ಉಪನಗರ ಇನ್ಸಪೆಕ್ಟರ್ ಎಂ.ಎಸ್.ಹೂಗಾರರಿಂದ ಫೈರಿಂಗ್
ಹುಬ್ಬಳ್ಳಿ: ಕಳೆದ 26ರಂದು ಕೇಶ್ವಾಪುರದ ಜ್ಯುವೆಲರಿ ದೋಚಿದ್ದ ಆರೋಪಿಯ ಮೇಲೆ ಗುಂಡು ಹಾರಿಸಿದ್ದ ಘಟನೆಯ ಬೆನ್ನಲ್ಲೆ ಇಂದು ಉಪನಗರ ಇನ್‌ಸ್ಪೆಕ್ಟರ್ ಎಂ.ಎಸ್.ಹೂಗಾರ ಪರಾರಿಯಾಗಲೆತ್ನಿಸಿದ ದರೋಡೆಕೋರನೊಬ್ಬನ ಮೇಲೆ ಫೈರಿಂಗ್ ಮಾಡಿದ್ದಾರೆ.
ನೇಕಾರನಗರ ಮೂಲದ ಸೋನು ಅಲಿಯಾಸ ಅರುಣ ರಾಮು ನಾಯಕ ಎಂಬಾತನ ಕಾಲಿಗೆ ಗುಂಡು ಹಾರಿಸಲಾಗಿದ್ದು ಈಗ ಈತ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಕೆಲ ದಿನಗಳ ಹಿಂದೆ ಚೆನ್ನಮ್ಮ ವರ್ತುಳದಲ್ಲಿ ದರೋಡೆ ಮಾಡಿದ್ದ ಚೈನು, ಉಂಗುರ, ಮೊಬೈಲ್ ಅಲ್ಲದೆ ಹಣ ದೋಚಿದ್ದ ಪ್ರಕರಣದ ಆರೋಪಿ ಅರುಣ ನಾಯಕ ಉಳಿದ ಆರೋಪಿಗಳ ಮಾಹಿತಿ ನೀಡುವುದಾಗಿ ಹೇಳಿದ್ದ. ಕಾರಣ ಶುಕ್ರವಾರ ಬೆಳಿಗ್ಗೆ ಇನ್‌ಸ್ಪೆಕ್ಟರ್ ಹಾಗೂ ತಂಡ ಕಾರವಾರ ರಸ್ತೆಯ ಎಂಟಿಎಸ್ ಕಾಲೋನಿಯ ಬಳಿ ಕರೆದೊಯ್ದಾಗ ಪೊಲೀಸರ ಮೇಲೆಯೇ ಹಲ್ಲೇ ನಡೆಸಿ ಪರಾರಿಯಾಗಲು ಯತ್ನಸಿದಾಗ ಇನ್ಸಪೆಕ್ಟರ್ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.
ಪರಾರಿಯಾಗುವ ಯತ್ನದಲ್ಲಿ ಆರೋಪಿ ಹೆಡ್ ಕಾನ್‌ಸ್ಟೇಬಲ್ ಡಿ.ಅರ್.ಪಮ್ಮಾರ(1884) ಮತ್ತು ಕಾನಸ್ಟೇಬಲ್ ತರುಣ ಗಡ್ಡದವರ (1625) ಮೇಲೆ ಹಲ್ಲೆ ಮಾಡಿದ್ದು ಇಬ್ಬರಿಗೂ ಗಾಯಗಳಾಗಿದ್ದು ಇವರನ್ನೂ ಕಿಮ್ಸ್‌ಗೆ ದಾಖಲಿಸಲಾಗಿದೆ. ಆರೋಪಿ ನಾಯಕ ಮೇಲೆ ನಗರದ ವಿವಿಧ ಠಾಣೆಗಳಲ್ಲಿ 13ಕ್ಕೂ ಹೆಚ್ಚು ಪ್ರಕರಣಗಳಿವೆ ಎನ್ನಲಾಗಿದೆ. ನಿನ್ನೆ ಗದಗನಲ್ಲಿ ಸಹ ಆರೋಪಿಯೊಬ್ಬ ಪರಾರಿಯಾಗಲೆತ್ನಿಸಿದ ಸಂದರ್ಭದಲ್ಲಿ ಗುಂಡು ಹಾರಿಸದ್ದನ್ನು ಇಲ್ಲಿ ಸ್ಮರಿಸಬಹುದು.