ಹುಬ್ಬಳ್ಳಿ-ಧಾರವಾಡ ಸುದ್ದಿ
ಪವಾಡ ಸದೃಶ ಚೇತರಿಸಿಕೊಂಡಿದ್ದ ಡಾ. ಹಂಡಿಗಿ ವಿಧಿವಶ

ಪವಾಡ ಸದೃಶ ಚೇತರಿಸಿಕೊಂಡಿದ್ದ ಡಾ. ಹಂಡಿಗಿ ವಿಧಿವಶ

ಹುಬ್ಬಳ್ಳಿ: ಮೃತರಾಗಿದ್ದಾರೆಂದು ಪ್ರಕಟಿಸಿದ ನಂತರ ದಿ.14ರಂದು ಪವಾಡ ಸದೃಶ ರೀತಿಯಲ್ಲಿ ಚೇತರಿಸಿಕೊಂಡಿದ್ದ ವಚನಶ್ರೀ ಎಂದೇ ಖ್ಯಾತರಾದ ಹಿರಿಯ ಸಾಹಿತಿ ಡಾ. ಸಂಗಮೇಶ ಹಂಡಿಗಿ (84) ಇಂದು ವಿಧಿವಶರಾಗಿದ್ದಾರೆ.


ಕನ್ನಡ ಸಾಹಿತ್ಯ ಲೋಕಕ್ಕೆ 46 ಗ್ರಂಥಗಳ ಕಾಣಿಕೆ ನೀಡಿರುವ ಡಾ. ಹಂಡಿಗಿಯವರು ಅಸು ನೀಗಿದ್ದಾರೆಂದು ಪ್ರಕಟಿಸಿದ ಬಳಿಕ ಮನೆಗೆ ಕರೆತಂದ ನಂತರ ಚೇತರಿಸಿಕೊಂಡಿದ್ದರಲ್ಲದೇ ಪುನಃ ಅವರನ್ನು ಸೆಕ್ಯೂರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಸಾವಿರಾರು ಅವರ ಅಭಿಮಾನಿಗಳು ಹಂಡಿಗಿ ಸರ್ ಶತಾಯುಷಿಗಳಾಗಲಿ ಎಂಬ ಪ್ರಾರ್ಥನೆ ಸಲ್ಲಿಸಿದ್ದರೂ ಇಂದು ಅದು ಫಲಿಸದೆ ಕೊನೆಯುಸಿರೆಳೆದರು.
ಪತ್ನಿ, ಪತ್ರಕರ್ತ ಡಾ. ವೀರೇಶ ಹಂಡಿಗಿ ಸೇರಿದಂತೆ ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗ ಅಗಲಿದ್ದಾರೆ.
ನವಲಗುಂದದ ಶ್ರೀ ಶಂಕರ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಕನ್ನಡ ವಿಭಾಗ ಮುಖ್ಯಸ್ಥರಾಗಿ ಕಾಲು ಶತಮಾನ ಸೇವೆ ಸಲ್ಲಿಸಿ, ನಿವೃತ್ತರಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕೆಲಕಾಲ ಸಂದರ್ಶಕ ಪ್ರಾಧ್ಯಾಪಕರಾಗಿ ಪಿಎಚ್.ಡಿ ಅಧ್ಯಯನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದರು.
ಇಂದು ಸಂಜೆ 4 ಗಂಟೆಗೆ ವಿದ್ಯಾನಗರದ ರುದ್ರಭೂಮಿಯಲ್ಲಿ ಮೃತರ ಅಂತ್ಯಸAಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ಹೇಳಿವೆ.

administrator

Related Articles

Leave a Reply

Your email address will not be published. Required fields are marked *