ಹುಬ್ಬಳ್ಳಿ-ಧಾರವಾಡ ಸುದ್ದಿ
ತಪ್ಪಿಸಿಕೊಳ್ಳಲೆತ್ನಿಸಿದ ರೌಡಿಶೀಟರ್ ಅಪ್ತಾಬ್‌ಗೆ ಗುಂಡೇಟು

ತಪ್ಪಿಸಿಕೊಳ್ಳಲೆತ್ನಿಸಿದ ರೌಡಿಶೀಟರ್ ಅಪ್ತಾಬ್‌ಗೆ ಗುಂಡೇಟು

ಬಂಧಿಸಲು ತೆರಳಿದ ವೇಳೆ ಖಾಕಿಗಳ ಮೇಲೆ ಹಲ್ಲೆ

ಹುಬ್ಬಳ್ಳಿ: ಕಳೆದ ತಡರಾತ್ರಿ ಕಸಬಾ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಗ್ಯಾಂಗವಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಬಂಧನಕ್ಕೆ ತೆರಳಿದ ಪೊಲೀಸ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿ ತಪ್ಪಿಸಿಕೊಳ್ಳಲು ಮುಂದಾಗಿದ್ದ ರೌಡಿ ಶೀಟರ್ ಅಪ್ತಾಬ್ ಕರಡಿಗುಡ್ಡ ಕಾಲಿಗೆ ಗುಂಡು ಹೊಡೆದು ಮತ್ತೆ ಆತನನ್ನು ಬಂಧಿಸಲಾಗಿದೆ.


ಕಳೆದ ಭಾನುವಾರದಂದು ಕಸಬಾ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಗ್ಯಾಂಗ ವಾರ್‌ನಲ್ಲಿ ಜಾವೂರ್ ಎಂಬಾತ ಗಾಯವಾಗೊಂಡಿದ್ದ, ಗಾಯಾಳನ್ನು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಕುರಿತು ದೂರು ಪಡೆದುಕೊಂಡು ಆರೋಪಿಗಳ ಬಂಧನಕ್ಕೆ ಕಸಬಾ ಠಾಣೆಯ ಪೊಲೀಸರು ಮುಂದಾಗಿದ್ದರು. ಈ ವೇಳೆ ಬುಡರಸಿಂಗಿ ರಸ್ತೆಯಲ್ಲಿ ಆರೋಪಿ ಅಪ್ತಾಬ್ ಕರಡುಗುಡ್ಡ ಬಂಧನಕ್ಕೆ ಇನ್ಸ್ಪೆಕ್ಟರ್ ರಾಘವೇಂದ್ರ ಹಳ್ಳೂರು ತಂಡ ತೆರಳಿತ್ತು. ಆದರೆ ಈ ವೇಳೆ ಅಪ್ತಾಬ್ ಪೊಲೀಸ ಸಿಬ್ಬಂದಿಗಳಾದ ರಾಜು ರಾಠೋಡ್ ಮತ್ತು ಪಾಲಯ್ಯ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಕೂಡಲೇ ಅಲರ್ಟ್ ಆದ ಇನ್ಸ್ಪೆಕ್ಟರ್ ರಾಘವೇಂದ್ರ ಅವರು ಅಪ್ತಾಬ್ ಕಾಲಿಗೆ ಗುಂಡು ಹಾರಿಸಿ ಬಂಧನ ಮಾಡಿದ್ದಾರೆ. ಗಾಯಾಳು ಆರೋಪಿ ಸೇರಿ ಪೋಲೀಸ ಸಿಬ್ಬಂದಿಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಘಟನೆ ಮಾಹಿತಿ ಮೇರೆಗೆ ಕಿಮ್ಸದ ಆಸ್ಪತ್ರೆಗೆ ಹುಬ್ಬಳ್ಳಿ ಧಾರವಾಡ ಕಮಿಷನರ್ ಎನ್ ಶಶಿಕುಮಾರವರು ಭೇಟಿ ನೀಡಿ ಗಾಯಾಳು ಸಿಬ್ಬಂದಿ ಆರೋಗ್ಯ ವಿಚಾರಿಸಿದರು.


ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಸಬಾ ಪೊಲೀಸ ಠಾಣೆ ವ್ಯಾಪ್ತಿಯ ಸದರ್ ಸೋಫಾ ಬ್ಯಾಹಟಿ ಪಾರ್ಕ ಬಳಿ ಭಾನುವಾರ ಎರಡು ಗುಂಪುಗಳ ಮದ್ಯ ಗಲಾಟೆ ನಡೆದಿತ್ತು. ಜಾವೂರ ಬೇಪಾರಿ ಓರ್ವನಿಗೆ ಗಂಭೀರ ಗಾಯವಾಗಿತ್ತು. ಇದರಲ್ಲಿ ಜಾವೂರ ಬೇಪಾರಿ ಟೀಂ ಮತ್ತೊಂದು ಟೀಂನ ಮೇಲೆ ಹಲ್ಲೆಗೆ ಮುಂದಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳು ಕೌಂಟರ್ ದೂರು ನೀಡಿದ್ದಾರೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಏಳು ಜನರನ್ನು ರಾತ್ರಿಯೇ ಬಂಧನ ಮಾಡಿದ್ದಾರೆ. ಇನ್ನೂ ಅಪ್ತಾಬ್ ಆರೋಪಿ ಬುಡರಸಿಂಗಿ ಬಳಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ತಪಿಸಿಕೊಳ್ಳಲು ಮುಂದಾಗಿದ್ದ ಸಂದರ್ಭದಲ್ಲಿ ನಮ್ಮ ಠಾಣೆ ಇನ್ಸ್ಪೆಕ್ಟರ್ ಫೈರಿಂಗ್ ಮಾಡಿದ್ದಾರೆ. ಈಗ ಪ್ರಕರಣದ ತನಿಖೆ ಇನ್ನೂ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಕಳೆದ ಒಂದು ತಿಂಗಳದ ಅವಧಿಯಲ್ಲಿ ಪೊಲೀಸರ ಮೇಲೆಯೇ ಹಲ್ಲೆ ಯತ್ನ ಮಾಡಿ ಪರಾರಿಯಾಗಲು ಯತ್ನಿಸಿದ ರೌಡಿ ಶೀಟರ್‌ಗಳು, ಕಳ್ಳರು ಸಹಿತ ಮೂರು ಜನತರ ಮೇಲೆ ಫೈರಿಂಗ ಆಗಿದ್ದು ರೌಡಿ ಶೀಟರ್‌ಗಳಿಗೆ ಮತ್ತಷ್ಟು ನಡುಕ ಹುಟ್ಟಿಸಿದೆ.

 

administrator

Related Articles

Leave a Reply

Your email address will not be published. Required fields are marked *