ಹುಬ್ಬಳ್ಳಿ-ಧಾರವಾಡ ಸುದ್ದಿ
ಕೇಂದ್ರ, ರಾಜ್ಯ ಸರಕಾರದಿಂದ ರೈತರ ಶೋಷಣೆ: ಲಂಬಾ

ಕೇಂದ್ರ, ರಾಜ್ಯ ಸರಕಾರದಿಂದ ರೈತರ ಶೋಷಣೆ: ಲಂಬಾ

ನವಲಗುಂದ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ರೈತರ ಶೋಷಣೆ ಮಾಡುತ್ತಿದ್ದು, ನೇಗಿಲಯೋಗಿಯ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ದೆಹಲಿಯ ರೈತ ಸಂಘಟನೆ ಮುಖ್ಯಸ್ಥ ದೀಪಕ್ ಲಂಬಾ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರೈತ ಸೇನೆ, ರೈತ ಸೇನೆ ಕರ್ನಾಟಕ, ಉತ್ತರ ಕರ್ನಾಟಕ ರೈತ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ, ಕನ್ನಡಪರ ಸಂಘಟನೆಗಳು ಸೇರಿದಂತೆ ಇನ್ನಿತರ ರೈತ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡ ರೈತ ಹುತಾತ್ಮ ದಿನಾಚರಣೆಯಲ್ಲಿ ದಿ.ಬಾಬಾಗೌಡ ಪಾಟೀಲರ ವೇದಿಕೆಯಲ್ಲಿ ಮಾತನಾಡಿದರು.
ಈ ಭಾಗದ ಜೀವನಾಡಿಯಾಗಬಲ್ಲ ಮಹದಾಯಿ ಯೋಜನೆಯನ್ನು ಇನ್ನೂ ಆರಂಭಿಸದಿರುವುದು ನಿಜಕ್ಕೂ ವಿಷಾದಕರ ಎಂದರಲ್ಲದೇ ಕೂಡಲೇ ಯೋಜನೆ ಅನುಷ್ಠಾನಗೊಳಿಸಲು ಆಗ್ರಹಿಸಿದರು.
ಪಂಜಾಬಿನ ರೈತ ಹರ್ನೆಕ್ ಸಿಂಗ್, ಕೋಡಿಹಳ್ಳಿ ಚಂದ್ರಶೇಖರ, ಕುರುಬೂರು ಶಾಂತಕುಮಾರ ಸೇರಿದಂತೆ ಇನ್ನಿತರ ನಾಯಕು ಸಹ ಮಾತನಾಡಿದರು.
ರೈತ ವಿರೋಧಿ ಕೃಷಿ ಕಾಯಿದೆ ರದ್ದುಗೊಳಿಸುವುದು, ಮಹದಾಯಿ ಕಳಸಾ ಬಂಡೂರಿ ಯೋಜನೆ ತ್ವರಿತಗತಿಯಲ್ಲಿ ಜಾರಿಗೊಳಿಸುವುದು, ರೈತರ ಮೇಲೆ ಹಾಕಿರುವ ಎಲ್ಲ ಪ್ರಕರಣ ಕೈಬಿಡುವುದು, ಹೋರಾಟದಲ್ಲಿ ಪ್ರಾಣತೆತ್ತ ರೈತರನ್ನು ಹುತಾತ್ಮರಾದರು. ಆದರೂ ಸಹ ಇದುವರಗೆ ರೈತರ ಸಮಸ್ಯೆಗಳಿಗೆ ಸರ್ಕಾರಗಳು ಕಡೆಗಣಿಸಲಾಗುತ್ತದೆ. ಇದೇ ವೇಳೆ ಕಬ್ಬು ಬೆಳೆಗಾರರ ಬಾಕಿ ಪಾವತಿಗೆ ತಕ್ಷಣ ಕ್ರಮ ಕೈಗೊಳ್ಳುವುದು ಆಗ್ರಹಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲು ತೀರ್ಮಾನ ಕೈಗೊಳ್ಳಲಾಯಿತು.
ಕರ್ನಾಟಕ ರೈತ ಸೇನೆಯ ಮುಖಂಡ ಶಂಕರ ಅಂಬಲಿ, ಶಂಕರಗೌಡ ಪಾಟೀಲ್, ಪ್ರವೀಣ ಯರಗಟ್ಟಿ, ಸೇರಿದಂತೆ ಮುಂತಾದವರು ಇದ್ದರು.

administrator

Related Articles

Leave a Reply

Your email address will not be published. Required fields are marked *