ಹುಬ್ಬಳ್ಳಿ: ಜಮೀನು ವ್ಯವಹಾರದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವರ ಮೇಲೆ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿರುವ ಘಟನೆ ನಗರದ ಬೆಂಗೇರಿಯ ಚಿಕ್ಕು ತೋಟ ದಲ್ಲಿ ನಡೆದಿದೆ.
ವೃತ್ತಿಯಲ್ಲಿ ಲಾರಿ ಚಾಲಕನಾದ ವಿರೇಶ ತೆಗಡೆ ಎಂಬುವವನ ಮೇಲೆ ಉದಯನಗರದ ರೌಡಿ ಶೀಟರ್ ಅಲ್ತಾಫ್ ಬೇಪಾರಿ ಹಾಗೂ ಆತನ ಸಹಚರರು ಲಾಂಗ್‌ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು ಪರಿಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ತೆಗಡೆಯವರಿಗೆ ಎರಡು ಎಕರೆ ಜಮೀನನನು ಬೇರೊಬ್ಬರಿಗೆ ಮಾರಲಾಗಿತ್ತು. ಈ ಸಂಬಂಧ ಅಲ್ತಾಫ್ ಹಾಗೂ ವಿರೇಶ ಇಬ್ಬರ ನಡುವೆ ಹಿಂದೆ ತಕರಾರುಗಳು ನಡೆದಿದ್ದು ಪ್ರಕರಣ ಕೋರ್ಟ ಮಟ್ಟಿಲು ಸಹ ಹತ್ತಿದೆ. ನಿನ್ನೆ ರಾತ್ರಿ ಅಲ್ತಾಫ್ ವಿರೇಶನ ಮೇಲೆ ಮಚ್ಚು,ರಾಡ್‌ಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ಗಾಯಾಳು ವಿರೇಶ ಸ್ಥಿತಿ ಗಂಭಿರವಾಗಿದ್ದು, ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅಲ್ತಾಫ್ ಹಾಗೂ ಸಹಚರರ ವಿರುದ್ದ ಕೇಶ್ವಾಪುರ ಠಾಣೆಯಲ್ಲಿ ವಿರೇಶನ ಪತ್ನಿ ದೂರು ನೀಡಿದ್ದು ಇದರನ್ವಯ ಮೂವರನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದುಬಂದಿದೆ.ಎಸಿಪಿ ವಿನೋದ ಮುಕ್ತೇದಾರ ಹಾಗೂ ಇನ್ಸಪೆಕ್ಟರ್ ಜಗದೀಶ ಹಂಚಿನಾಳ ನೇತ್ರತ್ವದಲ್ಲಿ ತನಿಖೆ ನಡೆದಿದ್ದು ಪ್ರಮುಖ ಆರೋಪಿ ಅಲ್ತಾಫ್‌ಗಾಗಿ ಹುಡುಕಾಟ ನಡೆದಿದೆ.