ಹುಬ್ಬಳ್ಳಿ-ಧಾರವಾಡ ಸುದ್ದಿ

ಅವಳಿನಗರದಲ್ಲಿ 25 ಸಾವಿರ ಕೋಟಿ ಹೂಡಿಕೆ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಈಗಾಗಲೇ ಹಲವು ಕಂಪನಿಗಳು ಕಾರ್ಯರಂಭ ಮಾಡುತ್ತಿವೆ. ಅವಳಿನಗರದಲ್ಲಿ ಸುಮಾರು 25 ಸಾವಿರ ಕೋಟಿ ಹೂಡಿಕೆ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.


ನೆಹರು ಮೈದಾನದಲ್ಲಿ 75 ನೇ ಸ್ವಾತಂತ್ರೋತ್ಸವ ಧ್ವಜಾರೋಹಣ ಕಾರ್ಯಕ್ರಮದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,
ಮುಮ್ಮಿಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ಪ್ಲೇಕ್ಸ್ ಕಂಪನಿ ಕಾರ್ಯವನ್ನು ಆರಂಭಿಸಿದೆ. ರಾಜೇಶ ಎಲೆಕ್ಟಿçಕ್ ವಾಹನ ತಯಾರಿಕೆ ಕಂಪನಿಗೆ 150 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಸದ್ಯದಲ್ಲಿ ಯೇ ಕಂಜೂಮರ್ ಎಲೆಕ್ಟಿçಕ್ ಗೂಡ್ಸದ ಕ್ಲಸ್ಟರ್ ಪ್ರಾರಂಭವಾಗುತ್ತಿದೆ. ಇದು ನಿರುದ್ಯೋಗಿ ಯುವಕರಿಗೆ ಹಾಗೂ ಈ ಭಾಗದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದರು.


ಅಲ್ಲದೆ ಅವಳಿ ನಗರದಲ್ಲಿ ಸ್ಥಗಿತವಾಗಿರುವ ರಸ್ತೆ ಕಾಮಗಾರಿಗಳ ಕುರಿತು ಈಗಾಗಲೇ ನೂತನ ಲೋಕಪಯೋಗಿ ಸಚಿವ ಸಿಸಿ ಪಾಟೀಲ್ ಅವರೊಂದಿಗೆ ಮಾತಾಡಿದ್ದು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆAದರು.
ಖಾತೆ ಹಂಚಿಕೆ ವಿಚಾರದಲ್ಲಿ ಸಚಿವರುಗಳಲ್ಲಿ ಅಸಮಾಧಾನ ಉಂಟಾಗುವುದು ಸಹಜ ಪ್ರಕ್ರಿಯೆಯಾಗಿದೆ. ಸಚಿವ ಆನಂದ ಸಿಂಗ್ ಅಸಮಾಧಾನ ಬಗ್ಗೆ ತಮಗೆ ಹೆಚ್ಚಿನ ಮಾಹಿತಿ ಇಲ್ಲ. ಹಾಗೇನಾದರೂ ಅವರು ಖಾತೆ ಬಗ್ಗೆ ಅಸಮಾಧಾನ ಹೊಂದಿದ್ದರೆ ಅದನ್ನು ಮುಖ್ಯಮಂತ್ರಿಗಳು ಸರಿ ಮಾಡುತ್ತಾರೆ ಎಂದು ಶೆಟ್ಟರ ಹೇಳಿದರು.


ತಮ್ಮ ಮನೆಗೆ ನೂತನ ಸಚಿವರುಗಳು ಹಾಗೂ ಮಾಜಿ ಸಚಿವರ ಭೇಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ನಾನು ಮಾಜಿ ಸಿಎಂ ಆಗಿದ್ದೇನೆ, ಪಕ್ಷದ ಹಿರಿಯ ನಾಯಕರ ಸ್ಥಾನದಲ್ಲಿ ಇರುವುದರಿಂದ ಸಹಜವಾಗಿ ಭೇಟಿ ಆಗಲು ಬರುತ್ತಾರೆ. ಬಂದವರಿಗೆ ರಾಜಕೀಯ ಮಾರ್ಗದರ್ಶನ ಇಲಾಖೆ ಮುನ್ನಡೆಸಯವ ಸಲಹೆಗಳನ್ನು ನೀಡುತ್ತೇವೆ. ಅದಕ್ಕೆ ಏನೂ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಅಲ್ಲದೆ ಖಾತೆ ಅಸಮಾಧಾನ, ಖಾತೆ ಬದಲಾವಣೆ, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಸಚಿವೆ ಶಶಿಕಲಾ ಜೊಲ್ಲೆಯವರ ವಿಚಾರ ಎಲ್ಲವನ್ನೂ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೆವೆ ಎಂದರು.

administrator

Related Articles

Leave a Reply

Your email address will not be published. Required fields are marked *