ಹುಬ್ಬಳ್ಳಿ-ಧಾರವಾಡ ಸುದ್ದಿ
ಅವಳಿನಗರದ ವಾರ್ಡ್‌ವಾರು ಕತೆ

ಅವಳಿನಗರದ ವಾರ್ಡ್‌ವಾರು ಕತೆ

1ರಲ್ಲಿ ಮೇರೆ ಮೀರಿದ ‘ಸಂತೋಷ’

ಹುಬ್ಬಳ್ಳಿ: ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ ಚವ್ಹಾಣ ಚುನಾವಣಾ ಅಖಾಡಕ್ಕಿಳಿದ ಮೊದಲ ಬಾರಿಯೇ ಗೆಲುವನ್ನು 1998 ಮತಗಳನ್ನು ಪಡೆದು ದಾಖಲಿಸಿ ಪಾಲಿಕೆಗೆ ಬಲಗಾಲಿಟ್ಟಿದ್ದಾರೆ.
ಓಬಿಸಿ ಎ ಗೆ ಮೀಸಲಾದ ಹೊಸ ವಾರ್ಡನಲ್ಲಿ ಬಿಜೆಪಿಗೆ ಕೇಕ್ ವಾಕ್ ಗೆಲುವು ದಕ್ಕುವುದೆಂದು ನಿರೀಕ್ಷಿಸಲಾಗಿತ್ತು. ಕಾಂಗ್ರೆಸ್‌ನ ಪ್ರಕಾಶ ಜಾಧವ ಹೇಳಿಕೊಳ್ಳುವ ಪೈಪೋಟಿ ನೀಡಲಿಲ್ಲ. ಸಂತೋಷ ಚವ್ಹಾಣ 1998 ಮತಗಳನ್ನು ಪಡೆದರೆ ಜಾಧವ 758 ಹಾಗೂ ಪಕ್ಷೇತರ ಬಸವರಾಜ ಕಳಕರೆಡ್ಡಿ 613 ಮತ ಪಡೆದರು.
ಸೆಂಟ್ರಲ್ ಅಧ್ಯಕ್ಷರಾಗಿ ರಚನಾತ್ಮಕವಾಗಿ ಕಾರ್ಯನಿರ್ವಹಿಸುತ್ತಿರುವ ಚವ್ಹಾಣ ಮೊದಲ ಬಾರಿ ಚುನಾವಣಾ ರಂಗಕ್ಕೆ ಧುಮುಕಿದ್ದರು.
ಒಟ್ಟು 3517 ಮತಗಳು ಚಲಾವಣೆಯಗಿದ್ದು 74 ಮತಗಳು ನೋಟಾ ಅಗಿವೆ. 3443 ಸಿಂಧು ಆಗಿವೆ.

42ರಲ್ಲಿ ನರಗುಂದಗೆ ಸಾಟಿಯೇ ಇಲ್ಲ
1015 ಮತಗಳ ಭರ್ಜರಿ ಗೆಲುವು

ಹುಬ್ಬಳ್ಳಿ : 42ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ಮಹದೇವಪ್ಪಾ ಯಮುನಪ್ಪ ನರಗುಂದ 2067 ಮತಗಳನ್ನು ಪಡೆದು ಭರ್ಜರಿ ಜಯಗಳಿಸಿದ್ದಾರೆ. ಕ್ರಾಂಗ್ರೆಸ್ ಅಭ್ಯರ್ಥಿ ಚೈತನ್ಯ ರಜಿನಿಕಾಂತ ಬಿಜವಾಡ 1152 ಮತಗಳನ್ನು ಪರಾಭವಗೊಂಡಿದ್ದಾರೆ.
ಟಿಕೆಟ್ ಸಿಕ್ಕಾಗಲೇ ಮಹದೇವಪ್ಪಾ ನರಗುಂದ ಗೆಲುವು ಖಚಿತವಾಗಿದ್ದು ಎಂಬ ವಾತಾವರಣವಿತ್ತಾದರೂ ಸಾವಿರಕ್ಕೂ ಹೆಚ್ಚು ಮತದಿಂದ ಸ್ವೀಪ ಮಾಡಿ ಪಾಲಿಕೆಗೆ ಆಯ್ಕೆಯಾಗಿದ್ದಾರೆ. ಜೆಡಿಎಸ್ ಅಭ್ಯರ್ಥಿ ಅರ್ಜುನ್ ದುರಪ್ಪ ಪೂಜಾರ 256 ಮತಗಳನ್ನು ಪಡೆದಿದ್ದಾರೆ. ಆಪ್ ಅಭ್ಯರ್ಥಿ ಧನರಾಜ್ ಚಂದಾವರಿ 37 ಮತಗಳನ್ನು ಇತರೆ ಅಭ್ಯರ್ಥಿಗಳಾದ ಮಂಜುನಾಥ ಹುಲಗಪ್ಪ ಅದರಗುಂಚಿ 50, ಶಿವಾನಂದ ಯಲ್ಲಪ್ಪ ಕಣ್ಣೂರು 144, ಶ್ರೀನಿವಾಸ ತಮ್ಮಯ್ಯ ಟಗರ್‌ಗುಂಟಿ 272 ಮತಗಳನ್ನು ಪಡೆದಿದ್ದಾರೆ. ಒಟ್ಟು 4035 ಮತಗಳು ಚಲಾವಣೆಯಗಿದ್ದು 57 ಮತಗಳು ನೋಟಾ ಅಗಿವೆ.3978 ಮತಗಳು ಸಿಂಧು ಆಗಿವೆ.

ಬೆಳಗಾವಿ ಮನೆತನದ ಕುಡಿಗೆ ಗೆಲುವು
48ರಲ್ಲಿ ಎಲ್ಲಾ ಉಲ್ಟಾ ಪಲ್ಟಾ– ರಿಂಗಣಿಸಿದ ದೂರವಾಣಿ

ಹುಬ್ಬಳ್ಳಿ : ಮಾಜಿ ಪಾಲಿಕೆ ಸದಸ್ಯ ಮಹೇಶ ಬುರ್ಲಿಯವರ ಟಿಕೆಟ್ ತೋಳನಕೆರೆಯಲ್ಲಿ ತೇಲಿಕೊಂಡು ಹೋಗಿ ಬಿಜೆಪಿ ರವಿರಾಜ ಕೊಡ್ಲಿಯವರಿಗೆ 48ನೇ ವಾರ್ಡನ ಟಿಕೆಟ್ ನೀಡಿತ್ತಾದರೂ ಈ ಪ್ರತಿಷ್ಠಿತ ವಾರ್ಡನಲ್ಲಿ ಪರಾಭವಗೊಂಡಿದ್ದು, ಪಕ್ಷೇತರ ಅಭ್ಯರ್ಥಿ ಹುಬ್ಬಳ್ಳಿಯ ಪ್ರತಿಷ್ಠಿತ ಬೆಳಗಾವಿ ಮನೆತನದ ಕುಡಿ ಕಿಶನ್ ರಮೇಶ ಬೆಳಗಾವಿ ಗೆಲುವು ಸಾಧಿಸಿದ್ದಾರೆ.


ತೀವ್ರ ಹಣಾಹಣಿಯಿಂದ ಕೂಡಿದ್ದ ಚುನಾವಣೆಯಲ್ಲಿ ಅತ್ಯಂತ ಪ್ರತಿಭಾನ್ವಿತ ಯುವ ಮುಖಂಡ ಎಲ್ಲರ ನಿರೀಕ್ಷೆ ಹುಸಿ ಮಾಡಿ ದೂರವಾಣಿ ರಿಂಗಣಿಸುವAತೆ ಮಾಡಿದ್ದಾರೆ.
ಇಲ್ಲಿ ಬಿಜೆಪಿಯ ಸೋಲು ಮುಟ್ಟಿನೋಡಿಕೊಳ್ಳುವಂತ ಆಘಾತ ನೀಡಿದೆ.ಕಾಂಗ್ರೆಸ್‌ನ ಗುಡೇನಕಟ್ಟಿ ನಾಮಕೇವಾಸ್ತೆ ಅಭ್ಯರ್ಥಿಯಾಗಿದ್ದರೂ ಬಿಜೆಪಿ ಭದ್ರ ವಾರ್ಡಗಳಲ್ಲಿ ಇದೊಂದಾಗಿದ್ದು ಅಲ್ಲಿಯೇ ಪಕ್ಷೇತರ ಜಯಭೇರಿ ಬಾರಿಸಿದ್ದಾರೆ.

47ರಲ್ಲಿ ರೂಪಾ ಶೆಟ್ಟಿ ಹೊಸ ಇತಿಹಾಸ

ಹುಬ್ಬಳ್ಳಿ: ವಿದ್ಯಾನಗರ, ಲೋಕಪ್ಪನ ಹಕ್ಕಲ ಸುತ್ತಮುತ್ತಲಿನ ಪ್ರದೇಶ ಒಳಗೊಂಡ ಸಾಮಾನ್ಯ ಮಹಿಳೆಗೆ ಮೀಸಲಾದ ಕ್ಷೇತ್ರ 47ರಲ್ಲಿ ರೂಪಾ ಶೆಟ್ಟಿ ಗೆಲುವು ಸಾಧಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.


ಮಾಜಿ ಸಿಎಂ ಜಗದೀಶ ಶೆಟ್ಟರ್ ಪತ್ನಿ ಶಿಲ್ಪಾ ಶೆಟ್ಟರ್ ಸಮೀಪ ವಲದವರೊಬ್ಬರಾದ ಹೊಟೆಲ್ ಉದ್ಯಮಿ ದಯಾನಂದ ಶೆಟ್ಟಿಯವರ ಪತ್ನಿ ರೂಪಾ ಎಲ್ಲರ ಲೆಕ್ಕಾಚಾರ ತಲೆಕೆಳಗು ಮಾಡಿದ್ದಾರೆ.
ವ್ಯಾಪಕ ಅಭಿವೃದ್ದಿ ಕಾರ್ಯಗಳನ್ನು ಮಾಡಿದ ಮಾಜಿ ಉಪಮೇಯರ್ ಲಕ್ಷಿö್ಮ ಉಪ್ಪಾರ ಪಕ್ಷೇತರರಾಗಿ ಕಣಕ್ಕಿಳಿದದ್ದಲ್ಲದೇ ಮೇಘನಾ ಹಿರೇಮಠ ಕಾಂಗ್ರೆಸ್‌ನಿAದ ಅಖಾಡಾಕ್ಕಿಳಿದಿದ್ದರು.
ಶೆಟ್ಟರ್ ಕುಟುಂಬಕ್ಕೂ ಅತ್ಯಂತ ಪ್ರತಿಷ್ಟೆಯಾಗಿದ್ದ ಈ ವಾರ್ಡನಲ್ಲಿ ರೂಪಾ ಗೆಲುವು ಸಾಧಿಸಿ ವಾರ್ಡ ಕಮಲದ ಭದ್ರಕೋಟೆ ಎಂಬುದನ್ನು ಸಾಭೀತುಪಡಿಸಿದ್ದಾರೆ.
ಇಲ್ಲಿ ಮೀಸಲಾತಿ ಪಟ್ಟಿ ಪ್ರಕಟವಾದಾಗಲೇ ಶಿಲ್ಪಾ ಶೆಟ್ಟರ ನಿಕಟವರ್ತಿ ರೂಪಾ ಶೆಟ್ಟಿ ಇಲ್ಲಿ ಅಭ್ಯರ್ಥಿಯಾಗುವರೆಂದು ಸಂಜೆ ದರ್ಪಣ ಭವಿಷ್ಯ ನುಡಿದಿತ್ತು. ಈಗ ಗೆದ್ದು ಸಾಭೀತುಪಡಿಸಿದ್ದಾರೆ.
ರೂಪಾ ಶೆಟ್ಟಿ 1754 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಲಕ್ಷಿ÷್ಮÃ ಲಕ್ಷ÷್ಮಣ ಉಪ್ಪಾರ 1147 ಹಾಗೂ ಕಾಂಗ್ರೇಸ್ ಅಭ್ಯರ್ಥಿ ಮೇಘನಾ ಹಿರೇಮಠ 968 ಮತಗಳನ್ನು ಪಡೆದಿದ್ದಾರೆ. ಒಟ್ಟು 4016 ಮತಗಳು ಚಲಾವಣೆಯಾಗಿದ್ದು, 54 ನೋಟಾ ಮತಗಳಾಗಿವೆ.

ಉಣಕಲ್ ಪ್ರದೇಶದಲ್ಲಿ ಕಮಲದ್ದೇ ಪಾರುಪತ್ಯ

ಹುಬ್ಬಳ್ಳಿ : ತೀವ್ರ ಕುತೂಹಲ ಕೆರಳಿಸಿದ್ದ ಉಣಕಲ್ ಪ್ರದೇಶದ ಮೂರು ವಾರ್ಡಗಳಲ್ಲಿ ಕಮಲದ ಬಾವುಟ ಹಾರಿದೆ.
ಅವಿರೋಧ ಆಯ್ಕೆ ಮಾಡಲು ಸಾಮ,ಭೇದ ದಂಡ ಬಿಜೆಪಿ ಬಳಸಿತ್ತಾದರೂ ಅದು ಸಾಧ್ಯವಾಗೇ ಹೋದರೂ ರಾಜಣ್ಣ ಕೊರವಿ (36), ಉಮೇಶ ಕೌಜಗೇರಿ( 37) ಹಾಗೂ ತಿಪ್ಪಣ್ಣ ಮಜ್ಜಗಿ(38) ಮೂರು ಜನ ವಿಜಯದ ದಾಪುಗಾಲು ಹಾಕಿದ್ದಾರೆ.

ಬಿಜೆಪಿಯ ತಿಪ್ಪಣ್ಣ ಗಿರಿಮಲ್ಲಪ್ಪ ಮಜ್ಜಗಿ 3685 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಆಪ್ ಅಭ್ಯರ್ಥಿ ಮಲ್ಲಪ್ಪ ತಡಸದ 582 ಮತಗಳನ್ನು ಹಾಗೂ ಕಾಂಗ್ರೇಸ್
ಅಭ್ಯರ್ಥಿ ಮಹಮ್ಮದತೌಸಿಫ 546 ಮತಗಳನ್ನು ಪಡೆದಿದ್ದಾರೆ. 65 ನೋಟಾ ಅಭ್ಯರ್ಥಿಗಳು ಸೇರಿ ಒಟ್ಟು 4878 ಮತಗಳು ಚಲಾವಣೆಯಾಗಿದ್ದು, 4813 ಮತಗಳು ಸಿಂಧುವಾಗಿವೆ.

ವಾರ್ಡ್ ನಂಬರ್ 37 ರಲ್ಲಿ ಬಿಜೆಪಿ ಅಭ್ಯರ್ಥಿ ಉಮೇಶಗೌಡ ಚಂದ್ರಶೇಖರಗೌಡ ಕೌಜಗೇರಿ 3163 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಭಿಮನ್ಯು ರಾಜೇಂದ್ರ ರೆಡ್ಡಿ 1188 ಮತಗಳನ್ನು ಹಾಗೂ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ತೋಟಗೇರ 282 ಮತಗಳನ್ನು ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಲಿಂಗರಾಜ ಗುಡ್ಡಪ್ಪ ಕಲ್ಲಾಪೂರ 453 ಮತಗಳನ್ನು ಪಡೆದಿದ್ದಾರೆ. ನೋಟಾ 70 ಮತಗಳು ಸೇರಿ ಒಟ್ಟು 5156 ಮತಗಳು ಚಲಾವಣೆಯಗಿವೆ. 5156 ಮತಗಳು ಸಿಂಧು ಆಗಿವೆ. ವಾರ್ಡ್ 36 ರಲ್ಲಿ ಬಿಜೆಪಿ ಅಭ್ಯರ್ಥಿ ಮಲ್ಲಿಕಾರ್ಜುನ ಮೂರುಸಾವಿರಪ್ಪ ಕೊರವಿ 3891 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ವೀರಭದ್ರಯ್ಯ ಹಿರೇಹಾಳ 520 ಹಾಗೂ ಆಪ್ ಅಭ್ಯರ್ಥಿ ಮಲ್ಲಿಕಾರ್ಜುನಯ್ಯ ಬಸಯ್ಯ ಹಿರೇಮಠ 347 ಮತಗಳನ್ನು ಪಡೆದಿದ್ದಾರೆ. 92 ನೋಟಾ ಮತಗಳು ಸೇರಿ 4850 ಮತಗಳು ಚಲಾಯಿಸಲ್ಪಟ್ಟಿವೆ.

 

58ರಲ್ಲಿ ಶೃತಿ ಹಾಡಿತು

ಹುಬ್ಬಳ್ಳಿ : ಹಿಂದೆ ಬಿಜೆಪಿ ಭದ್ರಕೋಟೆಯಾಗಿ ದಿ.ಅಶೋಕ ಜಾಧವ ಪ್ರತಿನಿಧಿಸಿದ್ದ ರಾಮನಗರ ಒಳಗೊಂಡ 58ನೇ ವಾರ್ಡಿನಲ್ಲಿ ಕಾಂಗ್ರೆಸ್ ಈ ಬಾರಿ ತನ್ನ ಖಾತೆ ತೆರೆದಿದೆ.


ಹಿರಿಯ ಮುಖಂಡ ಗುರಪ್ಪ ಚಲವಾದಿ ಸೊಸೆ ಶೃತಿ ಸಂತೋಷ ಚಲವಾದಿ ಬಿಜೆಪಿ ಕ್ರಿಯಾಶೀಲ ಮುಖಂಡ ಮಹೇಂದ್ರ ಕೌತಾಳ ವಿರುದ್ದ ಗೆಲುವು ಸಾಧಿಸಿದ್ದಾರೆ.
ಮೊನ್ನೆ ಮತದಾನವಾದಾಗಲೇ ಶೃತಿ ಗೆಲುವು ನಿಶ್ಚಿತವಾಗಿತ್ತು.

68ನೇ ವಾರ್ಡಿನಲ್ಲಿ ನಿರಂಜನ ಕಮಾಲ್

ಹುಬ್ಬಳ್ಳಿ : ಪೂರ್ವ ಕ್ಷೇತ್ರ ವ್ಯಾಪ್ತಿಯ ಅತ್ಯಂತ ಜಿದ್ದಾಜಿದ್ದಿಯ ಕ್ಷೇತ್ರಗಳಲ್ಲಿ ಒಂದಾದ 68ರಲ್ಲಿ ನಿರಂಜನ ಹಿರೇಮಠ ಕಾಂಗ್ರೆಸ್ ಬಾವುಟ ಹಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಬ್ಬರು ‘ಸ್ವಾಮಿ’ಗಳ ಪೈಪೋಟಿಯಲ್ಲಿ ಕಳೆದ 6 ತಿಂಗಳಿ0ದ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸ ಮಾಡಿದ, ಅಲ್ಲದೇ ಕೊರೊನಾ ಸಂದರ್ಭದಲ್ಲಿ ಕಿಟ್ ಹಂಚಿಕೆ ಮಾಡಿದ ನಿರಂಜನ ಹಿರೇಮಠ ಗೆಲವು ತಂದು ಕೊಟ್ಟಿದ್ದಾರೆ.


ನಾರಾಯಣ ಜರತಾರಘರ, ಶಿವಾನಂದ ಮುತ್ತಣ್ಣವರ ಮುಂತಾದವರನ್ನು ಕೈ ಬಿಟ್ಟು ಪೂರ್ವ ಅಧ್ಯಕ್ಷ ಪ್ರಭು ನವಲಗುಂದ ಮಠ ಹಿನ್ನೆಡೆ ಅನುಭವಿಸಿದ್ದಾರೆ.
ಶಾಸಕ ಅಬ್ಬಯ್ಯ ಅವರ ನಿಕಟವರ್ತಿಗಳಲ್ಲಿ ಒಬ್ಬರಾದ ನಿರಂಜನ ಶಾಸಕರ ವಿಶ್ವಾಸಕ್ಕೆ ನಿರಾಸೆ ಮಾಡದೇ ಜಯ ಸಾಧಿಸಿದ್ದಾರೆ.

28 ರಲ್ಲಿ ಚಂದ್ರಶೇಖರನೇ ಶಿಖರಕ್ಕೆ

ಹುಬ್ಬಳ್ಳಿ : ನವನಗರ ,ಗಾಮನಗಟ್ಟಿ ಪ್ರದೇಶದಲ್ಲಿನ ವಾರ್ಡ 28ರಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ ಮಲ್ಲಪ್ಪ ಮನಗುಂಡಿ 2313 ಮತಗಳನ್ನು ಪಡೆದು ಜಯಗಳಿಸಿದ್ದಾರೆ.
ಮುಖ್ಯಮಂತ್ರಿ ಬೊಮ್ಮಾಯಿ ನಿಕಟವರ್ತಿ ಹಾಗೂ ಮಾಜಿ ಉಪ ಮೇಯರ್ ಮನಗುಂಡಿ 1000ಕ್ಕೂ ಹೆಚ್ಚು ಮತಗಳ ಗೆಲುವು ದಾಖಲಿಸಿದ್ದಾರೆ.


ಕ್ರಾಂಗ್ರೇಸ್ ಅಭ್ಯರ್ಥಿ ಚನ್ನಪ್ಪ ಮಾಳಗಿ 1195 ಮತಗಳನ್ನು ಹಾಗೂ ಜೆಡಿಎಸ್ ಅಭ್ಯರ್ಥಿ ಬಸವರಾಜ ಮೆಣಿಸಿಂಡಿ 238 ಮತಗಳನ್ನು ಪಡೆದಿದ್ದಾರೆ.
ಪಕ್ಷೇತರ ಅಭ್ಯರ್ಥಿಗಳಾದ ಹಾಲಶಾಂತಗೌಡ ಪಾಟೀಲ 57, ಮೌಲಾಲಿ ಮಹ್ಮದನವರ 161, ವಿಜಯಕುಮಾರ್ ಅಪ್ಪಾಜಿ 1030, ಶಹಜಾನ ಹು ಸಾವಂತನವರ 425, ಸೂರಜ ತಂದೆ ಬಾಬುಗೌಡ 165 ಮತಗಳನ್ನು ಪಡೆದಿದ್ದಾರೆ. ಒಟ್ಟು 5666 ಮತಗಳು ಚಲಾವಣೆಯಗಿದ್ದು 79 ಮತಗಳು ನೋಟಾ ಅಗಿವೆ. 3 ಮತಗಳು ತಿರಸ್ಕöÈತವಾಗಿವೆ. 5574 ಮತಗಳು ಸಿಂಧು ಆಗಿವೆ.

43ರಲ್ಲಿ ಮತ್ತೆ ಕಮಲ ಬಾವುಟ ಹಾರಿಸಿದ ಬೀರಪ್ಪ

ಹುಬ್ಬಳ್ಳಿ : ಸೆಂಟ್ರಲ್ ಕ್ಷೇತ್ರದ ತೀವ್ರ ಹಣಾಹಣಿಯ ಕ್ಷೇತ್ರಗಳಲ್ಲಿ ಒಂದಾದ 43ನೇ ವಾರ್ಡನಲ್ಲಿ ಬಿಜೆಪಿ ಅಭ್ಯರ್ಥಿ ಬೀರಪ್ಪ ನಾಗಪ್ಪಾ ಖಂಡೇಕಾರ 2047 ಮತಗಳನ್ನು ಪಡೆದು ಮತ್ತೆ ಬಿಜೆಪಿ ಬಾವುಟ ಹಾರಿಸಿದ್ದಾರೆ.

ಇಲ್ಲಿ ಪಕ್ಷೇತರ
ಪಕ್ಷೇತರ ಅಭ್ಯರ್ಥಿ ಹೂವಪ್ಪ ರಾಮಣ್ಣ ದಾಯಗೋಡಿ ಗೆಲ್ಲುವರೆಂಬ ನಿರೀಕ್ಷೆ ಇತ್ತಾದರೂ 1459 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.
ಕಾಂಗ್ರೇಸ್ ಅಭ್ಯರ್ಥಿ ಸುನೀಲ ಮಠಪತಿ 1004 ಮತಗಳನ್ನು ಪಡೆದಿದ್ದಾರೆ. ಆಪ್ ಅಭ್ಯರ್ಥಿ ಮನೋಜ ಕಾಮಕರ 121 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ ಅಭ್ಯರ್ಥಿ ಪುನೀತಕುಮಾರ ಚಂದ್ರಶೇಖರ ಶಲವಡಿ 55 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಬಂಡುಕೋರ ಅಭ್ಯರ್ಥಿ ಶಮೀರಖಾನ ಖಾನ 433 ಮತಗಳನ್ನು ಪಡೆದಿದ್ದಾರೆ. ಒಟ್ಟು 5265 ಮತಗಳು ಚಲಾವಣೆಯಗಿದ್ದು 73 ಮತಗಳು ನೋಟಾ ಅಗಿವೆ. 5192 ಮತಗಳು ಸಿಂಧು ಆಗಿವೆ.

ಸಂಘ ಮೂಲದ ಸುನಿತಾಗೆ ಮಣೆ

ಹುಬ್ಬಳ್ಳಿ : ವಾರ್ಡ ನಂ 27ರಲ್ಲಿ ಸಂಘ ಪರಿವಾರ ಮೂಲದ ಬಿಜೆಪಿ ಅಭ್ಯರ್ಥಿ ಸುನಿತಾ ಮಾಳವದಕರ 2184 ಮತಗಳನ್ನು ಪಡೆದು ಜಯಗಳಿಸಿದ್ದಾರೆ.


ಕ್ರಾಂಗ್ರೇಸ್ ಅಭ್ಯರ್ಥಿ ಕಾಂಚನ ಮಾಲಗಾರ 1301 ಮತಗಳನ್ನು ಹಾಗೂ ಪಕ್ಷೇತರ ಅಭ್ಯರ್ಥಿ ಭಾರತಿ ಡೋಳ್ಳಿನ 244 ಮತಗಳನ್ನು ಪಡೆದಿದ್ದಾರೆ.
ಒಟ್ಟು 3830 ಮತಗಳು ಚಲಾವಣೆಯಗಿದ್ದು 100 ಮತಗಳು ನೋಟಾ ಅಗಿವೆ.1ಮತ ತಿರಸ್ಕöÈತವಾಗಿ 3729 ಮತಗಳು ಸಿಂಧು ಆಗಿವೆ.

ಪಾಲಿಕೆ ಅಂಗಳಕ್ಕೆ ಚೇತನನ ಅಟೋ ರಿಕ್ಷಾ
ಹಿರೇಕೆರೂರ ಕುಟುಂಬದ ಕುಡಿ ಎಂಟ್ರಿ

ಹುಬ್ಬಳ್ಳಿ : ಸೆಂಟ್ರಲ್ ಕ್ಷೇತ್ರದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಹಿರೇಕೆರೂರ ಮನೆತನದ ಪಕ್ಷೇತರ
ಚೇತನ ಹಿರೇಕೆರೂರನ ಅಟೋ ರಿಕ್ಷಾ ಪಾಲಿಕೆ ಆಂಗಳಕ್ಕೆ ಬಂದು ನಿಂತಿದೆ.


ಬಿಜೆಪಿಯಿಂದ ಜೋಶಿಯವರ ಪರಮಾಪ್ತ ಉಮೇಶ ದುಶಿ, ಕಾಂಗ್ರೆಸ್‌ನಿ0ದ ಮಾಜಿ ಮೇಯರ್ ಪ್ರಕಾಶ ಕ್ಯಾರಕಟ್ಟಿ, ಪಕ್ಷೇತರರಾಗಿ ಸೆಡ್ಡು ಹೊಡೆದಿದ್ದ ವಿಶ್ವಮಾನ್ಯ ಪುರಸ್ಕೃತ ಸಂತೋಷ ಶೆಟ್ಟಿಯವರ ನಡುವಣ ಪೈಪೋಟಿಯಲ್ಲಿ ಗೆಲುವು ದಾಖಲಿಸಿದ್ದಾರೆ.
ಕಾಂಗ್ರೆಸ್ ಟಿಕೆಟ್ ನಿರಾಕರಿಸಲ್ಪಟ್ಟ ಹಿನ್ನೆಲೆಯಲ್ಲಿ ಬಂಡುಕೋರರಾಗಿ ಕಣಕ್ಕಿಳಿದಿದ್ದ ಚೇತನ ಗೆಲುವು ಮತದಾನ ದಿನವೇ ಸ್ಪಷ್ಟವಾಗಿತ್ತು. ಹಿಂದುಳಿದ ಪ್ರದೇಶಗಳಲ್ಲಿ ಅಟೋದ್ದೇ ಹವಾ ಜೋರಾಗಿತ್ತು. ಸಾಮಾನ್ಯವಾಗಿ ಈ ಹಿಂದೆ ಪಾಲಿಕೆಯಲ್ಲಿ 3-4 ಹಿರೇಕೆರೂರ ಕುಟುಂಬದ ಸದಸ್ಯರು ಇರುತ್ತಿದ್ದರು. ಕಳೆದ ಬಾರಿ ಸಂತೋಷ ಹಿರೇಕೆರೂರ ಪ್ರತಿನಿಧಿಸಿದ್ದರು. ಅಂತಿಮವಾಗಿ ಈ ಬಾರಿ ಚೇತನ ಪಾಲಿಕೆಗೆ ಎಂಟ್ರ ಕೊಟ್ಟಿದ್ದು ಹಿರೇಕೆರೂರ ಮನೆತನದ ಪ್ರಾತಿನಿಧ್ಯ ಉಳಿದಂತಾಗಿದೆ.

ವಾರ್ಡ್ ನಂಬರ್ 33 ರಲ್ಲಿ

ಕಾಂಗ್ರೆಸ್ ಅಭ್ಯರ್ಥಿ ಇಮಾಮಹುಸೇನ ಎಲಿಗಾರ 4925 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಮುರಿಗೆಪ್ಪಾ ಹೊರಡಿ 1778 ಮತಗಳನ್ನು ಹಾಗೂ ಪಕ್ಷೇತರ ಅಭ್ಯರ್ಥಿ ನಾರಾಯಣ ಪರಶುರಾಮ ಸೋಳಂಕೆ 412 ಮತಗಳನ್ನು ಪಡೆದಿದ್ದಾರೆ. ಆಪ್ ಅಭ್ಯರ್ಥಿ 153 ಮತಗಳನ್ನು ಪಡೆದಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಬಾಷಾಸಾಬ ಅಲ್ಲಾಬಕ್ಷ ಮುದಗಲ್ 102 ಮತಗಳನ್ನು ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ರಾಮು ಚಂದ್ರು ಕಾನಪೇಟ 69 ಮತಗಳನ್ನು ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಅಶೋಕ ಅಸೂಟಿ 60 ಮತಗಳನ್ನು ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಮಂಜುನಾಥ ಹ ಭಜಂತ್ರಿ 37 ಮತಗಳನ್ನು ಮತ್ತು ಪಕ್ಷೇತರ ಅಭ್ಯರ್ಥಿ ಫೈರೋಜ ಅಹ್ಮದ ಹ ಧಾರವಾಡ 19 ಮತಗಳನ್ನು ಪಡೆದಿದ್ದಾರೆ. ಒಟ್ಟು 7619 ಮತಗಳು ಚಲಾವಣೆಯಗಿದ್ದು 67 ಮತಗಳು ನೋಟಾ ಅಗಿವೆ. 7552 ಮತಗಳು ಸಿಂಧು ಆಗಿವೆ.

ವಾರ್ಡ್ ನಂಬರ್ 26 ರಲ್ಲಿ


ಬಿಜೆಪಿ ಅಭ್ಯರ್ಥಿ ನೀಲವ್ವ ಅರವಳದ 2487 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಮಂಜುಳಾ ರವಿ ಅಕ್ಕೂರ 1523 ಮತಗಳನ್ನು, ಕಾಂಗ್ರೇಸ್
ಅಭ್ಯರ್ಥಿ ಲಕ್ಷಿ ಜಾಧವ 1427 ಮತಗಳನ್ನು ಹಾಗೂ ಪಕ್ಷೇತರ ಅಭ್ಯರ್ಥಿ ಮಂಜುಳಾ ಮಾರುತಿ ಇಂಗನಳ್ಳಿ 1020 ಮತಗಳನ್ನು ಪಡೆದಿದ್ದಾರೆ. ಒಟ್ಟು 6576 ಮತಗಳು ಚಲಾವಣೆಯಗಿದ್ದು 112 ಮತಗಳು ನೋಟಾ ಆಗಿವೆ. 7 ಮತಗಳು ತಿರಸ್ಕöತವಾಗಿ, 6457 ಮತಗಳು ಸಿಂಧು ಆಗಿವೆ.

ವಾರ್ಡ್ 49 ರಲ್ಲಿ

ಬಿಜೆಪಿ ಅಭ್ಯರ್ಥಿ ವೀಣಾ ಚೇತನ ಬರದ್ವಾಡ 3576 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಅನ್ನಪೂರ್ಣ ಮಡಿವಾಳರ 598 ಹಾಗೂ ಕಾಂಗ್ರೇಸ್ ಅಭ್ಯರ್ಥಿ ರಾಜೇಶ್ವರಿ ಮೆಹರವಾಡೆ 519 ಮತಗಳನ್ನು ಪಡೆದಿದ್ದಾರೆ. 120 ನೋಟಾ ಮತಗಳು ಸೇರಿ 4813 ಮತಗಳು ಚಲಾಯಿಸಲ್ಪಟಿವೆ. ಒಂದು ಮತ ತಿರಸ್ಕöÈತವಾಗಿದೆ.

ಸತೀಶ ಹಾನಗಲ್ ಮತ್ತೆ ಜಯಭೇರಿ
ಹುಬ್ಬಳ್ಳಿ : ವಾರ್ಡ್ ನಂಬರ್ 32 ರಲ್ಲಿ

ಬಿಜೆಪಿ ಅಭ್ಯರ್ಥಿ ಸತೀಶ ಸುರೇಂದ್ರ ಹಾನಗಲ್ 3862 ಮತಗಳನ್ನು ಪಡೆದುಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಶೇಖರ ಕರ್ಲೆಕ್ಕನವರ 1369, ಜೆಡಿಎಸ್ ಅಭ್ಯರ್ಥಿ ವೀರೇಶ ಬಸವರಾಜ ಕುಬಸದ 205, ಎಎಪಿ ಅಭ್ಯರ್ಥಿ ಕುಮಾರ ನೂಲ್ವಿ 163 ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ಪೂಜಾ ರಮೇಶ ಬಾಕಳೆ 154, ಕುಬೇರ ಪವಾರ 63 ಮತಗಳನ್ನು ಪಡೆದಿದ್ದಾರೆ. ನೋಟಾ 84 ಮತಗಳು ಸೇರಿ ಒಟ್ಟು 5898 ಮತಗಳು ಚಲಾವಣೆಯಗಿವೆ. 5814 ಮತಗಳು ಸಿಂಧು ಆಗಿವೆ.

ವಾರ್ಡ್ ನಂಬರ್ 1 ರಲ್ಲಿ

ಬಿಜೆಪಿ ಅಭ್ಯರ್ಥಿ ಅನಿತಾ ಚಳಗೇರಿ 2231 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಜಯಶ್ರೀ ರಾ ನಾಯಕವಾಡ 2165 ಹಾಗೂ ಕಾಂಗ್ರೇಸ್ ಅಭ್ಯರ್ಥಿ ನಿರ್ಮಲಾ ಹೊಂಗಲ 1124 ಮತಗಳನ್ನು ಪಡೆದಿದ್ದಾರೆ. 89 ನೋಟಾ ಮತಗಳು ಸೇರಿ 5609 ಮತಗಳು ಚಲಾವಣೆಯಾಗಿವೆ. 8 ಮತಗಳು ತಿರಸ್ಕöÈತವಾಗಿವೆ.

ವಾರ್ಡ್ ನಂಬರ್ 2 ರಲ್ಲಿ

 

ಕಾಂಗ್ರೇಸ್ ಅಭ್ಯರ್ಥಿ 2085 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ 1996 ಜೆಡಿಎಸ್ ಅಭ್ಯರ್ಥಿ ಹೇಮಾವತಿ ಪಾಟೀಲ 767 ಹಾಗೂ ಪಕ್ಷೇತರ ಅಭ್ಯರ್ಥಿ ದೀಪಾ ಮನೋಹರ ನಾಯಕ 540 ಮತಗಳನ್ನು ಪಡೆದಿದ್ದಾರೆ. ನೋಟ 81 ಮತಗಳು ಸೇರಿ 5468 ಮತಗಳು ಚಲಾಯಿಸಲ್ಪಟ್ಟಿವೆ.

ವಾರ್ಡ್ ನಂಬರ್ 3 ರಲ್ಲಿ

ಹುಬ್ಬಳ್ಳಿ : ಮುಂದಿನ ಬಿಜೆಪಿ ಮೇಯರ್ ಅಭ್ಯರ್ಥಿಯೆಂದೇ ಬಿಂಬಿತವಾಗಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪರಮಾಪ್ತ ಬಿಜೆಪಿ ಅಭ್ಯರ್ಥಿ ಈರೇಶ ಅಂಚಟಗೇರಿ 3209 ಮತಗಳನ್ನು ಪಡೆದು ಭಾರೀ ಜಯ ಗಳಿಸಿದ್ದಾರೆ. ಸುಮಾರು 2000ಕ್ಕೂ ಹೆಚ್ಚು ಮತಗಳ ಅಂತರದ ಜಯ ತಂದಿತ್ತಿದ್ದಾರೆ.


ಜೆಡಿಎಸ್ ಅಭ್ಯರ್ಥಿ ಶಾಹೀದ ಅಹ್ಮದ ನದಾಫ 182, ಕಾಂಗ್ರೆಸ್ ಅಭ್ಯರ್ಥಿ ಅಶೋಕ ಹೂಗಾರ 1140, ಪಕ್ಷೇತರ ಅಭ್ಯರ್ಥಿಗಳಾದ ಗುರುರಾಜ ಪ್ರಭು ಸುಣಗಾರ 81, ಮಹಮೂದವ ಹದ್ಲಿ 60, ದೂದಬಾದಶಾ ಬಾನಿ 6, ಮಂಜುನಾಥ ಬಾಳಪ್ಪ ನಡಟ್ಟಿ 209 ಮತಗಳನ್ನು ಪಡೆದಿದ್ದಾರೆ. ನೋಟಾ 36 ಸೇರಿ 4923 ಮತಗಳು ಚಲಾವಣೆಯಾಗಿವೆ.
7ರಲ್ಲಿ ದೀಪಾ ನೀರಲಕಟ್ಟಿ 2864 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಮುಕ್ತುಮ್ ಹುಸೇನ ಮಸ್ತಾನ ವಾಲೆ 187 ಮತಗಳನ್ನು ಹಾಗೂ ಪಕ್ಷೇತರ ಅಭ್ಯರ್ಥಿ ಮೊಹಮ್ಮದ ಮೊಯಿನ ಬಿಡಿವಾಲೆ 108 ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ರವಿ ಯಲಿಗಾರ 2588 ಮತಗಳನ್ನು ಪಡೆದಿದ್ದಾರೆ. ನೋಟಾ 60 ಮತಗಳು ಸೇರಿ ಒಟ್ಟು 5747 ಮತಗಳು ಚಲಾವಣೆಯಗಿವೆ.

ವಿಜಯಾನಂದಗೆ ಮತ್ತೆ ಗೆಲುವಿನ ಸವಿ

ಹುಬ್ಬಳ್ಳಿ : ವಾರ್ಡ ನಂ 12ರಲ್ಲಿ ಬಿಜೆಪಿ ಅಭ್ಯರ್ಥಿ ವಿಜಯಾನಂದ ಶೇಖರ ಶೆಟ್ಟಿ 2384 ಮತಗಳನ್ನು ಪಡೆದು ಜಯಗಳಿಸಿದ್ದಾರೆ
ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ವಿರುಪಾಕ್ಷಪ್ಪಾ ಧಾಂವಶಿ 1191, ಜೆಡಿಎಸ್ ಅಭ್ಯರ್ಥಿ ವಿಶ್ವವೇಶ್ವರಿ ಬಸಲಿಂಗಯ್ಯ ಹಿರೇಮಠ 129, ಎಎಪಿ ಅಭ್ಯರ್ಥಿ ಶಿವಕಿರಣ ರಾಮಪ್ಪ ಅಂಗಡಿ 100 ಹಾಗೂ ಪಕ್ಷೇತರ ಅಭ್ಯರ್ಥಿ ಈಶ್ವರ ಬಾಬು ಪಾಟೀಲ 97 ಮತಗಳನ್ನು ಪಡೆದಿದ್ದಾರೆ. ನೋಟಾ 53 ಮತಗಳು ಸೇರಿ ಒಟ್ಟು 3954 ಮತಗಳು ಚಲಾವಣೆಯಗಿವೆ.

16,17 ಕಾಂಗ್ರೆಸ್ ಪಾಲು
ಹುಬ್ಬಳ್ಳಿ : ವಾರ್ಡ್ 17 ರಲ್ಲಿ ಕಾಂಗ್ರೆಸ್

ಅಭ್ಯರ್ಥಿ ಗಣೇಶ ಮ ಮುಧೋಳ 3174 ಮತಗಳನ್ನು ಪಡೆದು ಜಯಗಳಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಮಲ್ಲೇಶಿ ಮುಮ್ಮಿಗಟ್ಟಿ 1789 ಹಾಗೂ ಆಪ್ ಅಭ್ಯರ್ಥಿ ಅಮಿತ ಉಮೇಶ ವಾಲಿಕಾರ 191 ಮತಗಳನ್ನು ಪಡೆದಿದ್ದಾರೆ. 59 ನೋಟಾ ಮತಗಳು ಸೇರಿ ಒಟ್ಟು 5213 ಚಲಾಯಿಸಲ್ಪಟ್ಟಿವೆ.

ವಾರ್ಡ್ ನಂಬರ್ 16 ರಲ್ಲಿ

ಕಾಂಗ್ರೇಸ್ ಅಭ್ಯರ್ಥಿ ಪರವೀನ ದೇಸಾಯಿ 2843 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ರಾಜೇಶ್ವರಿ ಸಾಲಗಟ್ಟಿ 1822 ಮತಗಳನ್ನು ಹಾಗೂ ಜೆಡಿಎಸ್
ಅಭ್ಯರ್ಥಿ 102 ಮತಗಳನ್ನು ಪಡೆದಿದ್ದಾರೆ. 57 ನೋಟಾ ಅಭ್ಯರ್ಥಿಗಳು ಸೇರಿ ಒಟ್ಟು 4824 ಮತಗಳು ಚಲಾವಣೆಯಾಗಿದ್ದು, 4767 ಮತಗಳು ಸಿಂಧುವಾಗಿವೆ.

ಶಿವು ಹಿರೇಮಠಗೆ ಕೇಕ್ ವಾಕ್
ಧಾರವಾಡ : ವಾರ್ಡ್ 18 ರಲ್ಲಿ

ಬಿಜೆಪಿ ಅಭ್ಯರ್ಥಿ ಮಾಜಿ ಮೇಯರ್ ಶಿವು ಹಿರೇಮಠ 2624 ಮತಗಳನ್ನು ಪಡೆದು ಭರ್ಜರಿ ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಚಂದ್ರು ಪೂಜಾರ 910 ಹಾಗೂ ಜೆಡಿಎಸ್ ಅಭ್ಯರ್ಥಿ ಬಸವಂತಪ್ಪ ಉಳವಪ್ಪ ಬೇಳ್ಳಕ್ಕಿ 224 ಮತಗಳನ್ನು ಪಡೆದಿದ್ದಾರೆ. 58 ನೋಟಾ ಮತಗಳು ಸೇರಿ ಒಟ್ಟು 3816 ಚಲಾಯಿಸಲ್ಪಟ್ಟಿವೆ.
ಟಿಕೆಟ್ ನೀಡಿದಾಗಲೇ ಶಿವು ಗೆಲುವು ನಿಶ್ಚಿತವಾಗಿತ್ತು.

administrator

Related Articles

Leave a Reply

Your email address will not be published. Required fields are marked *