ಹುಬ್ಬಳ್ಳಿ-ಧಾರವಾಡ ಸುದ್ದಿ
ಕೃಷಿ ವಿ.ವಿ.ಕುಲಪತಿಗೆ ಮತ್ತೆ ಸಂಕಷ್ಟ!   ಪುನಃ ವಿಚಾರಣೆ ಎದುರಿಸಲು ಜಿಲ್ಲಾ ನ್ಯಾಯಾಲಯ ಆದೇಶ

ಕೃಷಿ ವಿ.ವಿ.ಕುಲಪತಿಗೆ ಮತ್ತೆ ಸಂಕಷ್ಟ! ಪುನಃ ವಿಚಾರಣೆ ಎದುರಿಸಲು ಜಿಲ್ಲಾ ನ್ಯಾಯಾಲಯ ಆದೇಶ

ಕೊಲೆ, ಮಾನಭಂಗ ಯತ್ನ ಪ್ರಕರಣ

ಹುಬ್ಬಳ್ಳಿ: ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಮಹಾದೇವ ಚೆಟ್ಟಿ ಮಹಿಳೆಯೊಬ್ಬರ ಮೇಲೆ ಮಾನಭಂಗಕ್ಕೆ ಯತ್ನಿಸಿ ಕೊಲೆಗೆ ಪ್ರಯತ್ನಿಸಿದ ಪ್ರಕರಣದಲ್ಲಿ ಓರ್ವ ಆರೋಪಿಯಾಗಿದ್ದು, ಅವರೂ ಸೇರಿದಂತೆ  7 ಜನರು ವಿಚಾರಣೆ ಎದುರಿಸಬೇಕೆಂದು ಧಾರವಾಡದ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ.
ಕೆಳ ಹಂತದ ನ್ಯಾಯಾಲಯ ನೀಡಿದ 19-12-2019 ರಂದು ತೀರ್ಪನ್ನು ಪ್ರಶ್ನಿಸಿ ಹುಬ್ಬಳ್ಳಿಯ ಶ್ರೀಮತಿ ನಟಾಲಿಯಾ ಅಲಿಯಾಸ್ ನೇತ್ರಾ ಬಸವರಾಜ ಗಿರೆಣ್ಣವರ ಸಲ್ಲಿಸಿದ ಮೇಲ್ಮನವಿಯ (ಕ್ರಿಮಿನಲ್ ರಿವಿಜನ್ ಪಿಟಿಶನ್ ನಂ. 13/2020)ರ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯವು ಇದೇ ತಿಂಗಳ ದಿ. 7 ರಂದು ಈ ಮಹತ್ವದ ಆದೇಶ ನೀಡಿದೆ.
ನಟಾಲಿಯಾ ಅವರ ಮನವಿಯನ್ನು ಎತ್ತಿ ಹಿಡಿದು, ನ್ಯಾಯಾಲಯವು ವಿಚಾರಣೆಗೆ ಸೂಚಿಸಿರುವುದರಿಂದ ಅಲ್ಲದೇ ಕ್ರಿಮಿನಲ್ ಆಪಾದನೆಗಳಿರುವುದರಿಂದ ಕುಲಪತಿ ಡಾ. ಚೆಟ್ಟಿಯವರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಅಲ್ಲದೇ ಧಾರವಾಡ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಖುದ್ದು ವಿಚಾರಣೆಗೆ ಹಾಜರಾಗಬೇಕಿದೆ.

2014 ರಲ್ಲೇ ಧಾರವಾಡ ಉಪನಗರ ಠಾಣೆಯಲ್ಲಿ ಬಸವರಾಜ ಗಿರೆಣ್ಣವರ, ಮಂಜುನಾಥ ಗಿರೆಣ್ಣವರ, ಅಭಿನೇತ್ರಿ ಮಹಾದೇವ ಚೆಟ್ಟಿ, ಮಹಾದೇವ ಚೆಟ್ಟಿ ಸೇರಿದಂತೆ 10 ಜನರ ವಿರುದ್ಧ ಎಫ್‌ಐಆರ್ (ನಂ. 0159/ 2014) ದಾಖಲಾಗಿತ್ತು.
ನಟಾಲಿಯಾ ತಮ್ಮ ಪತಿ, ಮೈದುನರು ಹಾಗೂ ಹಾಲಿ ಕೃಷಿ ವಿ.ವಿ.ಕುಲಪತಿ ಮಹಾದೇವ ಚೆಟ್ಟಿ ಮುಂತಾದವರ ಕುಮ್ಮಕ್ಕಿನಿಂದ ನಿರಂತರ ದೈಹಿಕ ಹಲ್ಲೆ, ಮಾನಸಿಕ ಹಿಂಸೆ, ವರದಕ್ಷಿಣೆ ನೀಡಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ಬೈದಾಡಿ ರಿವಾಲ್ವರ್ ತೋರಿಸಿ ಕೊಲೆಗೆ ಪ್ರಯತ್ನಿಸಿರುವುದಾಗಿ ದೂರಿನಲ್ಲಿ ಹೇಳಿದ್ದರು.
ಮಹಾದೇವ ಚೆಟ್ಟಿಯ ಪತ್ನಿ ಅಭಿನೇತ್ರಿ ಚೆಟ್ಟಿ ಮಧ್ಯಸ್ಥಿಕೆಯಲ್ಲಿ ತಮ್ಮ ವಿವಾಹ 19-06-2011ರಂದು ಬಸವರಾಜ ಗಿರೆಣ್ಣವರ ಆಗಿದ್ದು, ತದನಂತರ ತನ್ನ ಪತಿ ಇತರರ ಕುಮ್ಮಕ್ಕಿನಿಂದ ಕೊಲೆಗೆ ಯತ್ನಿಸಿದ್ದು ಮನೆಯಲ್ಲಿ ಯಾರೂ ಇಲ್ಲದೆ ಸಂದರ್ಭದಲ್ಲಿ ಗ್ಯಾಸ್ ಸಿಲಿಂಡರ್ ಚಾಲೂ ಮಾಡಿ ಕೊಲೆಗೆ ಸಹ ಯತ್ನಿಸಿದ್ದಾಗಿ ಹೇಳಲಾಗಿತ್ತು.
ಉಪನಗರ ಪೊಲೀಸರು ಆರೋಪಿಗಳನ್ನು ಎಪ್ ಐಆರ್‌ದಿಂದ ಕೈ ಬಿಟ್ಟ ಕ್ರಮವನ್ನು ಕೆಳ ಹಂತದ ನ್ಯಾಯಾಲಯದಲ್ಲಿ ಎತ್ತಿ ಹಿಡಿದಿದ್ದನ್ನು ಪ್ರಶ್ನಿಸಿ ಪ್ರಕರಣ ಮುಚ್ಚಿ ಹಾಕುವ ಯತ್ನ ಆರೋಪಿಗಳು ನಡೆಸಿದ್ದಾರೆಂದು ನಟಾಲಿಯಾ ಅವರು ನಾಲ್ಕನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರಲ್ಲದೇ ಕೃಷಿ ವಿವಿ ಕುಲಪತಿ ಸಹಿತ ಅನೇಕರಿಗೆ ಹಾಜರಾಗುವಂತೆ ಸಮನ್ಸ ಜಾರಿಯಾಗಿದ್ದನ್ನು ಸ್ಮರಿಸಬಹುದು.
೧೯೮೯ರಲ್ಲಿ ನಿಗಧಿತ ವಿದ್ಯಾರ್ಹತೆಯಿಲ್ಲದೇ ಪರಿಶಿಷ್ಠರಿಗೆ ಮೀಸಲಾಗಿದ್ದ ಸಹ ಪ್ರಾಧ್ಯಾಪಕ ಹುದ್ದೆ ಪಡೆದಿದ್ದಾರೆಂಬ ಆರೋಪ ಚೆಟ್ಟಿಯವರ ಮೇಲಿದ್ದು ಕೊಲೆ ಯತ್ನದಂತ ಗಂಭೀರ ಪ್ರಕರಣವಿದ್ದರೂ ಅದನ್ನು ಮುಚ್ಚಿಟ್ಟು ಕುಲಪತಿ ಹುದ್ದೆಗೆ ಪರಿಗಣಿಸಲಾಯಿತೆಂಬುದನ್ನು ಈಗಾಗಲೇ ಕೃಷಿ ವಿವಿ ಎಸ್‌ಸಿ, ಎಸ್‌ಟಿ ನೌಕರರ ಸಂಘ ಆಪಾದಿಸಿದೆ ಈ ಪ್ರಕರಣವೂ ರಾಜ್ಯಪಾಲರ ಅಂಗಳದಲ್ಲಿದೆ.
ಚೆಟ್ಟಿಯವರ ಕೊಲೆ ಯತ್ನದ ಪ್ರಕರಣದಲ್ಲಿ 2014ರಲ್ಲಿ ನಿರೀಕ್ಷಣಾ ಜಾಮೀನನ್ನೂ ಸಹ ಪಡೆದಿದ್ದೂ ಅಲ್ಲದೇ ಪ್ರತಿ ತಿಂಗಳ ಮೊದಲ ರವಿವಾರ ಠಾಣೆಗೆ 11 ರಿಂದ 5 ರ ಅವಧಿಯಲ್ಲಿ ಹಾಜರಾಗಿ ಸಹಿ ಹಾಕಬೇಕಾಗಿತ್ತು.ಆಗ ಚೆಟ್ಟಿಯವರು ಕೃಷಿ ವಿ.ವಿ.ವಿಸ್ತರಣಾ ನಿರ್ದೇಶಕರಾಗಿದ್ದರು. ಇವೆಲ್ಲವನ್ನೂ ಮುಚ್ಚಿಟ್ಟು ಕುಲಪತಿ ಹುದ್ದೆ ಪಡೆದರೆಂಬುದು ಮೇಲ್ನೋಟಕ್ಕೆ ಸಾಭೀತಾಗುವಂತಿದೆ.
ಅಲ್ಲದೇ ಐಡಿಪಿ ಯೋಜನೆಯಲ್ಲಿ ಹಣ ದುರುಪಯೋಗ, ವಿ.ವಿ.ಯಲ್ಲಿ ಕೆಲಸ ಮಾಡುವ ಯುವತಿಯರಿಬ್ಬರು ಅಪಘಾತದಲ್ಲಿ ಮೃತ ಪಟ್ಟ ಪ್ರಕರಣ ಸೇರಿದಂತೆ ಅನೇಕ ಹಗರಣಗಳ ಪಟ್ಟಿಯೇ ಇದೆ. ಅಲ್ಲದೇ ಇತ್ತೀಚೆಗೆ ಕೃಷಿ ವಿ.ವಿ.ಶಿಕ್ಷಕರು ಸಹ ತಮ್ಮ ಬೇಡಿಕೆಗಳಿಗಾಗಿ ಇತ್ತೀಚೆಗೆ ಮುಷ್ಕರಕ್ಕಿಳಿದಿದ್ದನ್ನು ಸ್ಮರಿಸಬಹುದಾಗಿದೆ.
ಒಟ್ಟಿನಲ್ಲಿ ಉತ್ತರ ಕರ್ನಾಟಕದ ರೈತ ಸಮುದಾಯದ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕೃಷಿ ವಿ.ವಿ ಮಾನ ಅಕ್ಷರಃ ಮಣ್ಣುಪಾಲಾಗುತ್ತಿದೆ ಎಂದು ಸಾರ್ವಜನಿಕರು ಮಾತಾಡಿಕೊಳ್ಳುವಂತಾಗಿದೆ.

 

administrator

Related Articles

Leave a Reply

Your email address will not be published. Required fields are marked *