ಹುಬ್ಬಳ್ಳಿ-ಧಾರವಾಡ ಸುದ್ದಿ
ಮೃತ ಮಾಜಿ ಸೈನಿಕನಿಗೆ ‘ಲಾಟರಿ’ ! ಸಾರ್ವಜನಿಕರ ಸಮ್ಮುಖದಲ್ಲೇ ಲಕಮನಹಳ್ಳಿ ನಿವೇಶನ ಹಂಚಿಕೆ

ಮೃತ ಮಾಜಿ ಸೈನಿಕನಿಗೆ ‘ಲಾಟರಿ’ ! ಸಾರ್ವಜನಿಕರ ಸಮ್ಮುಖದಲ್ಲೇ ಲಕಮನಹಳ್ಳಿ ನಿವೇಶನ ಹಂಚಿಕೆ

ಹುಬ್ಬಳ್ಳಿ: ತಾಂತ್ರಿಕ ಕಾರಣದಿಂದ ಕಳೆದ ೯ ವರ್ಷಗಳಿಂದ ಹಂಚಿಕೆಯಾಗದೇ ಉಳಿದಿದ್ದ ನಗರಾಭಿವೃದ್ದಿ ಪ್ರಾಧಿಕಾರದಿಂದ ನಿರ್ಮಿಸಿರುವ ಧಾರವಾಡ ಲಕಮನಹಳ್ಳಿ ನಿವೇಶನ ಅರ್ಜಿಗಳನ್ನು ಇಂದು ಹುಡಾ ಕಚೇರಿಯಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ಲಾಟರಿ ಪಾರದರ್ಶಕವಾಗಿ ಹಂಚಿಕೆ ಮಾಡಲಾಯಿತು.
೨೦೧೨ ರಲ್ಲಿ ಕರೆದ ಧಾರವಾಡ ಲಕಮನಹಳ್ಳಿ ಪ್ರದೇಶದ ನಿವೇಶನ ಅರ್ಜಿಯನ್ನು ಹಾಕಿ ಕಳೆದ ೯ ವರ್ಷದಿಂದ ಜನ ಹುಡಾ ಕಚೇರಿಗೆ ಅಲೆದಾಡುತ್ತಿದ್ದರು.ಅದಕ್ಕಿಂದು ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ನೇತ್ರತ್ವದಲ್ಲಿ ಅರ್ಜಿ ಹಾಕಿದವರ ಸಮ್ಮುಖದಲ್ಲೇ ಲಾಟರಿ ಎತ್ತುವ ಮೂಲಕ ಹಂಚಿಕೆ ಮಾಡಲಾಯಿತು.
ಆಯುಕ್ತ ಎನ್.ಎಚ್.ಕುಮಣ್ಣವರ, ಸದಸ್ಯರಾದ ಸುನಿಲ ಮೋರೆ, ನಗರ ಯೋಜಕ ಸದಸ್ಯ ವಿವೇಕ ಕಾರೇಕರ, ಕಾರ್ಯದರ್ಶಿ ಎಚ್.ಪ್ರಾಣೇಶ ಸಹಿತ ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು.
ಯಾವುದೇ ಒತ್ತಡಕ್ಕೂ ಮಣಿಯದೇ ಈಗಾಗಲೇ ಅನಧಿಕೃತ ವಿನ್ಯಾಸಗಳ ಮೇಲೆ ಕಾರ್ಯಾಚರಣೆ ನಡೆಸುವ ಮೂಲಕ ‘ಜೆಸಿಬಿ ನಾಗೇಶ’ ಎಂದೇ ಕರೆಸಿಕೊಳ್ಳುತ್ತಿರುವ ನಾಗೇಶ ಕಲಬುರ್ಗಿ ಇಂದು ಅನೇಕ ವರ್ಷಗಳಿಂದ ಹಾಗೇ ಉಳಿದಿದ್ದ ಲಕಮನಹಳ್ಳಿ ನಿವೇಶನಕ್ಕೂ ಮುಕ್ತಿ ದೊರೆಯುವಂತೆ ಮಾಡಿದರು.
ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರೂ ಕಲಬುರ್ಗಿ ಹಾಗೂ ಎಲ್ಲ ಸದಸ್ಯರ ನೇತೃತ್ವದಲ್ಲಿ ಅತ್ಯಂತ ಪಾರದರ್ಶಕವಾಗಿ ಪ್ರಕ್ರಿಯೆ ನಡೆದಿದ್ದು ನಿಜಕ್ಕೂ ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಹೀಗೆಯೆ ಪ್ರಕ್ರಿಯೆ ನಡೆದಲ್ಲಿ ಗಗನಕುಸುಮವಾಗಿರುವ ನಿವೇಶನ ಅರ್ಹರಿಗೆ ದೊರೆಯಲಿದೆ ಎಂಬ ಮಾತು ಕೇಳಿ ಬಂದವು.

ಮೃತ ಮಾಜಿ ಸೈನಿಕನಿಗೆ ‘ಲಾಟರಿ’ !

ಹುಬ್ಬಳ್ಳಿ: ೨೦೧೨ರಲ್ಲಿ ಹುಡಾದ ಲಕಮನಹಳ್ಳಿ ನಿವೇಶನಕ್ಕೆ ಮಾಜಿ ಸೈನಿಕರುಗಳಾದ ರಫೀಕ ಅಹ್ಮದ ಧಾರವಾಡ ಹಾಗೂ ಜಗನ್ನಾಥ ಕೃಷ್ಣಾರೆಡ್ಡಿ ಕುರ್ಲಗೇರಿ ಎಂಬಿಬ್ಬರು ಸ್ನೇಹಿತರು ಅರ್ಜಿ ಹಾಕಿದ್ದರು.ಇಂದು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡ ರಫೀಕ್ ಅಹ್ಮದ ಧಾರವಾಡ ಚೀಟಿ ಎತ್ತಿದಾಗ ತಮ್ಮೊಂದಿಗೆ ಅರ್ಜಿ ಹಾಕಿದ್ದ ಜಗನ್ನಾಥ ಕುರ್ಲಗೇರಿಯವರ ಅವರ ಹೆಸರು ಬಂದಿತ್ತು.
ಅರ್ಜಿಯಲ್ಲಿನ ಹೆಸರು ನೋಡಿ ಅಕ್ಷರಶಃ ಚೀಟಿ ಎತ್ತಿದ ರಫೀಕ್ ಕಣ್ಣೀರಾದರು.ಕಾರಣ ಕೇಳಿದಾಗ ಎಲ್ಲರಿಗೂ ಅಚ್ಚರಿಯೇ ಸರಿ. ಜಗನ್ನಾಥ ಕುರ್ಲಗೇರಿ ನಿನ್ನೆ ರಾತ್ರಿ ಸಾವನ್ನಪ್ಪಿದ್ದು ಇಂದು ಬೆಳಿಗ್ಗೆ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ ಎಂದು ವಾಸ್ತವ ಬಿಚ್ಚಿಟ್ಟರು. ಚೀಟಿ ಎತ್ತಿದ ಧಾರವಾಡ ಸಹ ತನ್ನ ಅಗಲಿದ ಗೆಳೆಯನಿಗೆ ಸಿಕ್ಕಿದ್ದು ನಿಜಕ್ಕೂ ಸಂತಸ ತಂದಿದೆ ಎಂದರು.

administrator

Related Articles

Leave a Reply

Your email address will not be published. Required fields are marked *