ಹುಬ್ಬಳ್ಳಿ : ಅವಳಿನಗರದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು ಜನತೆಗೊಂದು ನ್ಯಾಯ ಹಾಗೂ ಕೇಂದ್ರ ಸಚಿವರ ಮಗಳ ಮದುವೆ ಹಿನ್ನೆಲೆಯಲ್ಲಿ ಅವರಿಗೊಂದು ನ್ಯಾಯವೇ ಎಂದು ಮಹಾನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೀಪಾ ನಾಗರಾಜ ಗೌರಿ ಪ್ರಶ್ನಿಸಿದ್ದಾರೆ.
ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಎಷ್ಟು ಜನರಿಗೆ ಪಾಲ್ಗೊಳ್ಳಲು ಅವಕಾಶ ಮಾಡಿಕೊಂಡಿದ್ದಾರೆAಬುದನ್ನು ಬಹಿರಂಗಪಡಿಸಲಿ ಎಂದು ಆಗ್ರಹಿಸಿದ್ದಾರೆ.
ಆಡಂಬರದ ಮದುವೆಗೆ ಬರುವ ಗಣ್ಯರು ಸಾಮಾಜಿಕ ಅಂತರ ಪಾಲಿಸಿದರೂ ಹೊರಗಿನಿಂದ ಆತಿಥ್ಯ ನೀಡಲು ಹೊರಗಿನಿಂದ ಸಾವಿರಾರು ಕಾರ್ಮಿಕರನ್ನು, ಜನರನ್ನು ಕರೆಸಿದ್ದು ಅವರೆಲ್ಲರ ಕೋವಿಡ್ ಪರೀಕ್ಷೆ ಮಾಡಲಾಗಿದೆಯೆ ಎಂದು ಕೇಳಿದ್ದಾರಲ್ಲದೇ ಜಿಲ್ಲೆಯಲ್ಲಿ ಪಾಸಿಟಿವಿಟಿ ಕಡಿಮೆಯಿದ್ದು ಇಂತಹ ಆಡಂಬರದ ಮದುವೆಗಳಿಂದ ಪ್ರಕರಣಗಳು ಹೆಚ್ಚಾದಲ್ಲಿ ಯಾರು ಜವಾಬ್ದಾರರು ಎಂದು ಪ್ರಶ್ನಿಸಿದ್ದಾರೆ.
ಮಹಾನಗರ ಪಾಲಿಕೆ ನಾಳೆ ಬೆಳಿಗ್ಗೆ ಇದ್ದು ಬೇರೆ ಊರಿನವರು ಹೊರ ಹೋಗಬೇಕೆಂದು ಆದೇಶಿಸಲಾಗಿದ್ದರೂ ಕೇಂದ್ರ ಸಚಿವರ ಮಗಳ ಮದುವೆ ಹಿನ್ನೆಲೆಯಲ್ಲಿ ಸಾಕಷ್ಟು ಜನ ಇಲ್ಲಿಯೇ ವಾಸ್ತವ್ಯ ಹೂಡಿದ್ದು ಈ ಬಗ್ಗೆ ಜಿಲ್ಲಾಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಸೋಜಿಗ ತಂದಿದೆ ಎಂದಿದ್ದಾರೆ.