ಹುಬ್ಬಳ್ಳಿ-ಧಾರವಾಡ ಸುದ್ದಿ

ಅಂತರರಾಜ್ಯ ಕಳ್ಳಿಯರ ಬಂಧನ

ಗದಗ: ಪ್ಲಾಸ್ಟಿಕ್ ವ್ಯಾಪಾರದ ಸೋಗಿನಲ್ಲಿ ಬಂದ ಕಳ್ಳತನ ಮಾಡಿದ್ದ ಇಬ್ಬರು ಅಂತರರಾಜ್ಯ ಕಳ್ಳಿಯರನ್ನು ಇಲ್ಲಿನ ಬೆಟಗೇರಿ ಬಡಾವಣೆ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಾರಾಷ್ಟ್ರದ ಔರಂಗಾಬಾದ್ ಮುಕಂದವಾಡ ನಿವಾಸಿ ಸಂಗೀತಾ ಸುರೇಶ ಹಾಗೂ ಶ್ರುತಿ ಅಲಿಯಾಸ್ ಆರತಿ ರಾಮು ಎಂಬಿಬ್ಬರು ನಗರದ ಕಳಸಾಪೂರ ರಿಂಗ್ ರೋಡ್ ಬಳಿ ಜೋಪಡಿ ಹಾಕಿಕೊಂಡು ವಾಸವಾಗಿ ದ್ದವರೇ ಬಂಧಿತ ಕಳ್ಳಯರಾಗಿದ್ದಾರೆ.


ಕಳೆದ ಆಗಸ್ಟ್ 11ರಂದು ಗದಗ ಹೊಸ ಬಸ್ ನಿಲ್ದಾಣದಲ್ಲಿ ಕುಮಟಾದ ಸೌಮ್ಯ ಸತೀಶ ಎನ್ನುವ ಮಹಿಳೆಯೊಬ್ಬರ ವೆನಿಟಿ ಬ್ಯಾಗ್ ಕಳ್ಳತನವಾಗಿತ್ತು. ಅದರಲ್ಲಿ ಮೂರು ಲಕ್ಷಕ್ಕೂ ಅಧಿಕ ಮೌಲ್ಯದ ಮಂಗಳಸೂತ್ರ ಸಹಿತ ಚಿನ್ನಾಭರಣಗಳಿದ್ದವು. ಕಳ್ಳತನದ ಕುರಿತು ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೊನ್ನೆ ರವಿವಾರ ಹೊಸ ಬಸ್ ನಿಲ್ದಾಣದಲ್ಲಿ ಸಂಶಯಾಸ್ಪದ ವಾಗಿ ತಿರುಗಾಡುತ್ತಿದ್ದ ಇಬ್ಬರು ಮಹಿಳೆಯರನ್ನು ವಿಚಾರಿಸಿದಾಗ ಕಳ್ಳತನ ಪ್ರಕರಣ ಬಯಲಿಗೆ ಬಂದಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಮಾರ್ಗದರ್ಶನದಲ್ಲಿ ಬೆಟಗೇರಿ ಠಾಣೆಯ ಸಿಪಿಐ ಬಿ.ಜಿ. ಸುಬ್ಬಾಪೂರಂಠ ನೇತೃತ್ವದಲ್ಲಿ ಬಡಾವಣೆ ಠಾಣೆಯ ಪಿಎಸ್‌ಐ ಆರ್.ಆರ್. ಮುಂಡವಾಡಗಿ, ಸಿಬ್ಬಂದಿಗಳಾದ ಪರಶುರಾಮ ದೊಡ್ಡಮನಿ, ಆರ್.ಐ. ಗುಂಜಾಳ, ಎಸ್.ಸಿ.ಕೊರಡೂರ, ಚಂದ್ರು ದೊಡ್ಡಮನಿ, ಎಸ್.ಎಚ್.ಕಮತರ, ಬಿ.ಎಫ್.ಯರಗುಪ್ಪಿ, ಅಶೋಕ ಗದಗ, ಆರ್.ಎಲ್.ಗೋಗೇರಿ, ಜೆ.ಆರ್. ಕಮತದ, ಎಲ್.ಎಸ್.ಹೊಸಮನಿ ಕಾರ್ಯಾಚರಣೆ ನಡೆಸಿದ್ದರು.

administrator

Related Articles

Leave a Reply

Your email address will not be published. Required fields are marked *