ಧಾರವಾಡ: ಹಬ್ಬದ ಆಚರಣೆಯ ಮಹತ್ವ, ಸಂದೇಶಗಳ ಪರಿಚಯ ಇಂದಿನ ಮಕ್ಕಳಿಗೆ ಅತಿ ಅವಶ್ಯ ಎಂದು ಜೆ.ಎಸ್.ಎಸ್ ವಿತ್ತಾಧಿಕಾರಿ ಡಾ. ಅಜಿತ ಪ್ರಸಾದ ಹೇಳಿದರು.
ನಗರದ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸಿ.ಬಿ.ಎಸ್.ಇ ಶಾಲೆಯಲ್ಲಿ ಆಯೋಜಿಸಿದ್ದ ಶ್ರೀಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಬ್ಬ ಹರಿದಿನಗಳು ನಮ್ಮ ಸಂಸ್ಕೃತಿ ಪರಂಪರೆಯ ಪರಿಚಯ ಮಾಡಿಕೊಡುವ ಸಂದರ್ಭ. ಪ್ರತಿ ಹಬ್ಬದಿಂದ ನಾವು ಒಂದು ಒಳ್ಳೆಯ ಸಂದೇಶ ಪಡೆಯುತ್ತೇವೆ. ಆದ್ದರಿಂದ ಹಬ್ಬಗಳ ಸಂದೇಶಗಳ ಪರಿಚಯ ಮಕ್ಕಳಿಗೆ ಬೇಕು ಎಂದರು.

ಕೋರೋನಾದಂತಹ ಮಹಾಮಾರಿಯಿಂದ ಮಕ್ಕಳು ಶಾಲೆಯಿಂದ ದೂರ ಉಳಿದಿರುವುದು ಅತ್ಯಂತ ವಿಷಾದನೀಯ. ಆದರೆ ಅನಿವಾರ್ಯ. ಆಟವಾಡಿ ಪಾಠ ಕಲಿಯುವ ಮಕ್ಕಳಿಗೆ ಗೃಹ ಬಂಧನವಾಗಿತ್ತು. ಇದೀಗ ಶಾಲೆ ಪ್ರಾರಂಭವಾಗಿರುವದರಿಂದ ಅತ್ಯಂತ ಸಂಭ್ರಮದಿಂದ ಮಕ್ಕಳು ಶಾಲೆಗೆ ಆಗಮಿಸುತ್ತಿದ್ದಾರೆ. ಹಲವಾರು ಸುರಕ್ಷತಾ ಕ್ರಮಗಳೊಂದಿಗೆ ಶಾಲೆ ಪ್ರಾರಂಭಿಸಲಾಗಿದೆ. ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ಮನೋಲ್ಲಾಸ, ಓದಿಗೆ ಪ್ರೇರಣೆ ನೀಡುತ್ತವೆ ಎಂದು ಅಭಿಪ್ರಾಯ ಪಟ್ಟರು.

ಕೃಷ್ಣ, ರಾಧೆ ವೇಷ ಧರಿಸಿ ಹಲವಾರು ಮಕ್ಕಳು ಕೃಷ್ಣನ ಪಲ್ಲಕ್ಕಿಯ ಮೆರವಣಿಗೆಯಲ್ಲಿ ಭಾಗವಹಿಸಿ ಸಂಭ್ರಮ ಪಟ್ಟರು. ಈ ಸಂದರ್ಭದಲ್ಲಿ ಪ್ರಾಚಾರ್ಯೆ ಸಾಧನಾ. ಎಸ್., ಮಹಾವೀರ ಉಪಾದ್ಯೆ, ರಜನಿ ದಾಸ ಇನ್ನಿತರರು ಉಪಸ್ಥಿತರಿದ್ದರು.



