ಹುಬ್ಬಳ್ಳಿ: ಕೊರೊನಾದಿಂದ ಗುಣಮುಖರಾದ ನಂತರ ಸಿವಿಎಂ ಎಂಬ ಇನ್ನೊಂದು ವೈರಸ್ ಸಾರ್ವಜನಿಕರಲ್ಲಿ ಕಂಡು ಬರುತ್ತಿದ್ದು, ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಹೆಚ್ಚಾಗಿ ಈ ಸೋಂಕು ತಗಲುತ್ತದೆ ಎಂದು ಕೆಎಲ್‌ಇ ಸಂಸ್ಥೆಯ ಸುಚಿರಾಯು ಆಸ್ಪತ್ರೆಯ ಡಾ. ನವೀನಕುಮಾರ ಹೊಸಳ್ಳಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ. ೧ ರಂದು ರಾಣೆಬೆನ್ನೂರಿನ ನೀಲಾ ಎಂಬ ಮಹಿಳೆ ಆಸ್ಪತ್ರೆಯಲ್ಲಿ ದಾಖಲಾದಾಗ ಪ್ರಯೋಗದಿಂದ ಈ ಸೋಂಕು ಇರುವುದು ಕಂಡು ಬಂದಿದೆ. ಜಿಲ್ಲೆಯಲ್ಲಿ ಇದು ಮೊದಲ ಪ್ರಕರಣವಾಗಿದ್ದು, ಸುಚಿರಾಯು ಆಸ್ಪತ್ರೆ ವೈದ್ಯರು ಸೂಕ್ತ ಚಿಕಿತ್ಸೆ ನೀಡಿ ಮೂರುವಾರದಲ್ಲಿ ಸಂಪೂರ್ಣ ಗುಣಮಖರಾಗುವಂತೆ ಮಾಡಿ ಯಶಸ್ಸು ಕಂಡಿರುವುದಾಗಿ ಹೇಳಿದರು.
ಡಾ. ಆನಂದ ತೀರ್ಥಮಠ ಮಾತನಾಡಿ, ಈ ಸೋಂಕಿನ ಮುಖ್ಯ ಲಕ್ಷಣವೆಂದರೆ, ಹೊಟ್ಟೆ ಕೊರಳಿನಿಂದ ರಕ್ತಸ್ರಾವವಾಗುವುದಾಗಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಡಾ. ರೋಹಿತ ರಮೇಶ ಸೇರಿದಂತೆ ಇತರರಿದ್ದರು.