ಹುಬ್ಬಳ್ಳಿ-ಧಾರವಾಡ ಸುದ್ದಿ

ಹುಬ್ಬಳ್ಳಿಯಲ್ಲಿ ’ದಿ ಫರ್ನ್ ರೆಸಿಡೆನ್ಸಿ’ ಆರಂಭ

ಹುಬ್ಬಳ್ಳಿ: ಕಾನ್ಸೆಪ್ಟ ಹಾಸ್ಪಿಟ್ಯಾಲೀಟಿ ಪ್ರೈ ಲಿಮಿಟೆಡ, ಭಾರತದ ಪ್ರಮುಖ ಪರಿಸರ ಸೂಕ್ಷ್ಮ ಹೋಟೆಲ ಸರಪಳಿಯು ರಾಜ್ಯದಲ್ಲಿ ತನ್ನ ಏಳನೆಯ ಹೊಟೆಲ ’ದಿ ಫರ್ನ ರೆಸಿಡೆನಿ’ ಯನ್ನು ವಾಣಿಜ್ಯ ರಾಜಧಾನಿ ಹುಬ್ಬಳ್ಳಿಯಲ್ಲಿ ಹೊಸೂರ ಸೇತುವೆ ಪಕ್ಕ ಆರಂಭಿಸಿದೆ.

Fern hotel

ರೆಸಾರ್ಟ್ಸನ ಸಿಇಓ ಸುಹೇಲ್ ಕನ್ನಂಪಲ್ಲಿ ಮಾತನಾಡಿ ಪರಿಸರ ಸ್ನೇಹಿ ಫರ್ನ ಬ್ರ್ಯಾಂಡನ್ನು ಐತಿಹಾಸಿಕ ಹುಬ್ಬಳ್ಳಿ ನಗರಕ್ಕೆ ಪರಿಚಯಿಸಲು ಹೆಮ್ಮೆಯಾಗುತ್ತಿದ್ದು, ಈಗಾಗಲೇಬೆಳಗಾವಿ, ಬೆಂಗಳೂರು, ಶಿವಮೊಗ್ಗಾ, ಉಡುಪಿ ಮತ್ತು ವಿಜಯಪುರ ನಗರಗಳಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಫರ್ನ ಹೊಟೆಲುಗಳು ಗ್ರಾಹಕ ಸ್ನೇಹಿ ಸೇವೆ ಮತ್ತು ಪರಿಸರ ಸ್ನೇಹಿ ಸೌಲಭ್ಯಗಳಿಗೆ ಹೆಸರುವಾಸಿಯಾಗಿವೆ ಎಂದರು.
ಹೊಟೇಲಿನ ರಿಬ್ರಾಂಡಿಂಗ ಕುರಿತು ಮಾತನಾಡಿದ ವ್ಯವಸ್ಥಾಪಕ ಪಾಲುದಾರ ಅಶೋಕ ಕೋಟಿ ಮ್ಯಾನೇಜಿಂಗ ಪಾರ್ಟನರ ಅವರು ನಮ್ಮ ಹೋಟೆಲು ಹುಬ್ಬಳ್ಳಿಗೆ ಬರುವ ಪ್ರಯಾಣಿಕರ ಅವಶಕತೆಗಳನ್ನು ಗಮನದಲ್ಲಿಟ್ಟು ಅವರ ಸೇವೆಯಲ್ಲಿ ತೊಡಗಿಸಿಕೊಂಡಿದೆ ಎಂದರು.
ಮತ್ತೋರ್ವ ಮ್ಯಾನೇಜಿಂಗ ಪಾರ್ಟನರ ವಿನಯ ಕೋಟಿಯವರು ಮಾತನಾಡಿ ಫರ್ನ ರೆಸಿಡೆನ್ಸಿ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ೫ ಕಿ ಮಿ ಮತ್ತು ರೈಲು ನಿಲ್ದಾಣದಿಂದ ೨ ಕಿ ಮಿ ದೂರದಲ್ಲಿದೆ. ಒಟ್ಟು ೫೨ ಆರಾಮದಾಯಕ ಮನಮೋಹಕ ಕೊಠಡಿಗಳು ಹಾಗೂ ಸೂಟಗಳಿದ್ದು, ಮಲ್ಟೀಕ್ಯುಸಿನ್ ರೆಸ್ಟೋರೆಂಟ, ಪೂಲಸೈಡ್ ಬಾರ, ಮತ್ತು ಕಾನ್ಫರೆನ್ಸಿಂಗ, ಬ್ಯಾಂಕ್ವೇಟ್‌ಗಳ ಸೌಲಭ್ಯವನ್ನು ಹೊಂದಿದೆ ಎಂದರು.

administrator

Related Articles

Leave a Reply

Your email address will not be published. Required fields are marked *