ಹುಬ್ಬಳ್ಳಿ: ಗೋಕುಲ ರಸ್ತೆಯಲ್ಲಿ ಬೈಕ್ಗೆ ಕಾರು ತಗುಲಿತೆಂದು ವ್ಯಕ್ತಿಯೋರ್ವರನ್ನು ಥಳಿಸಿದ ಪ್ರಕರಣದಲ್ಲಿ ಬಂಧಿತರಾದ ಮೂವರು ಬಾಯ್ಬಿಟ್ಟ ಸ್ವತಃ ಪೊಲೀಸರಿಗೆ ಅಚ್ಚರಿ ತಂದಿದೆಯಲ್ಲದೇ 2-3 ಕಳುವಿನ ಹಾಗೂ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ.
ಕಳೆದ ದಿ.೧೯ರಂದು ಗೋಕುಲ ರಸ್ತೆಯ ಅಪೂರ್ವ ನಗರ ಬಳಿ 4.30ರ ಸುಮಾರಿಗೆ ಉಲ್ಲಾಸ ಪ್ರಭಾಕರ ಜಾಧವ ಎಂಬವರು ಕಾರಿನಲ್ಲಿ ತೆರಳುತ್ತಿದ್ದಾಗ ಆನಂದ ನಗರದ ಕೃಷ್ಣಾ ಕಾಲನಿಯ ಮಂಜುನಾಥ ಲಕ್ಕುಂಡಿ, ಗಣೇಶ ದೋಣಿ, ಹನುಮಂತಪ್ಪ ಸುರೇಭಾನ ಎಂಬವರು ಪಾನಮತ್ತರಾಗಿ ಒಂದೇ ದ್ವಿಚಕ್ರ ವಾಹನದಲ್ಲಿ ಹೊರಟಿದ್ದರು.ಈ ಸಂದರ್ಭದಲ್ಲಿ ಕಾರು ಸ್ಪಲ್ಪ ದ್ವಿಚಕ್ರ ವಾಹನಕ್ಕೆ ತಾಗಿದ್ದು ಕೆಳಕ್ಕೆ ಬಿದ್ದಿದ್ದಾರೆ.
ಈ ಸಂದರ್ಭದಲ್ಲಿ ಜಾದವ( 50) ಅವರನ್ನು ಮನಸೋ ಇಚ್ಚೆ ಥಳಿಸಿದ್ದು ಪ್ರಕರಣ ಗೋಕುಲ ಠಾಣೆ ಮೆಟ್ಟಿಲೇರಿದೆ.
ಪೊಲೀಸರು ವಿಚಾರಣೆ ಮಾಡುವಾಗ ತಾವು ಕೇವಲ ಹಲ್ಲೆ ನಡೆಸಿದ್ದಲ್ಲದೇ ಈ ಹಿಂದೆ ಧಾರವಾಡದಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ವೈನ್ ಶಾಪ್ ಕಳ್ಳತನ ಮಾಡಿದ್ದಲ್ಲದೇ ಗಂಗಿವಾಳದ ಜೂಜುಕೋರರಾದ ಸಂಜು ಪಟದಾರಿ ಹಾಗೂ ಚಂದ್ರು ಎಂಬುವವರ ಸಂಗಡ ರಾಯಚೂರ ಬಳಿ 17 ಲಕ್ಷ ದರೋಡೆ ಮಾಡಿರುವುದನ್ನು ಬಾಯಿ ಬಿಟ್ಟಿದ್ದಾರೆ.
ತದನಂತರ ಆರೋಪಿಗಳು ನೀಡಿದ ಮಾಹಿತಿಯನ್ವಯ ಪಟದಾರಿ ಅಲ್ಲದೇ ಚಂದ್ರು ಅವರನ್ನು ವಶಕ್ಕೆ ಪಡೆದು ಗೋಕುಲ ರಸ್ತೆ ಪೊಲೀಸರು ವಿಚಾರಣೆ ನಡೆಸಿದ್ದಾರಲ್ಲದೇ ಇವರ ಇನ್ನೋವಾ ಹಾಗೂ ಡಿಸೈರ್ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಮಂಜುನಾಥ ಲಕ್ಕುಂಡಿ, ಗಣೇಶ ದೋಣಿ, ಹನುಮಂತಪ್ಪ ಸುರೇಭಾನ ಇವರುಗಳ ಹೇಳಿಕೆಯ ಮೇರೆಗೆ ಪರಿಶೀಲಿಸಲಾಗಿ 01-04-2020 ರಂದು ಧಾರವಾಡ ವಿದ್ಯಾಗಿರಿ ವ್ಯಾಪ್ತಿಯಲ್ಲಿ ನಡೆದ ನರ್ತಿ ವೈನ ಶಾಪ್ಗೆ ನುಗ್ಗಿ ಎಂಭತ್ತು ಸಾವಿರ ಮೌಲ್ಯದ ಮದ್ಯ ಕಳುವಿನ ಪ್ರಕರಣದಲ್ಲೂ ತಾವು ಭಾಗಿಯಾಗಿದ್ದನ್ನು ಒಪ್ಪಿಕೊಂಡಿದ್ದು,ಅದು ಪತ್ತೆಯಾಗದಂತಾಗಿದೆ. ಈಗ ಅವರನ್ನು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗವಶಕ್ಕೆ ಒಪ್ಪಿಸಲಾಗಿದೆ.
ರಾಯಚೂರಲ್ಲಿ ದರೋಡೆ : ಕುಖ್ಯಾತ ಗ್ಯಾಂಬ್ಲರ್ಸಗಳಾದ ಸಂಜು ಪಟದಾರಿ ಮತ್ತು ಚಂದ್ರು ಇವರ ಸಂಗಡ ಇನ್ನೋವಾ ಹಾಗೂ ಡಿಜೈರ್ಗಳಲ್ಲಿ ರಾಯಚೂರಿಗೆ ತೆರಳಿ ಅಲ್ಲಿನ ಜೂಜು ಅಡ್ಡೆಯಲ್ಲಿ ಗೆದ್ದು ಬಂದ ವ್ಯಕ್ತಿಯೊಬ್ಬರು ದಾಬಾ ಬಳಿ ವಾಹನ ನಿಲ್ಲಿಸಿದ್ದಾಗ ಅದರಲ್ಲಿದ್ದ ೧೭ ಲಕ್ಷರೂ ನಗದನ್ನು ದೋಚಿದ್ದಾಗಿ ಲಕ್ಕುಂಡಿ,ಸುರೇಬಾನ ಬಾಯಿ ಬಿಟ್ಟಿದ್ದಾರೆ. ಇದರಲ್ಲಿ ತಮ್ಮ ಸಹಿತ ನಾಲ್ಕೈದು ಜನರಿಗೆ ತಲಾ 1.50 ಲಕ್ಷ ಕೊಟ್ಟಿದ್ದು, ಉಳಿದಿದ್ದನ್ನು ಪಟದಾರಿ,ಚಂದ್ರು ಇಟ್ಟುಕೊಂಡಿದ್ದಾರೆಂದು ಹೇಳಿದ್ದಾರೆ.
ಸಂಜು ಹಾಗೂ ಚಂದ್ರು ಅವರನ್ನು ಗೋಕುಲ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದು, ರಾಯಚೂರಿನಲ್ಲಿ ನಡೆದ ದರೋಡೆ ಸಂಬಂಧ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.ಅಲ್ಲದೇ ಕಮೀಶ್ನರೇಟಿನ ಹಿರಿಯ ಅಧಿಕಾರಿಗಳು ರಾಯಚೂರಿನ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ.
ಅಲ್ಲಿನ ಪೊಲೀಸ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದರೂ, ಆದರೆ ಅಲ್ಲಿ ಅಂತಹ ಯಾವುದೇ ದರೋಡೆ ಪ್ರಕರಣ ದಾಖಲಾಗಿಲ್ಲ ಎನ್ನಲಾಗುತ್ತಿದೆ.
ಜೂಜು ಅಡ್ಡೆಯಲ್ಲಿ ಗೆದ್ದ ಹಣವಾದ್ದರಿಂದ ದೂರು ದಾಖಲಿಸಿರಲಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.
ಗಾಂಜಾ ಘಾಟಿನ ಗುಸು ಗುಸು
ಥಳಿಸಿದ ಪ್ರಕರಣದಲ್ಲಿ ಮೂವರು ನೀಡಿದ ಹೇಳಿಕೆಯ ನಂತರ ಒಬ್ಬೊಬ್ಬರಾಗಿ ಇಡಿ ತಂಡವನ್ನು ವಶಕ್ಕೆ ಪಡೆದ ಗೋಕುಲ ಪೊಲೀಸರು ತನಿಖೆ ನಡೆಸಿದ್ದು,ಇದಕ್ಕೆ ಬೇರೆ ಬಣ್ಣ ಬಳಿವ ಯತ್ನದಲ್ಲಿ ಇಲಾಖೆಯ ಅನ್ನ ಉಂಡ ಕೆಲ ಗಾಂಜಾ ಘಾಟಿನ ವ್ಯಕ್ತಿಗಳು ತಂತ್ರ ರೂಪಿಸುತ್ತಿರುವ ಗುಸು ಗುಸು ಸಹ ಕೇಳಿ ಬರಲಾರಂಬಿಸಿದೆ.