ಹುಬ್ಬಳ್ಳಿ: ನಗರದ ಎಸ್ತರ್ ಫ್ಯಾಷನ್ ವತಿಯಿಂದ ಆಯೋಜಿಸಲಾಗುತ್ತಿರುವ ಮಿಸ್ ಊರ್ವಶಿ ಐಕಾನ್-2022 ಸೌಂದರ್ಯ ಸ್ಪರ್ಧೆಗೆ ಪೂರಕವಾಗಿ ಜ. 8 ರಂದು ಬೆಳಿಗ್ಗೆ 10ರಿಂದ 5 ಗಂಟೆವರೆಗೆ ನಗರದ ಕೇಶ್ವಾಪುರದ ರಾಕಿ ಡ್ಯಾನ್ಸ್ ಕಂಪನಿಯಲ್ಲಿ ಆಡಿಷನ್ ನಡೆಯಲಿದೆ ಎಂದು ಏಸ್ತರ್ ಫ್ಯಾಷನ್ಸ್ ನ ಮ್ಯಾನೇಜಿಂಗ್ ಡೈರೆಕ್ಟರ್ ಎಸ್ತರ್ ಮೊಹಂಕಾ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಪ್ರಪ್ರಥಮ ದಕ್ಷಿಣ ಭಾರತದ ಇಂಟರ್‌ನ್ಯಾಷನಲ್ ಸೌಂದರ್ಯ ಸ್ಪರ್ಧೆಯಾಗಿದ್ದು, ಇಂಟರ್ ನ್ಯಾಷನಲ್ ಬ್ಯೂಟಿ ಪೇಜೆಂಟ್ ಸೀಸನ್-1 ರಲ್ಲಿ ಮಿಸ್ಟರ್ ಆಂಡ್ ಮೀಸಸ್, ಮಾಮ್ ಆಂಡ್ ಕಿಡ್ಸ್, ಕರ್ವ್ ಹೀಗೆ ವಿವಿಧ ವಿಭಾಗಗಳಿಗೆ ನಡೆಯುವ ಸ್ಪರ್ಧೆಗೆ ಅನುಗುಣವಾಗಿ ಆಡಿಷನ್‌ನಲ್ಲಿ ಪ್ರತಿಭೆಗಳನ್ನು ಆಯ್ಕೆ ಮಾಡಲಾಗು ವುದು ಎಂದರು.
ಸ್ಯಾಂಡಲ್‌ವುಡ್ ನಿರ್ದೇಶಕ ಯೂಸೂಫ್ ಖಾನ್ ತೀರ್ಪುಗಾರರಾಗಿ ಆಡಿಷನ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನು, ಪ್ರತಿ ವಿಭಾಗದಿಂದ ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಂಡು, ಅವರಿಗೆ ಮಾರ್ಜಾಲ ನಡಿಗೆ (ಕ್ಯಾಟ್‌ವಾಕ್), ವೇದಿಕೆಯ ಭಯ ನಿವಾರಣೆ, ಆತ್ಮವಿಶ್ವಾಸ ವೃದ್ಧಿಸುವ ನಿಟ್ಟಿನಲ್ಲಿ ತರಬೇತಿ ನೀಡಲಾಗುವುದು ಎಂದು ಹೇಳಿದರು.
ಜ. 29 ಮತ್ತು 30 ರಂದು ಗೋಕುಲ ರಸ್ತೆಯ ಕ್ಯೂಬಿಕ್ ಹೊಟೆಲ್‌ನಲ್ಲಿ ಅಂತಿಮ ಸುತ್ತಿನ ಸ್ಪರ್ಧೆಗಳು ನಡೆಯಲಿದ್ದು, ಅದೇ ಮೂರು ಸುತ್ತಿನ ಸ್ಪರ್ಧೆಗಳ ನಂತರ ಪ್ರಥಮ, ದ್ವಿತೀಯ ಸ್ಥಾನ ಪಡೆಯುವ ವಿಜೇತರನ್ನು ಆಯ್ಕೆ ಮಾಡಲಾಗುವುದು. ಪ್ರಥಮ ಸ್ಥಾನದ ವಿಜೇತರಿಗೆ ತಲಾ ರೂ. 5 ಲಕ್ಷ ಮತ್ತು ದ್ವಿತೀಯ ಸ್ಥಾನದ ವಿಜೇತರಿಗೆ ತಲಾ ರೂ. 2 ಲಕ್ಷ, ತೃತೀಯ ವಿಜೇತರಿಗೆ 1 ಲಕ್ಷ ನಗದು ಬಹುಮಾನ, ಟ್ರೋಫಿ, ಪ್ರಮಾಣಪತ್ರ, ಸಬ್ ಟೈಟಲ್ ನೀಡಲಾಗುವುದು ಎಂದು ಅವರು ತಿಳಿಸಿದರು.
ವಿಜೇತ ಪ್ರತಿಭೆಗಳನ್ನು ವೆಬ್ ಸೀರಿಸ್, ಬ್ರಾಂಡ್ ಶೂಟ್ಸ್, ಆಲ್ಬಂ ಸಾಂಗ್ಸ್ ಸೇರಿದಂತೆ ಇನ್ನಿತರ ಅವಕಾಶಗಳನ್ನು ವಿಜೇತರಿಗೆ ನೀಡಲಾಗುವುದು. ಆಸಕ್ತರು ಮೊ. 9148271949, 8105396868ಗೆ ಸಂಪರ್ಕಿಸಿ ಮುಂಚಿತ ವಾಗಿ ನೋಂದಾಯಿಸಿಕೊಳ್ಳಬೇಕೆಂದು ಎಂದು ಹೇಳಿದರು.
ಎಕ್ಸಿಕ್ಯುಟಿವ್ ಡೈರೆಕ್ಟರ್ ಮಿಸ್ ಡೋಸ್ ಹಂಜಿ, ಅದನಾನ್ ಹಕ್ಕಿಂ, ಮಜರಹುಸೇನ್ ತಿಮ್ಮನಘಟ್ಟಿ ಗೋಷ್ಠಿಯಲ್ಲಿದ್ದರು.