ಹುಬ್ಬಳ್ಳಿ: ಇಲ್ಲಿನ ಬಡಿಗೇರ ಓಣಿಯ ಜನಸೇವಾ ಔಷಧಿ ಕೇಂದ್ರ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಭಾರೀ ಹಾನಿಯಾಗಿದೆ.
ನಿನ್ನೆ ರಾತ್ರಿ ಔಷಧಿ ಅಂಗಡಿಗೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿ ಕೊಂಡಿದ್ದು, ಸುಮಾರು 15 ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ ಎನ್ನಲಾಗಿದೆ.
ಪವನ ವಸಂತ ಜೋಶಿ ಎಂಬುವವರಿಗೆ ಈ ಔಷಧ ಅಂಗಡಿ ಸೇರಿದ್ದು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.