಡೆದಿದ್ದು, ಪದೇ ಪದೇ ಕಳ್ಳತನ ಪ್ರಕರಣಗಳು ನಡೆಯುತ್ತಲೇ ಪೊಲೀಸರು ಶೀಘ್ರ ಪತ್ತೆ ಹಚ್ಚುವಂತೆ ಅಲ್ಲದೇ ಎಲ್ಲ ಪ್ರದೇಶಗಳಲ್ಲಿ ಸರಿಯಾಗಿ ಸಿಸಿಟಿವಿ ಅಳವಡಿಸಬೇಕೆಂದು ನಿವಾಸಿಗಳು ಆಗ್ರಹಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *