ಹುಬ್ಬಳ್ಳಿ-ಧಾರವಾಡ ಸುದ್ದಿ
ಗೀತಾ ಹತ್ಯೆ: ಸಹಪಾಠಿಗಳಿಬ್ಬರ ತೀವ್ರ ವಿಚಾರಣೆ ಅಶ್ಲೀಲ ವಿಡಿಯೋ ಸೆರೆಹಿಡಿದು ಪೀಡಿಸಲಾಗಿತ್ತೆ?

ಗೀತಾ ಹತ್ಯೆ: ಸಹಪಾಠಿಗಳಿಬ್ಬರ ತೀವ್ರ ವಿಚಾರಣೆ ಅಶ್ಲೀಲ ವಿಡಿಯೋ ಸೆರೆಹಿಡಿದು ಪೀಡಿಸಲಾಗಿತ್ತೆ?

ಧಾರವಾಡ: ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಪಡೆಯುತ್ತಿದ್ದ ಯುವತಿಯೋರ್ವಳು ಖಾಸಗಿ ವಸತಿ ನಿಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಬೆನ್ನಟ್ಟಿರುವ ಪೊಲೀಸರು, ಘಟನೆಗೆ ಕಾರಣರಾದವರನ್ನು ಕಂಬಿ ಹಿಂದೆ ಕಳಿಸಲು ಕಾರ್ಯೋನ್ಮುಖರಾಗಿದ್ದಾರೆ.


ಕಳೆದ ಗುರುವಾರ ನೇಣಿಗೆ ಶರಣಾದ ರಬಕವಿ ಗೀತಾ ಲಕ್ಕಪ್ಪ ಹೆಗ್ಗಣ್ಣವರ ಅವಳ ಪಾಲಕರು, ಯವತಿ ತರಬೇತಿ ಪಡೆಯುತ್ತಿದ್ದ ಸಂಸ್ಥೆಯಲ್ಲಿ ಸಹಪಾಠಿಗಳಿಬ್ಬರನ್ನು ಎಂಬುವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಗೊತ್ತಾಗಿದೆ.
ಅಲ್ಲದೇ ಗೀತಾಳ ಸ್ನೇಹಿತರ ಮೊಬೈಲ್‌ಗಳನ್ನು ಸಹ ವಶಕ್ಕೆ ಪಡೆದಿರುವ ಪೊಲೀಸರು, ಇದಕ್ಕಾಗಿ ಸೈಬರ್ ಕ್ರೈಂ ಪರಿಣಿತರ ಸಲಹೆ ಪಡೆಯುತ್ತ ಗಮನಹರಿಸಿದ್ದಾರೆ ಎಂದು ಗೊತ್ತಾಗಿದೆ. ಗೀತಾಳಿಗೆ ಆಕೆಯ ಅಶ್ಲೀಲ ವಿಡಿಯೋಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ತೋರಿಸಿ ಪೀಡಿಸಲಾಗಿದೆ. ಇದರಿಂದ ನೊಂದ ಗೀತಾ ತನ್ನ ಊರು ರಬಕವಿಗೆ ಹೋದಾಗಲೂ ಆಕೆಗೆ ಕರೆ ಮಾಡಿ ಕಾಡಿಸಿದ್ದಾರೆ. ಆದರೆ, ಇದಾವುದನ್ನೂ ತನ್ನ ಪಾಲಕರ ಮತ್ತು ಸ್ನೇಹಿತರ ಎದುರು ಹೇಳಿಕೊಳ್ಳದೇ ಮೃದು ಮನಸ್ಸಿನ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬುದು ಆಕೆ ಪಾಲಕರ ಅಭಿಪ್ರಾಯ.
ಈ ಹಿನ್ನೆಲೆಯಲ್ಲಿ ಗೀತಾಳ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಉಪನಗರ ಠಾಣೆಯ ಪೊಲೀಸರು, ಅಮಾಯಕ ಯುವತಿಯ ಸಾವಿಗೆ ಕಾರಣರಾದ ದುರುಳರನ್ನು ಮಟ್ಟಹಾಕುವ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.
ತನಿಖೆ ಪೂರ್ಣಗೊಳ್ಳುವ ತನಕ ಯಾವುದೇ ವಿಷಯವನ್ನು ಬಿಟ್ಟುಕೊಡದೇ ರಹಸ್ಯ ಕಾಯ್ದುಕೊಂಡಿರುವ ಪೊಲೀಸರು, ಮುಂಬರುವ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸಿದಂತೆ ಮಾಡಲು ಶ್ರಮಿಸುತ್ತಿದ್ದಾರೆ.
ನಗರದಲ್ಲಿ ವಿವಿಧ ಶಾಲಾ-ಕಾಲೇಜುಗಳಲ್ಲಿ ಕಲಿಯುತ್ತಿರುವ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿರುವ ಅಂದಾಜಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಠಿಯಿಂದ ಗೀತಾಳ ಸಾವಿನ ಪ್ರಕರಣ ಮಹತ್ವ ಪಡೆದುಕೊಂಡಿದೆ.

administrator

Related Articles

Leave a Reply

Your email address will not be published. Required fields are marked *