ಹುಬ್ಬಳ್ಳಿ: ನಗರದ ವೀರಾಪೂರ ಓಣಿಯಲ್ಲಿರುವ ಟಿ.ಕೆ. ಹಬೀಬ ರವಾ ಮಿಲ್ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಮೊದಲ ಮಹಡಿಯಲ್ಲಿ ಬೆಂಕಿಯ ಕೆನ್ನಾಲಿಗೆ ವ್ಯಾಪಕವಾಗಿದ್ದು, ಇದು ಸುತ್ತಮುತ್ತಲಿನ ಜನರಲ್ಲಿ ಆತಂಕ ಮೂಡಿಸಿದೆ.
ಇಂದು ಬೆಳಗಿನ ಜಾವ ಬೆಂಕಿ ಹತ್ತಿಕೊಂಡಿದ್ದು, ರವಾ ಮಿಲ್ನಲ್ಲಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.
ಆ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿದೆ. ಕಟ್ಟಡದ ಮೇಲಿನ ಭಾಗದಲ್ಲಿ ಹೊತ್ತಿರುವ ಬೆಂಕಿ ಎಲ್ಲ ಕಡೆಗೂ ಆವರಿಸಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.