ಧಾರವಾಡ: ಸರಕಾರ ಎಲ್ಲ ವಿದ್ಯಾರ್ಥಿಗಳಿಗೆ ಕೊರೊನಾ ಲಸಿಕೆ ಹಾಕಿದ ನಂತರ ಉನ್ನತ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ತೀರ್ಮಾನಿಸಿದ ಹಿನ್ನೆಲೆ ಯಲ್ಲಿ ನಗರದ ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನಲ್ಲಿ ಜು. ೨ ಮತ್ತು ೩ ರಂದು ಲಸಿಕಾ ಅಭಿಯಾನ ಆಯೋಜಿಸಿತ್ತು.
ಅಭಿಯಾನದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ೬೦೦ ಕ್ಕೂ ಹೆಚ್ಚು ಡೋಸ್‌ಗಳನ್ನು ನೀಡಲಾಯಿತು. ಎಸ್‌ಡಿಎಂಇ ಸೊಸೈಟಿ ಕಾರ್ಯದರ್ಶಿ ಜೀವಂಧರ್ ಕುಮಾರ್ ಮತ್ತು ಪ್ರಾಂಶುಪಾಲ ಕೆ. ಗೋಪಿನಾಥ್ ಅವರ ನೇತೃತ್ವದಲ್ಲಿ ಅಭಿಯಾನ ನಡೆಯಿತು.
ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಡಾ.ಎಸ್.ಎಂ.ಹೊನಕೇರಿ, ಡಾ.ತನುಜಾ ಮತ್ತು ಇತರರು ಭಾಗವಹಿಸಿದ್ದರು. ಪ್ರೊ.ವಾಸುದೇವ್ ಪರ್ವತಿ, ವಿನಾಯಕ್ ಮಿಸ್ಕಿನ್, ಸುನಿಲ್ ಮನ್ಸೂರ್ ಮತ್ತು ಬಿ.ಮಂಜು ನಾಥ್ ಇನ್ನಿತರರಿದ್ದರು.