ಹು.ಧಾ.ಪಾಲಿಕೆ ಚುನಾವಣೆ ಪೂರ್ವಸಿದ್ದತಾ ಸಭೆ
ಹುಬ್ಬಳ್ಳಿ: ಮಹಾನಗರದಿಂದ ಮೆಗಾ ಸಿಟಿಗೆ ಎಂಬ ಬಿಜೆಪಿ ಘೋಷಣೆ ಮಾಡಿತ್ತು. ಅದರಂತೆ ಈಗ ಅಭಿವೃದ್ಧಿ ದಿಕ್ಕಿನಲ್ಲಿ ಸಾಗುತ್ತಿದೆ. ಕೇಂದ್ರ ದಿಂದ ಅತೀ ಹೆಚ್ಚು ಅನುದಾನವನ್ನು ಜಿಲ್ಲೆಗೆ ತರಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಇಲ್ಲಿಯ ಗೋಕುಲ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ನಲ್ಲಿ ಮಹಾನಗರ ಪಾಲಿಕೆಯ ಪೂರ್ವಸಿದ್ಧತಾ ಸಭೆಗೆ ಹಿರಿಯ ಬಿಜೆಪಿ ನಾಯಕರಿಗೆ ಪುಷ್ಪಗಳ ಸಲ್ಲಿಸಿ ಚಾಲನೆ ನೀಡಿ ಮಾತನಾಡಿದರು.
ಹು-ಧಾ ಮಹಾನಗರದ ಅಭಿವೃದ್ಧಿ ಕಾರ್ಯಗಳು ಹತ್ತು ಹಲವಾರು ಆಗಿವೆ. ಇನ್ನೂ ಕೆಲವು ಕಾರ್ಯ ನಿರಂತರದಲ್ಲಿ ಇವೆ. ಪಕ್ಷ ಶಿಸ್ತಿನ ಪಕ್ಷವಾಗಿದೆ. ಇಲ್ಲಿ ಕಾರ್ಯಕರ್ತರೆ ನಾಯಕರು, ಅಶಿಸ್ತಿನಿಂದ ವರ್ತಿಸಿದರೆ ಪಕ್ಷ ಯಾವತ್ತು ಕ್ಷಮಿಸುವುದಿಲ್ಲ. ಇಲ್ಲಿಯ ಕಾರ್ಯಕರ್ತರು ಆ ರೀತಿ ಮಾಡಲ್ಲ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಬಿಜೆಪಿ ರಾಜ್ಯಧ್ಯಕ್ಷ ನಳಿನಕುಮಾರ ಕಟಿಲು ಮಾತನಾಡಿ, ಹು-ಧಾ ವೆಂದರೆ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಮತ್ತು ಹಿರಿಯರಾದ ಜಗದೀಶ ಶೆಟ್ಟರ ಇದ್ದಹಾಗೆ. ನಗರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಮಾಡಿದ್ದಾರೆ ಎಂದರು.
ಬಿಜೆಪಿ ಪಕ್ಷ ವೆಂದರೆ ಸರ್ವವ್ಯಾಪಿ ಸರ್ವಪಕ್ಷವಾಗಿದೆ. ಈ ಪಕ್ಷದಲ್ಲಿ ಕಾರ್ಯಕರ್ತರೆ ನಾಯಕರು ಅವರಿಗೆ ಸಿಟು ಕೇಳುವ ಹಕ್ಕುಯಿದೆ ಕೇಳಿ ಆದರೆ ನಮ್ಮ ಪಕ್ಷದಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡವು ಹಕ್ಕು ಪಕ್ಷಕ್ಕೆ ಇದೆ ಎಂದು ಹೇಳಿದರು.
ಒಗ್ಗಟ್ಟಿನ ಕೆಲಸಮಾಡಿದರೆ ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡಬೇಕು. ಜನರ ಮಧ್ಯದಲ್ಲಿ ಕೆಲಸಮಾಡಿ.ಮನೆ ಮನೆಗೂ ಹೋಗಿ ಮತದಾರರ ಬೇಡಿಕೋಳಬೇಕು ಅಂದಾಗ ಮಾತ್ರ ಪಕ್ಷದ ಬಹುತದಿಂದ ಗೆಲ್ಲುತ್ತದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಹೇಳಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಮಾತನಾಡಿ, ಹು-ಧಾ ಮಹಾನಗರ ಪಾಲಿಕೆ ಎರಡು ಬಾರಿ ಗೆದ್ದಿದ್ದೇವೆ ಈಗ ಮೂರನೇ ಬಾರಿಯು ಗೆದ್ದು ಪಾಲಿಕೆಯ ಮೇಲೆ ಪಕ್ಷದ ಧ್ವಜ ಹಾರಿಸುತ್ತೇವೆ ಎಂದು ಪಕ್ಷದ ಎಲ್ಲ ಹಿರಿಯನಾಯಕರು ಕಂಕಣಬದ್ದರಾಗಿದ್ದಾರೆ ಅದೇ ರೀತಿ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಬದ್ದರಾಗಬೇಕು ಈ ಬಾರಿ ಸುಮಾರು 65 ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಮತ್ತು ಜಿಲ್ಲಾಧ್ಯಕ್ಷ ಅರವಿಂದ ಬೆಲ್ಲದ ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ, ಲಿಂಗರಾಜ ಪಾಟೀಲ, ಮಲ್ಲಿಕಾರ್ಜುನ ಸಾಹುಕಾರ, ನಾಗೇಶ ಕಲಬುರ್ಗಿ, ಪ್ರಭು ನವಲಗುಂದಮಠ, ದತ್ತ ಮೂರ್ತಿ ಕುಲಕರ್ಣಿ, ಸಂತೋಷ ಚೌವ್ಹಾಣ ಇದ್ದರು.
ನಾಡಿದ್ದು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ನಾಡಿದ್ದು, ಗುರುವಾರ ಪ್ರಕಟಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು
ವಾರ್ಡ್ ಅಧ್ಯಕ್ಷರ ಮೂಲಕ ಬರುವ ಆಕಾಂಕ್ಷಿಗಳ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು. ಆಕಾಂಕ್ಷಿಗಳು ಇಂದು ಸಂಜೆಯೊಳಗೆ ಅರ್ಜಿಗಳನ್ನು ವಾರ್ಡ್ ಅಧ್ಯಕ್ಷರಿಗೆ ಸಲ್ಲಿಸಬೇಕು.ಸ್ವೀಕರಿಸಿದ ಅರ್ಜಿಯನ್ನು ವಾರ್ಡ್ ಅಧ್ಯಕ್ಷರು ಅರ್ಜಿಗಳನ್ನು ಮಂಡಲ ಅಧ್ಯಕ್ಷರಿಗೆ ನೀಡಬೇಕು. ಅವರು ಅರ್ಜಿಗಳನ್ನು ಸ್ಕಿçÃನಿಂಗ್ ಕಮಿಟಿಗೆ ನೀಡುತ್ತಾರೆ. ನಾಡಿದ್ದು ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗುವುದು ಎಂದರು.
ಬಿಜೆಪಿಯಲ್ಲಿ ಟಿಕೆm ಗೆ ಅರ್ಜಿ ಪಡೆಯಲು ಶುಲ್ಕ ಪಡೆಯಲಾಗುತ್ತಿಲ್ಲ. ಕಾಂಗ್ರೆ¸ ನಂತೆ ಅರ್ಜಿಯಿಂದ ಹಣ ಮಾಡುವ ಅನಿವಾರ್ಯತೆ ನಮ್ಮ ಪಕ್ಷಕ್ಕೆ ಇಲ್ಲ ಎಂದ ಅವರು, ಪಾಲಿಕೆ ಚುನಾವಣೆಗೆ ಭಾರತೀಯ ಜನತಾ ಪಕ್ಷದಿಂದ ಪ್ರತ್ಯೇಕವಾಗಿ ಸಿದ್ಧತೆ ಅಂತ ಏನು ಇಲ್ಲ. ಮೋದಿ ನೇತೃತ್ವದ ಬಿಜೆಪಿ ಸಂಘಟನಾತ್ಮಕವಾದ ಪಕ್ಷ ಆಗಿರುವ ಹಿನ್ನೆಲೆಯಲ್ಲಿ ಮೊದಲಿನಿಂದಲೂ ನಮ್ಮಲ್ಲಿ ಸಿದ್ದತೆ ಇದೆ ಎಂದರು.
ಅಫ್ಘಾನಿಸ್ತಾನದ ಪರಿಸ್ಥಿತಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅಫಘಾನಿಸ್ಥಾನದ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಅಲ್ಲಿಯ ಭಾರತೀಯ ನಿವಾಸಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಭಾರತೀಯರನ್ನು ರಕ್ಷಿಸಲು ಕೇಂದ್ರ ಸರ್ಕಾರ ಬದ್ಧವಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತೀಯರ ರಕ್ಷಣೆಯ ಪ್ರಯತ್ನದಲ್ಲಿದ್ದೇವೆ. ಅಲ್ಲಿಯ ಜನರ ಜೀವನ ಕಾಪಾಡುವುದು ಅತ್ಯವಶ್ಯಕವಿದೆ. ಅಮೇರಿಕಾ ಸರ್ಕಾರ ಜನರ ರಕ್ಷಣೆ ಬಗ್ಗೆ ಕಾಳಜಿ ತೋರಬೇಕೆಂದರು.