ಹುಬ್ಬಳ್ಳಿ-ಧಾರವಾಡ ಸುದ್ದಿ
ಬಿಜೆಪಿ ಭದ್ರ ಕೋಟೆಯೇ ಕೈ ವಶ 

ಬಿಜೆಪಿ ಭದ್ರ ಕೋಟೆಯೇ ಕೈ ವಶ 

ಹುಬ್ಬಳ್ಳಿ : ಕಮರಿಪೇಟೆ ಸುತ್ತಮುತ್ತಲಿನ ಪ್ರದೇಶ ಒಳಗೊಂಡ ಪೂರ್ವ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂ ೬೫ ಬಿಜೆಪಿಯ ಅಭೇದ್ಯ ಕೋಟೆ ಎಂದೇ ಖ್ಯಾತಿ ಪಡೆದಿದೆ. ಆದರೆ ಈ ಬಾರಿ ಇದು ಮೊದಲ ಬಾರಿ ಕೈವಶವಾಗಿದೆ.


ಕಳೆದ ಬಾರಿ ಇದೇ ವಾರ್ಡನಲ್ಲಿ ಪರಾಭವಗೊಂಡರೂ ಛಲ ಬಿಡದ ತ್ರಿವಿಕ್ರಮನಂತೆ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡ ಪ್ರಕಾಶ ಬುರಬುರೆ ಪತ್ನಿ ಸುನೀತಾ ಬುರಬುರೆ ಒಟ್ಟೂ ೩೨೮೨ ಮತಗಳನ್ನು ಪಡೆದು ೧೨೮೨ ಮತಗಳ ಅಂತರದ ಗೆಲುವು ದಾಖಲಿಸಿದ್ದಾರೆ.
ಬಹುಶ: ಈ ವಾರ್ಡಿನ ಇತಿಹಾಸದಲ್ಲಿ ಜನತಾದಳದಿಂದ ಒಮ್ಮೆ ಸರಳಾ ಬಾಂಡಗೆ ಗೆಲುವು ಸಾಧಿಸಿದ್ದನ್ನು ಬಿಟ್ಟರೆ ಬಿಜೆಪಿಯದ್ದೇ ಇಲ್ಲಿ ಬಂಪರ್ ಬೆಳೆ. ಆದರೆ ಈ ಬಾರಿ ಕಾಂಗ್ರೆಸ್ ಬಾವುಟ ಹಾರಾಡಿದೆ.
ಯಾರಿಗೆ ಟಿಕೆಟ್ ಕೊಡಬೇಕೆಂಬ ತಿಕ್ಕಾಟ ಮುಂದುವರಿದು ಅಂತಿಮವಾಗಿ ಕೆಎಸ್ ಆರ್‌ಟಿಸಿ ನಿರ್ದೇಶಕ ರಾಜು ಜರತಾರಘರ ಪತ್ನಿ ಸುನಿತಾರನ್ನು ಕಣಕ್ಕಿಳಿಸಿದರೂ ಕಮಲ ಪಾಳಯಕ್ಕೆ ಜಯ ಕಗ್ಗಂಟಾಯಿತು.

administrator

Related Articles

Leave a Reply

Your email address will not be published. Required fields are marked *