ಧಾರವಾಡ: ತಲ್ವಾರ್ನಿಂದ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನ ವಿರುದ್ಧ ಕಾನೂನು ಕ್ರಮ ಜರುಗಿಸಲು ಪೊಲೀಸರು ಮುಂದಾಗಿದ್ದಾರೆ.
ಸಲಕಿನಕೊಪ್ಪದ ಸಾಯಿ ದಾಬಾ ಮಾಲೀಕನ ಸಹೋದರ ಪ್ರವೀಣ ಸಂದಿಮನಿ, ತಮ್ಮದೇ ದಾಬಾದಲ್ಲಿ ತಲ್ವಾರ್ನಿಂದ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿಕೊಂಡಿದ್ದನು. ಅಲ್ಲದೇ ತಲ್ವಾರ್ನಿಂದ ಕೇಕ್ ಕತ್ತರಿಸಿದ ದೃಶ್ಯವನ್ನು ವಿಡೀಯೋ ಮಾಡಿ ಹರಿಬಿಟ್ಟಿದ್ದನು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗುತ್ತಿದ್ದಂತೆ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಘಟನೆಯನ್ನು ಪರಿಶೀಲಿಸಿ, ಶಶ್ತ್ರಾಸ್ತ್ರ ಕಾಯ್ದೆಯಡಿ ಯುವಕ ವಿರುದ್ಧ ಕಾನೂನುರೀತ್ಯ ಕ್ರಮ ಜರುಗಿಸುವುದಾಗಿ ಗ್ರಾಮೀಣ ಸಿಪಿಐ ಶ್ರೀಧರ ಸತಾರೆ ತಿಳಿಸಿದ್ದಾರೆ.